SHIVAMOGGA| MALENADUTODAY NEWS | ಮಲೆನಾಡು ಟುಡೆ Apr 9, 2025

ಶಿವಮೊಗ್ಗದಲ್ಲಿ ಇಂಟ್ರಸ್ಟಿಂಗ್ ಆಗಿರುವ ಪ್ರಕರಣವೊಂದು ವರದಿಯಾಗಿದೆ. ಬೈಕ್ ಟ್ರಯಲ್ ನೋಡುತ್ತೇನೆ ಎಂದು ಅದನ್ನು ರೈಡ್ ಮಾಡಿಕೊಂಡು ಹೋದ ವ್ಯಕ್ತಿಯೊಬ್ಬ, ಬೈಕ್ ಸಮೇತ ನಾಪತ್ತೆಯಾದ ಬಗ್ಗೆ ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರಕರಣದ ವಿವರ | ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿವಾಸಿಯೊಬ್ಬರು ತಮ್ಮ ಪಲ್ಸರ್ ಬೈಕ್ ಮಾರಾಟ ಮಾಡುವವರಿದ್ದರು. ಇದಕ್ಕಾಗಿ ಫೇಸ್ಬುಕ್ನಲ್ಲಿ ಬೈಕ್ ವಿವರ ಹಾಗೂ ರೇಟು ಸೇರಿದಂತೆ ಇತ್ಯಾದಿ ಮಾಹಿತಿ ಪ್ರಕಟಿಸಿದ್ದರು. ಇದನ್ನು ಆಧರಿಸಿ ಬೆಂಗಳೂರು ನಿವಾಸಿ ಎಂದು ಹೇಳಿಕೊಂಡ ನವೀನ್ ಎಂಬವರು ಸಂತ್ರಸ್ತರಿಗೆ ಕರೆ ಮಾಡಿದ್ದಾರೆ.
ಫೋನ್ನಲ್ಲಿ ನಂಬಿಕೆ ಬರುವ ಹಾಗೆ ಮಾತುಕತೆ ನಡೆಸಿದ್ದ ನವೀನ್, ಬಳಿಕ ಮಾರ್ಚ್ 30 ರಂದು ಶಿವಮೊಗ್ಗಕ್ಕೆ ಬಂದಿದ್ದ. ಕೆಎಸ್ಆರ್ಟಿಸಿ ಬಸ್ ಸ್ಟಾಪ್ ಬಳಿಕ ಹೊಸನಗರದ ಬೈಕ್ ಮಾಲೀಕನನ್ನು ಭೇಟಿಯಾದ ನವೀನ್ ಇಲ್ಲಿರುವ ಅಶೋಕ್ ಹೋಟೆಲ್ ಬಳಿ ಮಾರಾಟಕ್ಕಿದ್ದ ಪಲ್ಸರ್ ಬೈಕ್ ನೋಡಿ ಪರಿಶೀಲನೆ ಮಾಡಿದ್ದ. ಆನಂತರ ಒಂದು ಲಕ್ಷದ ತೊಂಬತ್ತು ಸಾವಿರಕ್ಕೆ ವ್ಯಾಪಾರ ಕುದುರಿಸಿದ್ದ ನವೀನ್ ಬೈಕ್ ಟ್ರಯಲ್ ನೋಡುವುದಾಗಿ ಹೇಳಿದ್ದ. ಇದನ್ನ ನಂಬಿ ಬೈಕ್ ಮಾಲೀಕ, ಬೈಕ್ ನೀಡಿದ್ದರು. ಆದರೆ ಟ್ರಯಲ್ಗೆ ಅಂತಾ ಬೈಕ್ ತೆಗೆದುಕೊಂಡು ಹೋದ ನವೀನ್ ಫೋನ್ ರಿಸೀವ್ ಮಾಡದೇ ನಾಪತ್ತೆಯಾಗಿದ್ದ. ಹೀಗಾಗಿ ಬೇರೆ ದಾರಿ ಕಾಣದೇ ಬೈಕ್ ಮಾಲೀಕರು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ದೂರು ನೀಡಿದ್ದಾರೆ.
