ಟ್ರೈನ್​ ಬರುವಾಗಲೇ ಹಳಿ ದಾಟಲು ಮುಂದಾದ ಶಿಕ್ಷಕ! ಗೂಡ್ಸ್​ ರೈಲಿನಡಿ ನಡೀತು ಅದೃಷ್ಟ ಪರೀಕ್ಷೆ! ವಿಡಿಯೋ ನೋಡಿ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  

ಹಳಿ ದಾಟುತ್ತಿದ್ದ ವೇಳೆ ಟ್ರೈನ್ ಬಂದಿದ್ದರಿಂದ ಅಲ್ಲಿಯೇ ಮಲಗಿ ಅಪಾಯದಿಂದ ಶಿಕ್ಷಕರೊಬ್ಬರು ಪಾರಾಗಿದ್ದಾರೆ. ದಾವಣಗೆರೆಯಲ್ಲಿ ಈ ಘಟನೆ ಇವತ್ತು ಸಂಭವಿಸಿದೆ. ಗೂಡ್ಸ್​ ಟ್ರೈನ್​ವೊಂದು ಬರುವಾಗಲೇ ಶಿಕ್ಷಕರೊಬ್ಬರು ಹಳಿ ದಾಟಲು ಹೋಗಿದ್ದಾರೆ. ಹಳಿದಾಟುವಷ್ಟರಲ್ಲಿ ಟ್ರೈನ್​ ಬಂದು ಬಿಟ್ಟಿದೆ. ತಕ್ಷಣವೇ ಶಿಕ್ಷಕರು ಹಳಿ ಮೇಲೆ ಮಲಗಿಬಿಟ್ಟಿದ್ದಾರೆ. ಟ್ರೈನ್​ ಅವರಿಂದ ಮುಂದಕ್ಕೆ ಸಾಗಿ ನಿಂತಿದೆ. ಕೆಲಹೊತ್ತು ಅಲ್ಲಿಯೇ ಮಲಗಿದ್ದ ಶಿಕ್ಷಕ ಬಳಿಕ ಟ್ರೈನ್​ ನಿಂತಿರುವುದನ್ನ ಖಾತರಿಪಡಿಸಿಕೊಂಡು ರೈಲಿನ ಅಡಿಯಿಂದ ಹೊರಕ್ಕೆ ಬಂದಿದ್ದಾರೆ. 

ಶಾಲೆಯೊಂದರ ಮುಖ್ಯೋಪಾಧ್ಯಾಯರಾಗಿರುವ ಶಿವಕುಮಾರ್  ಎಂಬವರು ಅಪಾಯದಿಂದ  ಪಾರಾಗಿ ಬಂದಿರುವ ವ್ಯಕ್ತಿ. ಇನ್ನೂ ಶಿವಕುಮಾರ್ ಹಳಿ ಮೇಲೆ ಮಲಗಿರುವುದನ್ನ ಗಮಿಸಿದ  ರೈಲ್ವೆ ಸಿಬ್ಬಂದಿ ಗೂಡ್ಸ್ ರೈಲನ್ನು ನಿಲ್ಲಿಸುವಂತೆ ಸಿಗ್ನಲ್ ನೀಡಿ ನಿಲ್ಲಿಸಿದ್ರು. ಬಳಿಕ ರೈಲ್ವೇ ರಕ್ಷಣಾ ಪಡೆ ಶಿವಕುಮಾರ್​ರನ್ನ ರಕ್ಷಿಸಿ ಅವರನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. 


ಇನ್ನಷ್ಟು ಸುದ್ದಿಗಳು 

 


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor