ಫಾರ್ಚೂನರ್ ಕಾರಿನಲ್ಲಿ ಗಾಂಜಾ ಸಾಗಾಟ ! ತೀರ್ಥಹಳ್ಳಿ ತಾಲ್ಲೂಕು, ಮಾಳೂರು ಪೊಲೀಸರಿಂದ ಮೂವರು ವಶಕ್ಕೆ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Aug 12, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಪೊಲೀಸರು ಪಾರ್ಚೂನರ್ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದವರನ್ನ ಬಂಧಿಸಿದ್ದಾರೆ. ಅಲ್ಲದೆ ಈ ಸಂಬಂಧ ಮೂವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು  (Tirthahalli Taluk) ಮಾಳೂರು ಸಮೀಪ , ಬಿಳಿ ಪಾರ್ಚೂನರ್​ ಕಾರೊಂದನ್ನ ಅಡ್ಡಹಾಕಿದ ಪೊಲೀಸರಿಗೆ ಅದರಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ.  ಮಾಳೂರು ಪೊಲೀಸ್ ಸ್ಟೇಷನ್​ನಲ್ಲಿ ಈ ಸಂಬಂದ ಪ್ರಕರಣ ದಾಖಲಾಗಿದೆ. 

ಏನಿದು ಪ್ರಕರಣ?

ಇದುವರೆಗೆ ಲಭ್ಯವಾಗಿರುವ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ನಿನ್ನೆ ರಾತ್ರಿ ಪೊಲೀಸರು ಈ ಕಾರ್ಯಾಚರಣೆಯನ್ನ ನಡೆಸಿದ್ದಾರೆ ಎನ್ನಲಾಗಿದೆ. ಶಿವಮೊಗ್ಗದಿಂದ ಮತ್ತೂರು ಮೂಲಗ ತೀರ್ಥಹಳ್ಳಿ ರಸ್ತೆಗೆ ಬಂದು ಮಾಳೂರು ಬಳಿಯಲ್ಲಿ ಹೋಗುತ್ತಿದ್ದ ವೇಳೆ ,ಡಿವೈಎಸ್‌ಪಿ ಗಜಾನನ ವಾಮನ ಸುತರ ನೇತೃತ್ವದಲ್ಲಿ ಮಾಳೂರು ಎಸ್‌ಐ ನವೀನ್‌ ಮಠಪತಿ, ಎಎಸ್‌ಐ ಶಿವಾನಂದ, ಧರಣಯ್ಯ ಸಿಬ್ಬಂದಿಗಳಾದ ಸುರಕ್ಷಿತ್‌, ಸಂತೋಷ್‌, ವಿವೇಕ್‌, ರಾಮಣ್ಣ ಸೇರಿದಂತೆ ಕ್ರೈಂ ಪೊಲೀಸರ ತಂಡ  ದಾಳಿ ನಡೆಸಿ ವಾಹನವನ್ನು ತಪಾಸಣೆಗೆ ಒಳಪಡಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಕುರಿ ಮಾಂಸ ಹಾಗೂ ಗಾಂಜಾ ಪತ್ತೆಯಾಗಿದೆ. ಹೀಗಾಗಿ ಆರೋಪಿಗಳನ್ನ ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದಾರೆ.  

ಐಶಾರಾಮಿ ಕಾರುಗಳು ಮತ್ತು ಗಾಂಜಾ

ಪ್ರಕರಣದಲ್ಲಿ ಆರೋಪಿಗಳಾದವರು ತೀರ್ಥಹಳ್ಳಿ ಪೇಟೆಯಲ್ಲಿ ಐಶಾರಾಮಿ ಕಾರುಗಳನ್ನ ಹೊಂದಿದವರು ಎನ್ನಲಾಗಿದ್ದು, ಮಟನ್ ವ್ಯಾಪಾರ ಮಾಡುತ್ತಿದ್ದರು ಎಂಬ ಮಾಹಿತಿಯಿದೆ. ಅಲ್ಲದೆ ಸದ್ಯ ಇವರನ್ನ ವಶಕ್ಕೆ ಪಡೆದಿರುವ ಪೊಲೀಸರು ಕೇಸ್ ದಾಖಲಿಸುತ್ತಿದ್ದಾರೆ. ಮೊನ್ನೆಯಷ್ಟೆ ತೀರ್ಥಹಳ್ಳಿಯ ತೋಟವೊಂದರಲ್ಲಿ ಬೆಳೆದಿದ್ದ ಒಂದಾಳು ಗಾತ್ರದ ಗಾಂಜಾ ಗಿಡವನ್ನು ಜಪ್ತಿ ಮಾಡಿದ್ದ ಪೊಲೀಸರು ಇದರ ಬೆನ್ನಲ್ಲೆ  ಫಾರ್ಚೂನರ್ ಕಾರಲ್ಲಿ (Fortuner car) ಗಾಂಜಾ ಸಾಗಿಸ್ತಿದ್ದ ವೇಳೆ ದಾಳಿ ನಡೆಸಿದ್ದಾರೆ. ಆರೋಪಿಗಳ ವಿವರ ಹಾಗೂ ಸಿಕ್ಕ ಗಾಂಜಾ ಪ್ರಮಾಣದ ಬಗ್ಗೆ ಪೊಲೀಸ್ ಇಲಾಖೆಯಿಂದಲೇ ಇನ್ನಷ್ಟೆ ಮಾಹಿತಿ ಲಭ್ಯವಾಗಬೇಕಿದೆ. 


ಇನ್ನಷ್ಟು ಸುದ್ದಿಗಳು


 ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸ ಬಯಸಿರುವ  ಕಾಂಗ್ರೆಸ್​ ಪಕ್ಷದ ಆಕಾಂಕ್ಷಿ  ನಂಜೇಶ್ ಬೆಣ್ಣೂರು

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor