ಕೋಟೆ ಮಾರಿಕಾಂಬ ದೇವಾಲಯಕ್ಕೆ ತೆರಳಿ ಮಾರಿ ಗದ್ದುಗೆಗೆ ಪೂಜೆ ಸಲ್ಲಿಸಿದ ಸಚಿವ ಮಧು ಬಂಗಾರಪ್ಪ!

KARNATAKA NEWS/ ONLINE / Malenadu today/ Sep 28, 2023 SHIVAMOGGA NEWS’ 

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Minister Madhu Bangarappa) ನಿನ್ನೆ ಶಿವಮೊಗ್ಗದ ಗ್ರಾಮ ದೇವತೆ ಮಾರಿಕಾಂಬಾ ದೇವಸ್ಥಾನ (Marikamba Temple) ಕ್ಕೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದ್ರು. 

ಇತಿಹಾಸ ಪ್ರಸಿದ್ದ ಶಿವಮೊಗ್ಗ ನಗರದ ಗ್ರಾಮದೇವತೆ ಕೋಟೆ ಶ್ರೀ  ಮಾರಿಕಾಂಬ ದೇವಸ್ಥಾನಕ್ಕೆ  ರಾತ್ರಿ 9.30  ಕ್ಕೆ ಭೇಟಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್.ಮಧು ಬಂಗಾರಪ್ಪ  ಮಾರಿ ಗದ್ದುಗೆಗೆ ಪೂಜೆ ಸಲ್ಲಿಸಿದರು

ಆನಂತರ ದೇವಿಯ ದರ್ಶನ ಪಡೆದರು, ಈ ಸಂದರ್ಭದಲ್ಲಿ  ಸಮಿತಿಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ದೇವಸ್ಥಾನದ ಪರವಾಗಿ ಸಚಿವರಿಗೆ ಶಾಲು ಹೊದಿಸಿ ಹಾರ ಹಾಕಿ ಗೌರವಿಸಿದರು

ಸಚಿವರೊಂದಿಗೆ ಸ್ಥಳಿಯ ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್‌ನ ಮಾಜಿ ಸದಸ್ಯರುಗಳಾದ ಆಯನೂರು ಮಂಜುನಾಥ್,ಆರ್.ಪ್ರಸನ್ನ ಕುಮಾರ್,ರಾಜ್ಯ ಅಪೆಕ್ಸ್ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್.ಸುಂದರೇಶ್,ಎಪಿಎಂಸಿ ಮಾಜಿ ಅಧ್ಯಕ್ಷ ದುಗ್ಗಪ್ಪ ಗೌಡ,ಪ್ರಚಾರ ಸಮಿತಿಯ ಎನ್,.ರಮೇಶ್,ಸ್ಥಳಿಯ ಪಾಲಿಕೆ ಸದಸ್ಯ ಪ್ರಭು,ಕಾಂಗ್ರೆಸ್ ಮುಖಂಡರಾದ ಹೆಚ್.ಎಂ.ಯೋಗೇಶ್,ಜಿ.ಡಿ.ಮಂಜುನಾಥ್, ಮಾಜಿ ಸೂಡ ಅಧ್ಯಕ್ಷ ವಿ.ರಾಜು, ಶ್ರೀನಿವಾಸ್ ಕರಿಯಣ್ಣ,ಹೊಸಮನೆ ವಿ.ರಾಜು,ಲಕ್ಷಣ,ದೀರಜ್ ಹೊನ್ನವಿಲೆ,ಕುವೆಂಪು ವಿವಿ ರಮೇಶ್ ಸೇರಿದಂತೆ ಇನ್ನು ಮುಂತಾದವರು ಇದ್ದರು.


ಇನ್ನಷ್ಟು ಸುದ್ದಿಗಳು 

  1. ಹಿಂದೂ ಮಹಾಸಭಾ ಗಣಪತಿ ರಾಜಬೀದಿ ಉತ್ಸವ! ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ನೇಮಕ! ಎಲ್ಲೆಲ್ಲಿಗೆ ಯಾರ್ಯಾರು ಓದಿ

  2. 2 ಲಕ್ಷ ಜನ! 3 ಸಾವಿರಕ್ಕೂ ಹೆಚ್ಚು ಪೊಲೀಸ್ ! ನಾಳಿನ ಬಂದೋಬಸ್ತ್​ ಬಗ್ಗೆ ಎಸ್​ಪಿ ಬ್ರೀಫಿಂಗ್​!

  3. ಹಿಂದೂ ಮಹಾಸಭಾದ ಮೊದಲ ಗಣಪತಿ ಪ್ರತಿಷ್ಟಾಪನೆಯಾಗಿದ್ದು ಶಿವಮೊಗ್ಗದಲ್ಲೆ! ಇಲ್ಲಿದೆ ನೋಡಿ ಇತಿಹಾಸದ ವಿನಾಯಕನ ದೃಶ್ಯಗಳು!

  4. ಹಿಂದೂ ಮಹಾಸಭಾ ಗಣಪತಿಗೆ ಸರ್ವಧರ್ಮ ‘ಸೌಹಾರ್ದ’ ಹೂವಿನ ಹಾರ!


 

Leave a Comment