KARNATAKA NEWS/ ONLINE / Malenadu today/ Sep 12, 2023 SHIVAMOGGA NEWS
ಬೀದಿ ನಾಯಿ ವಿಚಾರಕ್ಕೆ ಕಿರಿಕ್!
ಬೀದಿ ನಾಯಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿ ಪೊಲೀಸ್ ಕಂಪ್ಲೆಂಟ್ ಆದ ಘಟನೆ ಶಿವಮೊಗ್ಗದ ಆರ್ಎಂಎಲ್ ನಗರದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ಬೀದಿ ನಾಯಿಗೆ ಅನ್ನ ಹಾಕುತ್ತಿದ್ದರಂತೆ. ಆ ನಾಯಿಯು ಅಲ್ಲಿಯೇ ಸುತ್ತಾಡುತ್ತ, ಅನ್ನಹಾಕಿದವರ ಪಕ್ಕದ ಮನೆಯ ನಿವಾಸಿಯ ಕಾರಿನ ಚಕ್ರದ ಮೇಲೆ ಮೂತ್ರ ಮಾಡಿದೆ. ಈ ವಿಚಾರಕ್ಕೆ ನೆರೆಮನೆ ನಿವಾಸಿ ನಿಮ್ಮ ನಾಯಿಯಿಂದ ಇಷ್ಟೆಲ್ಲಾ ಆಗುತ್ತಿದೆ ಎಂದು ಹಲ್ಲೆ ಮಾಡಿದ್ದಾರೆ ಎಂಬುದು ಆರೋಪ. ಮಾರಣಾಂತಿಕ ಹಲ್ಲೆ ಸಂಬಂಧ ಕಾರಿನ ಮಾಲೀಕ ಹಾಗೂ ಇತರರ ವಿರುದ್ಧ ದೂರುದಾಖಲಾಗಿದ್ದು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬಸ್ ನಿಲ್ದಾಣದಲ್ಲಿ ಕಳುವಾಯ್ತು ಪರ್ಸ್!
ಮದುವೆ ಸಮಾರಂಭಕ್ಕೆ ತೆರಳಲು ಕೆಎಸ್ ಆರ್‌ಟಿಸಿ ಬಸ್ ಹತ್ತಿದ್ದ ವೇಳೆ ಮಹಿಳೆಯೊಬ್ಬರ ಪರ್ಸ್ ಕಳುವಾದ ಘಟನೆ ಶಿವಮೊಗ್ಗದ ಬಸ್ ನಿಲ್ದಾಣದಲ್ಲಿ ನಡೆದಿದೆ. ತಮ್ಮ ಸ್ನೇಹಿತೆಯೊಬ್ಬರಿಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರರು, ಜನರ ರಶ್ ನಡುವೆ ಬಸ್ ಹತ್ತಿ , ಸೀಟು ಹಿಡಿದಿದ್ದರು. ಆನಂತರ ಸ್ನೇಹಿತೆ ಬರದ ಹಿನ್ನೆಲೆ ವಾಪಸ್ ಬಸ್ನಿಂದ ಇಳಿದಿದ್ದಾರೆ. ಅಷ್ಟರಲ್ಲಿ ಅವರ ಪರ್ಸ್ ಮಾಯವಾಗಿತ್ತು. 2 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಹಾಗೂ 22 ಸಾವಿರ ಕ್ಯಾಶ್ ಇದ್ದ ಪರ್ಸ್ನ್ನು ಯಾರೋ ಕದ್ದೊಯ್ದಿದ್ದರು. ಸದ್ಯ ಈ ಸಂಬಂಧ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನಷ್ಟು ಸುದ್ದಿಗಳು
ಬಾರ್ನಲ್ಲಿ ಎಣ್ಣೆ ಕೊಡ್ಲಿಲ್ಲ ಎಂದು ಸಿಬ್ಬಂದಿಯನ್ನ ಅಟ್ಟಾಡಿಸಿ ಹಲ್ಲೆ! ಬಿಹೆಚ್ ರೋಡ್ನಲ್ಲಿ ನಿನ್ನೆ ನಡೆದಿದ್ದೇನು?
ಸಚಿವರ ಶಾಕ್/ 48 ಗಂಟೆಯಲ್ಲಿ ಬದಲಾಯ್ತು ಶಿವಮೊಗ್ಗ AIRPORT ನಲ್ಲಿದ್ದ ಈ ವ್ಯವಸ್ಥೆ!