ಒಳ ಮೀಸಲಾತಿ ವಿರೋದಿಸಿ ಬಂಜಾರ ಸಮುದಾಯದಿಂದ ಪ್ರತಿಭಟನೆ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 9, 2024

ಶಿವಮೊಗ್ಗ | ರಾಜ್ಯಸರ್ಕಾರ ಜಾರಿಗೆ ತಂದಿರುವ ಒಳ ಮೀಸಲಾತಿಯನ್ನು ವಿರೋಧಿಸಿ ಇಂದು ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಬಂಜಾರ ಸಮುದಾಯ ಬೃಹತ್‌ ಪ್ರತಿಭಟನೆ ನಡೆಸಿದೆ.  ಜಿಲ್ಲಾ ಬಂಜಾರ ಸಮಾಜ, ಬಂಜಾರ ಧರ್ಮಗುರುಗಳ ಮಹಾಸಭಾ ಹಾಗೂ ಜಿಲ್ಲೆಯ ಬಂಜಾರ ಸಮಾಜದ ಸಂಘ ಸಂಸ್ಥೆಗಳು ಸೇರಿದಂತೆ ಸಮುದಾಯದ ಸದಸ್ಯರು ಈ ಪ್ರತಿಭಟನೆ ನಡೆಸಿದರು. 

ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸಿದ ಸಮುದಾಯದ ಸದಸ್ಯರು ಒಳ ಮೀಸಲಾತಿ ಬಂಜಾರ ಸಮುದಾಯಕ್ಕೆ ಕೊಡಲಿ ಪೆಟ್ಟು ಎಂದು ವಾದಿಸಿದರು. ಅಲ್ಲದೆ ಈ ಒಳಮೀಸಲಾತಿ ಜಾರಿಯಾಗಬಾರದು ಎಂದು ಆಕ್ರೋಶ ಹೊರಹಾಕಿದರು. ಅಲ್ಲದೆ ಒಳ ಮೀಸಲಾತಿ ಜಾರಿಯಾಗುವುದರಿಂದ ವಿದ್ಯಾರ್ಥಿ ವೇತನ, ಉದ್ಯೋಗ ಸಿಗುವುದಿಲ್ಲ. ನಮ್ಮ ಸಮಾಜದ ನೌಕರ ವರ್ಗದವರಿಗೆ ಬಡ್ತಿಯೂ ಸಿಗುವುದಿಲ್ಲ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಸ್ಥಗಿತಗೊಳ್ಳುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. 

SUMMARY | The Banjar community staged a massive protest in front of the Deputy Commissioner’s office in Shivamogga today against the internal reservation implemented by the state government.

KEYWORDS |  protest,  Deputy Commissioner’s office,   Shivamogga,  Banjar community, 

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor