snake rescue 1 : ದಿಂಬಿನ ಅಡಿ  ಬೆಚ್ಚಗೆ ಅಡಗಿ ಕುಳಿತಿದ್ದ ನಾಗರಹಾವು | ವಿಡಿಯೋ ವೈರಲ್​

snake rescue : ದಿಂಬಿನ ಅಡಿ  ಬೆಚ್ಚಗೆ ಅಡಗಿ ಕುಳಿತಿದ್ದ ನಾಗರಹಾವು | ವಿಡಿಯೋ ವೈರಲ್​

ಮಳೆಗಾಲದ ಸಮಯದಲ್ಲಿ  ಹಾವುಗಳು ಬೆಚ್ಚಗಿನ ಪ್ರದೇಶವನ್ನು ಹುಡುಕುವುದು ಸಾಮಾನ್ಯ.  ಕೆಲವೊಮ್ಮೆ ನಾವು ಮನೆಯ ಬಾಗಿಲು ತೆರೆದಿಟ್ಟಾಗ ಮನೆಯ ಒಳಗೆ ಪ್ರವೇಶಿಸಿ ಶೂ ಸೇರಿದಂತೆ ಇತರೆ ವಸ್ತುಗಳ ಒಳಗೆ ಬೆಚ್ಚಗೆ ಅಡಗಿ ಕುಳಿತಿರುತ್ತವೆ.ಅದರಂತೆ ನಾಗಪುರದ ವ್ಯಕ್ತಿಯೊಬ್ಬರ ಮನೆಯಲ್ಲಿ ನಾಗರ ಹಾವೊಂದು ಬೆಡ್​ನ ದಿಂಬಿನ ಕೆಳಗೆ ಅವಿತು ಕುಳಿತಿದೆ. ಈ ಭಯಾನಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

snake rescue : ದಿಂಬಿನ ಕೆಳಗೆ ಅವಿತು ಕುಳಿತ್ತಿದ್ದ ನಾಗರ ಹಾವನ್ನು ಕಂಡು ಗಾಬರಿಯಾದ ಮನೆಯವರು ತಕ್ಷಣ ಉರಗರಕ್ಷಕರಿಗೆ ಫೊನ್​ ಮಾಡಿದ್ದಾರೆ. ಉರಗ ರಕ್ಷಕರು ತಕ್ಷಣ ಸ್ಥಳಕ್ಕೆ ಧಾವಿಸಿ ಹಾವನ್ನು ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಮಳೆಗಾಲದಲ್ಲಿ ಹಾವುಗಳು ಬೆಚ್ಚಗಿನ ಪ್ರದೇಶ ಹುಡುಕುವುದು ಸಾಮಾನ್ಯ. ಈ ಹಿನ್ನಲೆ ಮುನ್ನೆಚ್ಚರಿಕೆ ಕ್ರಮವಾಗಿ ನಾವು ಕಿಟಕಿ ಬಾಗಿಲುಗಳನ್ನು ಮುಚ್ಚಿಡಬೇಕು. ಹಾಗೆಯೇ ನಮ್ಮ ಮನೆಯ ಸುತ್ತಮುತ್ತಲಿನಲ್ಲಿ ಹೂವಿನ ಪಾಟ್​ ಸೇರಿದಂತೆ ಇನ್ನತರೇ ಮುಚ್ಚಿಗೆಯ ವಸ್ತುಗಳನ್ನು ಇಡಬಾರದು. ಇದರಿಂದ ಹಾವುಗಳು ಮನೆಯೊಳಗೆ ಪ್ರವೇಶಿಸುದನ್ನು ತಡೆಯಬಹುದು ಎಂಬುವುದು ಉರಗ ತಜ್ಞರ ಅಭಿಪ್ರಾಯ.

 

 

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು