handi anni case judgement : ಹಂದಿ ಅಣ್ಣಿ ಕೊಲೆ ಕೇಸ್​ ತೀರ್ಪು : ಇವತ್ತೆ ನಿರ್ಧಾರವಾಗಲಿದೆ ಕಾಡಾ ಕಾರ್ತೀ & ಟೀಂನ ಭವಿಷ್ಯ!

ಹಂಚಿಕೊಳ್ಳಿ
WhatsApp Facebook X Telegram
handi anni case judgement
handi anni case judgement : ಈ ಹಿಂದೆ ಹಂದಿ ಅಣ್ಣಿ ಕೊಲೆ ಆರೋಪಿಗಳು ಕೋರ್ಟ್​ಗೆ ಹಾಜರಾಗಿದ್ದ ಸಂದರ್ಭದ ಚಿತ್ರ

handi anni case judgement :  14 Jul 2022 ರಂದು ವಿನೋಬನಗರ ಪೊಲೀಸ್ ಠಾಣೆಯ ಸಮೀಪ ನಡೆದಿದ್ದ ಹಂದಿ ಅಣ್ಣಿ ಕೊಲೆ ಕೇಸ್​ನ ಅಂತಿಮ ತೀರ್ಪು ಇವತ್ತು ಹೊರಬೀಳುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಕೋರ್ಟ್ ಆವರಣದಲ್ಲಿ ಹೆಚ್ಚುವರಿ ಪೊಲೀಸರನ್ನ ಸಹ ನಿಯೋಜಿಸಲಾಗಿದೆ.

handi anni case judgement

ಪ್ರಕರಣದ ವಿಚಾರಣೆ ಈಗಾಗಲೇ ಮುಗಿದಿದ್ದು, ಆರೋಪಿಗಳ ಹೇಳಿಕೆ ಹಾಗೂ ವಾದ ವಿವಾದ ಮುಗಿದು ಕಳೆದ ತಿಂಗಳೇ ಪ್ರಕರಣದ ತೀರ್ಪು ಹೊರಬರಬೇಕಿತ್ತು. ಕಳೆದ ತಿಂಗಳು ತೀರ್ಪು ನೀಡುವ ಸಲುವಾಗಿ ಕೋರ್ಟ್ ಎರಡು ದಿನಾಂಕಗಳನ್ನು ನೀಡಿತ್ತು . ಆದರ ತೀರ್ಪು ಹೊರಬಿದ್ದಿರಲಿಲ್ಲ. ಇವತ್ತು ಅಂತಿಮವಾಗಿ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಪ್ರಕರಣದಲ್ಲಿ ಓರ್ವ ಆರೋಪಿ ಹಂದಿ ಅಣ್ಣಿ ಕೊಲೆಯ ಪ್ರತಿಕಾರವಾಗಿ ನಡೆದಿದ್ದ ದಾಳಿಯಲ್ಲಿ ಸಾವನ್ನಪ್ಪಿದ್ದ. ಉಳಿದಂತೆ ಪ್ರಕರಣದ ಪ್ರಮುಖ ಆರೋಪಿ ಕಾಡಾ ಕಾರ್ತಿ ಮೈಸೂರು ಜೈಲಿನಲ್ಲಿದ್ದು, ಅಲ್ಲಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ಕೊರ್ಟ್ಗೆ ಹಾಜರಾಗಲಿದ್ದಾನೆ. ಉಳಿದಂತೆ ಎಲ್ಲಾ ಆರೋಪಿಗಳು ಕೋರ್ಟ್​ಗೆ ಇಂದು ಹಾಜರಾಗಲಿದ್ದಾರೆ.

ಪ್ರಕರಣದ ಆರೋಪಿಗಳು

1) ಕಾರ್ತಿಕ್ @ ಕಾಡ ಕಾರ್ತಿಕ್ ಎ-1

2) ನಿತಿನ್ @ ಭಜರಂಗಿ ಎ-2

3) ಮದನ್ ರಾಜ್ @ ಮದನ್ ರೇ ಎ-3

4) ಚಂದನ್ @ ಚಾರ್ಲಿ ಎ-4

5) ಫಾರೂಕ್ @ ಉಮ್ಮರ್ ಎ-5

6) ಮಧುಸೂದಹನ್ @ ಕರಿಯಾ ಎ-6

7) ಮಧು ಎ-7

8) ಆಂಜನೇಯ ಕೆ ಎಸ್ ಎ-8

2022 ಜುಲೈ 14 ರಂದು ನಡೆದಿದ್ದ ಕೊಲೆ ಪ್ರಕರಣದ ವಿಚಾರಣೆ PRL. DISTRICT AND SESSIONS COURT SHIVAMOGGA ಕೋರ್ಟ್​ನಲ್ಲಿ 2022 ರ ಡಿಸೆಂಬರ್ 13 ರಂದು ಆರಂಭವಾಗಿತ್ತು. ಕಳೆದ ಮಾರ್ಚ್​​ 17 ಎಲ್ಲಾ ಸಾಕ್ಷಿಗಳ ವಿಚಾರಣೆ ಮುಗಿದು, ಮಾರ್ಚ್​ 22 ಕ್ಕೆ ಆರೋಪಿಗಳ ಹೇಳಿಕೆ ದಾಖಲಿಸಲಾಗಿತ್ತು. ಅಂತಿಮವಾಗಿ ಏಪ್ರಿಲ್ ಒಂದರಂದು ವಾದ ವಿವಾದ ಆಲಿಸಿದ್ದ ಕೋರ್ಟ್​ ಜಡ್ಜ್​ಮೆಂಟ್ ದಿನಾಂಕವನ್ನು ಘೋಷಿಸಿತ್ತು. ಇವತ್ತು ಅಂತಿಮವಾಗಿ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಕೋರ್ಟ್ ಆವರಣದಲ್ಲಿ ಯಾವುದೇ ಪ್ರತಿಕಾರದ ದಾಳಿ ನಡೆಯುವ ಅನುಮಾನದ ಮೇರೆಗೆ ಪೊಲೀಸರು ಹೆಚ್ಚುವರಿ ಭದ್ರತೆಯನ್ನ ಕೈಗೊಂಡಿದ್ದಾರೆ. ಈ ಹಿಂದಿನ ವಿಚಾರಣೆಯ ಸಂದರ್ಭದಲ್ಲಿಯು ಹಂದಿ ಅಣ್ಣಿ ಕೊಲೆ ಕೇಸ್ ಆರೋಪಿಗಳಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿತ್ತಲ್ಲದೇ, ಡ್ರೋಣ್ ಕ್ಯಾಮರಾ ಮೂಲಕ ಕೋರ್ಟ್ ಆವರಣದಲ್ಲಿ ಕಣ್ಗಾವಲು ಇಡಲಾಗಿತ್ತು. ಇವತ್ತು ಸಹ ಹೆಚ್ಚುವರಿ ಸಿಬ್ಬಂದಿ, ಕೋರ್ಟ್ ಆವರಣದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor