ಬೈಕ್​ಗೆ ಡಿಕ್ಕಿ ಹೊಡೆದು ವಾಹನದೊಂದಿಗೆ ಚಾಲಕ ಎಸ್ಕೇಪ್​! ಹಿಟ್ & ರನ್​ ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 28, 2023 SHIVAMOGGA NEWS’ 

ಶಿವಮೊಗ್ಗ ಜಿಲ್ಲೆ ಹೊಸನಗರ (Hosanagar) ತಾಲ್ಲೂಕು ರಿಪ್ಪನ್​ಪೇಟೆಯ ತೀರ್ಥಹಳ್ಳಿ ರಸ್ತೆಯ ಗುಡ್ ಶೆಫರ್ಡ್ ಚರ್ಚ್ ಮುಂಭಾಗದಲ್ಲಿ ಅಪಘಾತ ಸಂಭವಿಸಿದೆ. ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಬೈಕ್ ಸವಾರನಿಗೆ ಗಂಭೀರ ಗಾಯಗೊಂಡಿದ್ದಾನೆ. ಬರುವೆ ಗ್ರಾಮದ ನಿವಾಸಿ ಲೋಕೇಶ್ (48) ಗಾಯಗೊಂಡವರು. 

ಚರ್ಚ್ ಮುಂಭಾಗದಲ್ಲಿ ಅಪರಿಚಿತ ವಾಹನವೊಂದು  ಬೈಕ್ ಗೆ ಡಿಕ್ಕಿ ಹೊಡೆದಿದೆ.  ಹಿಂಬದಿಯಿಂದ ವಾಹನವನ್ನು ಡಿಕ್ಕಿ ಹೊಡೆಸಿ ಚಾಲಕ ಪರಾರಿಯಾಗಿದ್ದಾನೆ. ಘಟನೆಯಲ್ಲಿ ಬೈಕ್ ಸವಾರನ ತಲೆಗೆ ತೀವ್ರ ಪೆಟ್ಟಾಗಿದೆ. ನಡು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದರೂ ಆತನ ಸಹಾಯಕ್ಕೆ ಅಲ್ಲಿದ್ದವರು ಮುಂದಾಗಿಲ್ಲ. ಈ ನಡುವೆ ಸ್ಥಳೀಯರೊಬ್ಬರು ಆತನ ನೆರವಿಗೆ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. 

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಗೆ ರವಾನಿಸಲಾಗಿದೆ. ಸ್ಥಳಕ್ಕೆ ಪಿಎಸ್‌ಐ ಪ್ರವೀಣ್ ಎಸ್ ಪಿ ಭೇಟಿ ನೀಡಿ ವಿಚಾರಣೆ ನಡೆಸಿದ್ದು,  ಕೇಸ್  ದಾಖಲಿಸಿದ್ದಾರೆ.


ಇನ್ನಷ್ಟು ಸುದ್ದಿಗಳು 

  1. ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ! ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ! ಎಲ್ಲೆಲ್ಲಿಗೆ ಯಾರ್ಯಾರು ಓದಿ

  2. 2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್​ ಬಗ್ಗೆ ಎಸ್​ಪಿ ಬ್ರೀಫಿಂಗ್​!

  3. ಹಿಂದೂ ಮಹಾಸಭಾದ ಮೊದಲ ಗಣಪತಿ ಪ್ರತಿಷ್ಟಾಪನೆಯಾಗಿದ್ದು ಶಿವಮೊಗ್ಗದಲ್ಲೆ! ಇಲ್ಲಿದೆ ನೋಡಿ ಇತಿಹಾಸದ ವಿನಾಯಕನ ದೃಶ್ಯಗಳು!

  4. ಹಿಂದೂ ಮಹಾಸಭಾ ಗಣಪತಿಗೆ ಸರ್ವಧರ್ಮ ‘ಸೌಹಾರ್ದ’ ಹೂವಿನ ಹಾರ!


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor