ಶ್ರಾವಣ ಶನಿವಾರ ತಂಟೆಕೋರರಿಗೆ ಶಾಕ್​ ಕೊಟ್ಟ ಪೊಲೀಸ್! ಶಿವಮೊಗ್ಗ, ಭದ್ರಾವತಿ , ಸಾಗರದಲ್ಲಿ ಜೋರು ಆಪರೇಷನ್​

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 3, 2023 SHIVAMOGGA NEWS

ಹಬ್ಬಗಳು ಸಮೀಪಿಸುತ್ತಿದ್ದಂತೆ ಶಿವಮೊಗ್ಗ ಪೊಲೀಸರು  Area Domination ವಿಶೇಷ ಗಸ್ತನ್ನು ಚುರುಕುಗೊಳಿಸಿದ್ದಾರೆ. 

ಇದಕ್ಕೆ ಪೂರಕವಾಗಿ ನಿನ್ನೆ ದಿನ ದಿನಾಂಕ: 02-09-2023 ರಂದು ಸಂಜೆ ಶಿವಮೊಗ್ಗ-ಎ ಉಪ ವಿಭಾಗ ವ್ಯಾಪ್ತಿಯ ಶಿವಮೊಗ್ಗ-ಬಿ ಉಪ ವಿಭಾಗ ವ್ಯಾಪ್ತಿಯ ಸಾಗರ ಉಪವಿಭಾಗ ವ್ಯಾಪ್ತಿಯ  ಸಾಗರದ ಟೌನ್ ಮತ್ತು ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಪೊಲೀಸ್ ಠಾಣೆಗಳ ಪೊಲೀಸ್ ನಿರೀಕ್ಷಕರು  / ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡವು  Area Domination ವಿಶೇಷ ಗಸ್ತು ನಡೆಸಿ, Public Nuisance ಮಾಡುವವರ ವಿರುದ್ಧ ಕ್ರಮ ಕೈಗೊಂಡಿದೆ. 

ಗೋಪಾಳ, ಚಾಲುಕ್ಯ ನಗರ, ಎಂಆರ್. ಎಸ್ ವೃತ್ತ, ಹೊಳೆಹೊನ್ನೂರು ವೃತ್ತ, ಎಪಿಎಂಸಿ, ಆಟೋ ಕಂಪ್ಲೆಕ್ಸ್, ಕೆಇಬಿ ವೃತ್ತ, ದುರ್ಗಿಗುಡಿ, ರಾಗಿಗುಡ್ಡ, ಹೊನ್ನಾಳಿ ರಸ್ತೆ, ಸಾಗರದ ನೆಹರು ಕ್ರೀಡಾಂಗಣ, ಆನಂದಪುರದ ರೈಲ್ವೆ ನಿಲ್ದಾಣ, ಸಾಧತ್ ಕಾಲೋನಿ, ಹನುಮಂತ ನಗರ, ಹಿರಿಯೂರಿನ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ ಪೊಲೀಸರು Area Domination ವಿಶೇಷ ಗಸ್ತು ನಡೆಸಿದ್ದಾರೆ. 

ಈ ವೇಳೇ  ublic Nuisance ಮಾಡಿದವರನ್ನು ಮತ್ತು ಅನುಮಾನಸ್ಪಾದ ವ್ಯಕ್ತಿಗಳನ್ನು ಠಾಣೆಗೆ ಕರೆತಂದು, ಅವರುಗಳ ಪೂರ್ವಾಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ ಒಟ್ಟು 92 ಲಘು ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ ಮತ್ತು 02 COTPA ಹಾಗೂ 25 IMV ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿರುತ್ತದೆ. 


ಇನ್ನಷ್ಟು ಸುದ್ದಿಗಳು 


 

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor