ಸ್ವಾತಿ ಸಾವಿನ ಪ್ರಕರಣ! ಎಸ್​ಪಿ ಮಿಥುನ್​ ಕುಮಾರ್​ ಮಹತ್ವದ ಸ್ಟೇಟ್​ಮೆಂಟ್​

ಹಂಚಿಕೊಳ್ಳಿ
WhatsApp Facebook X Telegram
Swathi Death Case sp mithunkumar statement
Swathi Death Case sp mithunkumar statement

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 24 2025 :  ಭದ್ರಾವತಿ ತಾಲ್ಲೂಕು ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಯುವತಿ ಸಾವಿನ ಪ್ರಕರಣ  ಸಂಬಂಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಮಾತನಾಡಿದ್ದಾರೆ. 19 ವರ್ಷದ ಸ್ವಾತಿಯನ್ನು ಕೊಲೆ ಮಾಡಿರುವ ಆರೋಪ ಸಂಬಂಧ ಪೋಷಕರು ನೀಡಿದ ದೂರಿನನ್ವಯ 20 ವರ್ಷದ ಸೂರ್ಯ ಎಂಬಾತನ ವಿರುದ್ದ ಕೊಲೆ ಆರೋಪದಡಿ ಕೇಸ್ ದಾಖಲಾಗಿದೆ ಎಂದು ತಿಳಿಸಿದ್ದಾರೆ. 

ಯರೆಹಳ್ಳಿಯ ಕೆಂಚಮ್ಮನಹಳ್ಳಿಯ ಸಮೀಪ ಭದ್ರಾ ಕ್ಯಾನಲ್​ನ ಬಳಿಯಲ್ಲಿ ಆರೋಪಿ ಸೂರ್ಯ ಯುವತಿ ಸ್ವಾತಿಯನ್ನು ಕರೆದುಕೊಂಡು ಹೋಗಿ ಇರುವೆ ಬರದಂತೆ ಹಾಕುವ ಪುಡಿಯನ್ನು ಸೇವಿಸಿದ್ದಾನೆ. ಅಲ್ಲದೆ ಆನಂತರ ಆಕೆಯನ್ನು ಬಲವಂತವಾಗಿ ಚಾನಲ್​ಗೆ ದೂಡಿದ್ದಾನೆ ಎಂದು ಪೋಷಕರು ಕಂಪ್ಲೆಂಟ್ ಕೊಟ್ಟಿದ್ದಾರೆ ಎಂದು ಎಸ್​ಪಿಯವರು ಸ್ಪಷ್ಟಪಡಿಸಿದ್ದಾರೆ. 

ಪ್ರಕರಣ ಸಂಬಂಧ ಸೂರ್ಯನನ್ನು ಅರೆಸ್ಟ್ ಮಾಡಲಾಗಿದ್ದು, ಸದ್ಯ ಕೇಸ್​ನ ಬಗ್ಗೆ ಗಂಭೀರವಾಗಿ ತನಿಖೆ ಮಾಡಲಾಗುತ್ತಿದೆ. ಇನ್ನೂ ಕೇಸ್​ನಲ್ಲಿ ಆರೋಪಿಯ ತಂದೆಯ ಪಾತ್ರವೂ ಇದೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆಯು ಎನ್​ಕ್ವೈರಿ ಮಾಡಲಾಗುತ್ತಿದೆ ಎಂದು ಎಸ್​ಪಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆಯ ನಂತರ ಸ್ಪಷ್ಟಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.  

ಇದನ್ನು ಸಹ ಓದಿ : ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Swathi Death Case sp mithunkumar statement

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor