ಚಿನ್ನ..ಚಿನ್ನ..!ಹೊಳಿತಿದ್ದ ಗುಂಡುಗಳಿಂದ ಹೊಳೆಹೊನ್ನೂರಿನಲ್ಲಿ ನಡೀತು ಕ್ರೈಂ

ಹಂಚಿಕೊಳ್ಳಿ
WhatsApp Facebook X Telegram
Women Cheat Jeweller by Exchanging Fake Gold for Genuine Ornaments

Fake Gold / ಮಲೆನಾಡು ಟುಡೆ ಸುದ್ದಿ /ಶಿವಮೊಗ್ಗ / ಹೊಳೆಹೊನ್ನೂರು ಸಮೀಪದ ಆನವೇರಿ ಗ್ರಾಮದ ಬಂಗಾರದ ಅಂಗಡಿ ಮಾಲೀಕನ ಪತ್ನಿಗೆ ಕಡಿಮೆ ಬೆಲೆಗೆ ಹಳೆಯ ಬಂಗಾರದ ಮಾರುವುದಾಗಿ ನಂಬಿಸಿದ ಅಪರಿಚಿತ ಮಹಿಳೆಯರು 35 ಗ್ರಾಂ.ನಷ್ಟು ನಕಲಿ ಬಂಗಾರ ನೀಡಿ 1.60 ಲಕ್ಷ ರೂ. ಮೌಲ್ಯದ 11 ಗ್ರಾಂ. ಅಸಲಿ ಚಿನ್ನ ಪಡೆದು ಯಾಮಾರಿಸಿದ್ದಾರೆ.

ಆನವೇರಿಯ ಪ್ರಕಾಶ್ ಜ್ಯುವೆಲ್ಲರ್ಸ್ ಮಾಲೀಕ ರಾಘವೇಂದ್ರ ಎಂ. ರವರ ಪತ್ನಿ ಶೋಭಾ ಒಬ್ಬರೇ ಅಂಗಡಿಯಲ್ಲಿದ್ದಾಗ ಅಂಗಡಿಗೆ ಬಂದ ಮಹಿಳೆಯೊಬ್ಬಳು ತಮ್ಮ ಬಳಿ ಇದ್ದ ಹಳೆಯ ಚಿನ್ನದ ಬಳೆಯನ್ನು ನೀಡಿ ಅದರ ಬದಲಿಗೆ ಕಿವಿಯೋಲೆ ಹಾಗೂ ಇತರ ಚಿನ್ನಾಭರಣಗಳನ್ನು ಪಡೆದು ಹೋಗಿದ್ದಾಳೆ.

ಬಳಿಕ ಇನ್ನಿಬ್ಬರು ಮಹಿಳೆಯರನ್ನು ತನ್ನೊಟ್ಟಿಗೆ ಕರೆತಂದ ಮಹಿಳೆ ಇವರ ಬಳಿಯೂ ಚಿನ್ನದ ಗುಂಡುಗಳಿವೆ ಎಂದು ನಕಲಿ ಚಿನ್ನದ ಗುಂಡುಗಳನ್ನು ನೀಡಿ ಎರಡು ಬಂಗಾರದ ಉಂಗುರ ತೆಗೆದುಕೊಂಡು ಹೋಗಿದ್ದಾರೆ. ಸಂಜೆ ವೇಳೆಗೆ ಅಂಗಡಿಗೆ ಬಂದ ಮಾಲೀಕ ರಾಘವೇಂದ್ರ ಬಂಗಾರದ ಗುಂಡುಗಳನ್ನು ಪುಡಿ ಮಾಡಿ ಪರಿಶೀಲಿಸಿದಾಗ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor