ಪೊಲೀಸ್ ಚೌಕಿ ನಿರ್ಮಿಸುವಂತೆ ಎಸ್​ಪಿ ಮಿಥುನ್​ ಕುಮಾರ್​ಗೆ ಮನವಿ! ಕಾರಣವೇನು?

KARNATAKA NEWS/ ONLINE / Malenadu today/ Sep 5, 2023 SHIVAMOGGA NEWS 

ಶಿವಮೊಗ್ಗ ನಗರದ ಹೊಸಮನೆ ಹೊಸಮನೆ ಬಡಾವಣೆಯಲ್ಲಿ  ಪೊಲೀಸ್ ಚೌಕಿಯೊಂದನ್ನ ನಿರ್ಮಿಸಬೇಕು ಎಂದು ಶಿವಮೊಗ್ಗ ಮಹಾನಗರ  ಪಾಲಿಕೆ (Shimoga Municipal Corporation) ಪ್ರತಿಪಕ್ಷ ನಾಯಕಿ ರೇಖಾ ರಂಗನಾಥ್  ಎಸ್ಪಿ ಜಿ.ಕೆ.ಮಿಥುನ್‌ಕುಮಾರ್  (SP G.K.Mithunkumar)ಅವರಿಗೆ ಮನವಿ ಸಲ್ಲಿಸಿದ್ಧಾರೆ. 

ಹೊಸಮನೆ ಬಡಾವಣೆ ಹಾಗೂ ಶರಾವತಿ ನಗರದ ನಾಗರಿಕರು ಹಲವು ವರ್ಷಗಳಿಂದ ಪೊಲೀಸ್ ಹೊರಠಾಣೆ ನಿರ್ಮಿಸುವಂತೆ  ಒತ್ತಾಯಿಸುತ್ತಿದ್ದಾರೆ. ಆದರೆ ಇದುವರೆಗೂ ಬೇಡಿಕೆ ಈಡೇರಿಲ್ಲ. ಈ  ಬಡಾವಣೆಗಳಲ್ಲಿ 26 ಸಾವಿರ ಜನರು ವಾಸಿಸ್ತಿದ್ದಾರೆ,.  ಸಾಗರ ರಸ್ತೆಯಿಂದ 100 ಅಡಿ ರಸ್ತೆ ರಾಜೇಂದ್ರ ನಗರದ ವರೆಗೆ ಹಾದು ಹೋಗುವ ಸರ್ವಿಸ್ ರಸ್ತೆಯಲ್ಲಿ ನಾಗಪ್ಪ ದೇವಸ್ಥಾನ ಹಾಗೂ ಮಲೆ ಮಹದೇಶ್ವರ ದೇವಸ್ಥಾನದ ಸಮೀಪ ಸರ್ಕಾರಿ ಜಾಗವಿದೆ. ಇಲ್ಲಿ ಪೊಲೀಸ್ ಚೌಕಿ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದ್ದಾರೆ. 

ಚೌಕಿ ಬೇಡಿಕೆಗೆ ಕಾರಣವೇನು?

  1. ಔಟ್‌ಪೋಸ್ಟ್ ತೆರೆಯುವುದರಿಂದ ಎರಡು ಬಡಾವಣೆಯ ನಾಗರಿಕರ ತುರ್ತು ದೂರುಗಳಿಗೆ ಪೊಲೀಸರು ಸ್ಪಂದಿಸಲು ಅನುಕೂಲವಾಗಲಿದೆ. 

  2. ಸ್ಮಾರ್ಟ್ ಸಿಟಿ ಕಾಮಗಾರಿಗಳು ಸಂಪೂರ್ಣಗೊಂಡಿದ್ದು, ರಸ್ತೆಗಳಲ್ಲಿ ಅನೇಕ ಯುವಕರು ಬೈಕ್‌ಗಳನ್ನು ಅತಿ ವೇಗವಾಗಿ ಓಡಿಸುವ ಮೂಲಕ ಸಾರ್ವಜನಿಕರಿಗೆ ಆತಂಕ ಉಂಟು ಮಾಡುತ್ತಿದ್ದಾರೆ ಇದನ್ನ ತಪ್ಪಿಸಬಹುದು

  3. ಮಾದಕ ವ್ಯಸನಿಗಳು ನಾಗರಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದು, ಈ ಭಾಗದ ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಚೌಕಿ ನಿರ್ಮಾಣ ಅವಶ್ಯಕವಾಗಿದೆ  

ಇನ್ನಷ್ಟು ಸುದ್ದಿಗಳು 


 

 

Leave a Comment