pankaja Fame Shefali Jariwala Dies at 42; ಹುಡುಗರು ಸಿನಿಮಾದ ಪಂಕಜಾ ಇನ್ನಿಲ್ಲ / 42 ವರುಷ ನಟಿ ಸಾವು! ಹೇಗಾಯ್ತು ಘಟನೆ
ಮುಂಬೈ, ಜೂನ್ 28, 2025: ಕನ್ನಡದ ಹುಡುಗರು ಸಿನಿಮಾದಲ್ಲಿನ ಪಂಕಜಾ ಹಾಡಿನಲ್ಲಿ ಕುಣಿದಿದ್ದ ಹಾಗೂ ಹಿಂದಿಯ ‘ಕಾಂಟಾ ಲಗಾ’ ಹಾಡಿನ ಮೂಲಕ ಪ್ರಖ್ಯಾತಿಯಾಗಿದ್ದ ನಟಿ ಶಫಾಲಿ ಜರಿವಾಲಾ (42) ನಿನ್ನೆ ದಿನ ಶುಕ್ರವಾರ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಪತಿ ಪರಾಗ್ ತ್ಯಾಗಿ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದರು ಆದರೆ ಅಷ್ಟರಲ್ಲಾಗಲೆ ಶಪಾಲಿ ಸಾವನ್ನಪ್ಪಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.

pankaja Fame Shefali Jariwala Dies at 42
ಮೇಲ್ನೋಟಕ್ಕೆ ನಟಿಯ ಸಾವಿಗೆ ಕಾರ್ಡಿಯಾಕ್ ಅರೆಸ್ಟ್ ಕಾರಣ ಎಂದು ಹೇಳಲಾಗುತ್ತಿದ್ದರು ಸಹ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಈ ಸಂಬಂಧ ಶಫಾಲಿ ನಿವಾಸದಲ್ಲಿರುವ ಅಡುಗೆಯವರು ಮತ್ತು ಮನೆಗೆಲಸದವರನ್ನು ವಿಚಾರಣೆ ನಡೆಸಿದ್ದಾರೆ.

