KARNATAKA NEWS/ ONLINE / Malenadu today/ Sep 1, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಮತ್ತೊಂದು ಪೋಕ್ಸೋ ಕೇಸ್ ದಾಖಲಾಗಿದೆ. ಅಪ್ರಾಪ್ತೆಯೊಬ್ಬಳು ಮಗುವಿಗೆ ಜನ್ಮನೀಡಿದ್ದು, ಈ ಸಂಬಂಧ ಸಾಗರ ತಾಲ್ಲೂಕು ಪೊಲೀಸರು ಕೇಸ್ ದಾಖಲಿಸಿದ್ದಾರೆ.
ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಒಂದು ವರ್ಷದಿಂದ ಯುವತಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ. ಇನ್ನೊಂದು ತಾಲ್ಲೂಕಿನ ವಿದ್ಯಾರ್ಥಿಯೊಬ್ಬ, ಈ ಕೃತ್ಯ ವೆಸಗಿದ್ದು, ಪ್ರಕರಣದ ಪೂರ್ತಿ ವಿವರವನ್ನು ಗೌಪ್ಯವಾಗಿ ಇಡಲಾಗಿದೆ. ಇನ್ನೂ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ವಿದ್ಯಾರ್ಥಿನಿ ನೀಡಿರುವ ದೂರಿನನ್ವಯ ಆರೋಪಿಯನ್ನು ಬಂಧಿಸಿದ್ದಾರೆ.
ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಗುಡ್ ನ್ಯೂಸ್! ಇ-ಬಸ್ ದರದಲ್ಲಿ ಬದಲಾವಣೆ! ವೀಕೆಂಡ್ನಲ್ಲಿ ವಿಶೇಷ ದರ!
ಶಿವಮೊಗ್ಗ ವಿಭಾಗದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಶಿವಮೊಗ್ಗ-ಬೆಂಗಳೂರು (Shimoga-Bangalore) ಮಾರ್ಗದಲ್ಲಿ ಪ್ರಸ್ತುತ 04 ಹವಾ ನಿಯಂತ್ರಿತ ವಾಹನಗಳು ಕಾರ್ಯಾಚರಣೆಯಾಗುತ್ತಿದೆ.
ಪ್ರಯಾಣಿಕರು ಹವಾ ನಿಯಂತ್ರಿತ ವಾಹನಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ ಪ್ರಯಾಣ ದರವನ್ನು ನಿರ್ಧರಿಸಿ ಬಸ್‍ಗಳನ್ನು ಚಾಲನೆಗೊಳಿಸಿದೆ.
ವಾಹನಗಳ ಪ್ರಯಾಣದರ ವಾರದ ದಿನಗಳಾದ ಸೋಮವಾರದಿಂದ ಗುರುವಾರದವರೆಗೆ ರೂ.550/- ಮತ್ತು ವಾರಾಂತ್ಯ ದಿನಗಳಾದ ಶುಕ್ರವಾರ ದಿಂದ ಭಾನುವಾರದವರೆಗೆ ಪ್ರಯಾಣ ದರ ರೂ.600/- ಆಗಿರುತ್ತದೆ.
ಶಿವಮೊಗ್ಗದಿಂದ ನಿರ್ಗಮನವಾಗುವ ಸಮಯ ಬೆ:11-00, ಮ:01-00, ರಾ:10-00, ರಾ:11-00 ಮತ್ತು ಬೆಂಗಳೂರಿನಿಂದ ನಿರ್ಗಮನವಾಗುವ ಸಮಯ ಬೆ:10-00, ಬೆ:11-00, ರಾ:11-00, ರಾ:11-30 ಆಗಿದೆ ಎಂದು ಶಿವಮೊಗ್ಗ ವಿಭಾಗದ ಕ.ರಾ.ರ.ಸಾ.ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ಸುದ್ದಿಗಳು
SHIVAMOGGA AIRPORT ನಿಂದ ವಿಮಾನಯಾನ! ಪ್ರತಿ ಟಿಕೆಟ್ಗೆ 500 ರೂಪಾಯಿ ಸಬ್ಸಿಡಿ!
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೊದಲ ಇಂಡಿಗೋ ಪ್ಲೈಟ್
