ಶಿವಮೊಗ್ಗ: ನಗರಾಭಿವೃದ್ಧಿಪ್ರಾಧಿಕಾರದ (ಸೂಡಾ) ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಈ ಹುದ್ದೆಗೆ ಪರಿ ಗಣಿಸಬೇಕೆಂದು ಜಿಲ್ಲಾ ಕಾಂಗ್ರೆಸ್ ಹಿರಿಯ ಮುಖಂಡ ಮರಿಯಪ್ಪ ಪ್ರಧಾನ ಕಾರ್ಯದರ್ಶಿ ಹಾಗೂ ಆಗ್ರಹಿಸಿದ್ದಾರೆ.ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ನಿರಂತರವಾಗಿ ಬೆಂಬಲಿ ಸುತ್ತಾ ಬಂದಿರುವ ಅವರು, ಪಕ್ಷದ ಸಂಘಟನೆಯಲ್ಲಿ ತೊಡಗಿಸಿ ಸಕ್ರಿಯವಾಗಿ ಕೊಂಡಿದ್ದಾರೆ. ಶಿವಮೊಗ್ಗ ಹಾಗೂ ರಾಜ್ಯಾದ್ಯಂತ ಕ್ರಿಶ್ಚಿಯನ್ ಸಮುದಾಯವು ದಶಕಗಳಿಂದ ಕಾಂಗ್ರೆಸ್ ಪಕ್ಷದ ಅಚಲ ಬೆಂಬಲಿಗ ಹಾಗೂ ಭದ್ರ ಮತಬ್ಯಾಂಕ್ ನಿಂತಿದೆ.
SUDA Post ಸಮಾಜ ಸೇವೆ ಮತ್ತು ಸಂಘಟನಾ ಚತುರತೆ
ಪ್ರಥಮ ದರ್ಜೆ ಗುತ್ತಿಗೆದಾರರಾಗಿರುವ ಮರಿಯಪ್ಪ ಅವರು ಮಹಾನಗರ ಪಾಲಿಕೆಯ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಅತ್ಯಂತ ನಿಷ್ಠೆಯಿಂದ ಪೂರ್ಣಗೊಳಿಸಿದ ಅನುಭವ ಜಿಲ್ಲಾ ಹೊಂದಿದ್ದಾರೆ. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಯಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿ ಸುವಲ್ಲಿ ಇದರೊಂದಿಗೆ ಪ್ರಮುಖ ಪಾತ್ರ ವಹಿಸಿ ದ್ದಾರೆ. ಅಲ್ಲದೆ, ಲಾರಿ ಮಾಲೀಕರ ಸಂಘದ ಸದಸ್ಯರಾಗಿ ಹಾಗೂ ನಗರದ ಹಲವು ಸಾಮಾಜಿಕ, ಧಾರ್ಮಿಕ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ಪ್ರಮುಖವಾಗಿ ಶಿವಮೊಗ್ಗದ ಐತಿಹಾಸಿಕ ‘ಸೇಕ್ರೆಡ್ ಹಾರ್ಟ್ ಚರ್ಚ್’ನಲ್ಲಿ ಹಲವು ವರ್ಷ ಗಳಿಂದ ಸಕ್ರಿಯ ಸದಸ್ಯರಾಗಿ, ಚಚ್ ೯ ವಿವಿಧ ಸಮಿತಿಗಳಲ್ಲಿ ಮುಂಚೂಣಿ ನಾಯಕರಾಗಿ ಸೇವೆ ಸಲ್ಲಿಸುತ್ತಾ ಸಮುದಾಯದ ವಿಶ್ವಾಸಗಳಿಸಿದ್ದಾರೆ.
ವರಿಷ್ಠರ ಭೇಟಿ, ಸುದೀರ್ಘ ಮನವಿ
ತಮಗೆ ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ (ಸೂಡಾ) ಅಧ್ಯಕ್ಷ ಸ್ಥಾನ ನೀಡಬೇಕೆಂದು ಕೋರಿ ಮರಿಯಪ್ಪ ಅವರು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ರಾಜ್ಯದ ಹಿರಿಯ ಕ್ರಿಶ್ಚಿಯನ್ ನಾಯಕ, ಸಚಿವ ಕೆ.ಜೆ. ಜಾರ್ಜ್ ಹಾಗೂ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಧನಾತ್ಮಕ ಸ್ಪಂದನೆ ದೊರೆತಿದೆ.
ಮುಂದಿನ ಹಂತವಾಗಿ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಖುದ್ದಾಗಿ ಭೇಟಿಯಾಗಲು ಕ್ರಿಶ್ಚಿಯನ್ ಸಮುದಾಯದ ಪ್ರಮುಖ ನಾಯಕರ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳುವುದಾಗಿ ಮರಿಯಪ್ಪ ತಿಳಿಸಿದ್ದಾರೆ. ದಶಕಗಳ ನಿಸ್ವಾರ್ಥ ಸೇವೆ ಹಾಗೂ ಸಮುದಾಯದ ಹಿತದೃಷ್ಟಿಯಿಂದ ಈ ಬಾರಿ ತಮಗೆ ಸೂಡಾ ಅಧ್ಯಕ್ಷ ಪಟ್ಟ ಒಲಿಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.ಸಮುದಾಯವನ್ನು ಕೇವಲ ಓಟ್ ಬ್ಯಾಂಕ್ ಆಗಿ ನೋಡದೆ, ಅರ್ಹ ನಾಯಕರಿಗೆ ಸೂಕ್ತ ಅಧಿಕಾರಹಾಗೂ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಮರಿಯಪ್ಪ ಆಗ್ರಹಿಸಿದ್ದಾರೆ.
