ಶಿವಮೊಗ್ಗ : ಮಹಿಷಿ ಉತ್ತರಾದಿ ಮಠದಲ್ಲಿ ₹1 ಕೋಟಿ ಮೌಲ್ಯದ ಚಿನ್ನ ಕಣ್ಮರೆ! ನಡೆದಿದ್ದು?

ಹಂಚಿಕೊಳ್ಳಿ
WhatsApp Facebook X Telegram
750 Grams Gold Stolen from mahishi Uttaradi Math

mahishi Uttaradi Math / ಮಲೆನಾಡು ಟುಡೆ ಸುದ್ದಿ / ತೀರ್ಥಹಳ್ಳಿ / ಜಿಲ್ಲೆಯ ಪ್ರಸಿದ್ದ ಮಠಗಳ ಪೈಕಿ , ತೀರ್ಥಹಳ್ಳಿ ತಾಲ್ಲೂಕಿನ ಮಹಿಷಿ ಗ್ರಾಮದಲ್ಲಿರುವ ಅತ್ಯಂತ ಪುರಾತನ ಉತ್ತರಾದಿ ಮಠವು (mahishi Uttaradi Math ) ಒಂದು. ಈ ಹಿಂದೆ ದರೋಡೆ ಪ್ರಕರಣದಲ್ಲಿ ಸುದ್ದಿಯಾಗಿದ್ದ ಈ ಮಠದಲ್ಲಿ ಇದೀಗ ಮತ್ತೊಂದು ಕ್ರೈಂ ನಡೆದಿದೆ. ಮಠದಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಚಿನ್ನದ ವಸ್ತುಗಳು ಕಣ್ಮರೆಯಾಗಿದೆ ಎಂದು ಸ್ಥಳೀಯವಾಗಿ ವರದಿಯಾಗಿದೆ.

ಮಲೆನಾಡು ಟುಡೆಗೆ ಸ್ಥಳೀಯ ವರದಿಗಾರರೊಬ್ಬರು ಇಂದು ಬೆಳಗ್ಗೆ ನೀಡಿರುವ ಮಾಹಿತಿ ಪ್ರಕಾರ, 17 ಜೂನ್ ಅಂದರೆ ನಿನ್ನೆ ಬುಧವಾರದಂದು ಈ ಪ್ರಕರಣ ಬೆಳಕಿಗೆ ಬಂದಿದೆ. ಮಠದ ಗರ್ಭಗುಡಿಯಲ್ಲಿದ್ದ 750 ಗ್ರಾಂ ತೂಕದ ಚಿನ್ನದ ವಸ್ತುಗಳು ಸೇರಿದಂತೆ ಪಂಚಲೋಹದ ಪೂಜಾ ಪರಿಕರಗಳು ನಿಗೂಢವಾಗಿ ಕಳುವಾಗಿವೆ.

Whatsapp / https://chat.whatsapp.com/JrsZ8He4nN600n0r3tJItz

ಕಳೆದ ಮೂರು ದಿನಗಳಿಂದ ಮಠದಲ್ಲಿ ಗುರುವಂದನೆ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದ ನಿಮಿತ್ತ ಬುಧವಾರ ಮಧ್ಯಾಹ್ನದ ವೇಳೆ ಮಠದಲ್ಲಿ ಪೂಜಾ ವಿಧಿವಿಧಾನಗಳು ನಡೆಯುತ್ತಿರುವಾಗಲೇ ಚಿನ್ನದ ವಸ್ತುಗಳು ಕಳ್ತನವಾಗಿರುವುದು ಗೊತ್ತಾಗಿದೆ. ಕಳುವಾದ ವಸ್ತುಗಳ ಪೈಕಿ ದೇವರ ಪೂಜೆಗೆ ಬಳಸಲಾಗಿದ್ದ ಚಿನ್ನದ ದೀಪಾರತಿಗಳು, ಚಿನ್ನದ ದೀಪಗಳು ಹಾಗೂ ಪಂಚಲೋಹದಿಂದ ಮಾಡಲ್ಪಟ್ಟ ಸುಮಾರು 15 ಕ್ಕೂ ಹೆಚ್ಚು ವಸ್ತುಗಳು ಇದ್ದವು ಎನ್ನಲಾಗಿದೆ.

ಘಟನಾ ಸಮಯದಲ್ಲಿ ಮಠದ ಆವರಣದಲ್ಲಿ ಕೇವಲ ಮಠಕ್ಕೆ ಸಂಬಂಧಿಸಿದವರು ಮಾತ್ರ ಇದ್ದರು ಎಂದು ಹೇಳಲಾಗುತ್ತಿದೆ. ಇನ್ನೂ ಘಟನೆ ಬಗ್ಗೆ ವಿಷಯ ತಿಳಿದು ಸ್ತಳಕ್ಕೆ ಮಾಳೂರು ಪೊಲೀಸ್​ ಸ್ಟೇಷನ್ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರಷ್ಟೆ ಅಲ್ಲದೆ ಈ ಬಗ್ಗೆ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಘಟನೆ ಬಗ್ಗೆ ಶಿವಮೊಗ್ಗ ಪೊಲೀಸ್ ಇಲಾಖೆ ಹೆಚ್ಚುವರಿ ತನಿಖಾ ತಂಡವನ್ನು ರಚಿಸಿದ್ದು, ಪ್ರಕರಣವನ್ನು ಸೀರಿಯಸ್ ಆಗಿ ತೆಗೆದುಕೊಂಡಿದೆ. ಇನ್ನೂ ಈ ಹಿಂದೆ ನಡೆದಿದ್ದ ದರೋಡೆ ಪ್ರಕರಣದಲ್ಲಿ ಅಂದಿನ ಎಸ್​ಪಿ ಮಿಥುನ್ ಕುಮಾರ್​ ತಮ್ಮ ತಂಡದ ಮೂಲಕ 12 ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಮತ್ತೊಂದು ಪ್ರಕರಣ ನಡೆದಿದ್ದು, ಈ ಕೃತ್ಯದ ಹಿಂದೆ ಯಾರಿರಬಹುದು ಎಂಬುದು ನಿಗೂಢವಾಗಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor