ಕೋಟೆ ಗಾಯತ್ರಿ ದೇವಸ್ಥಾನದಲ್ಲಿ ಜುಲೈ 28ರಂದು ಲೋಕಕಲ್ಯಾಣಾರ್ಥ ನವಗ್ರಹ ಹೋಮ ಹಾಗೂ ಪರ್ಜನ್ಯ ಜಪ ! ವಿವರ ಹೀಗಿದೆ

ಹಂಚಿಕೊಳ್ಳಿ
WhatsApp Facebook X Telegram
Navagraha Homa and Parjanya Japa
Navagraha Homa and Parjanya Japa

Navagraha Homa and Parjanya Japa / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶ್ರೀ ವಿಪ್ರ ವೈದಿಕ ಪಂಷತ್, ತಾಲೂಕು ಬ್ರಾಹ್ಮಣ ಸೇವಾ ಸಂಘ ಹಾಗೂ ಅಖಿಲ ಕರ್ನಾಟಕ ಮುಜರಾಯಿ ಆರ್ಚಕರು, ಆಗಮಿಕರು, ಉಪಾಧಿವಂತರ ಒಕ್ಕೂಟ, ಶಿವಮೊಗ್ಗ ಸಹಯೋಗದೊಂದಿಗೆ ಇದೇ ಜುಲೈ 28ರಂದು ಬೆಳಗ್ಗೆ ಗಂಟೆಯಿಂದ ನಗರದ ಕೋಟೆ ರಸ್ತೆಯಲ್ಲಿರುವ ಗಾಯತ್ರಿ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥವಾಗಿ ನವಗ್ರಹ ಹೋಮ, ಶ್ರೀ ಧನ್ವಂತರಿ ಯಾಗ, ಪರ್ಜನ್ಯ ಜಪ, ರುದ್ರಾಭಿಷೇಕ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್‌ ಅಧ್ಯಕ್ಷ ಸುಬ್ರಮಣ್ಯ ಭಟ್ ತಿಳಿಸಿದರು.

ನಿನ್ನೆ ದಿನ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ನಗರದ ಪುರೋಹಿತರು ಲೋಕಕಲ್ಯಾಣಕ್ಕಾಗಿ ನವಗ್ರಹ ಹೋಮ, ಶ್ರೀ ಧನ್ವಂತರಿ ಯಾಗ, ರುದ್ರಾಭಿಷೇಕ ಹಾಗೂ ಉತ್ತಮ ಮಳೆಯಾಗಲೆಂದು ಪರ್ಜನ್ಯ ಜಪ ನೆರವೇರಿಸಲಿದ್ದಾರೆ. ಬೆಳಗ್ಗೆ 10.45ಕ್ಕೆ ಯಾಗ ಪೂರ್ಣಾಹುತಿ ನಡೆಯಲಿದೆ ಎಂದರು.

ಇದೇ ವೇಳೆ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳ ಆರ್ಚಕರು, ಖಾಸಗಿ ಪುರೋಹಿತರು ಹಾಗೂ ಅವರ ಕುಟುಂಬದವರಿಗೆ ಆಯುಷ್ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆಯ ವ್ಯವಸ್ಥೆ ಮಾಡಲಾಗಿದ್ದು, ಕೈ-ಕಾಲು ನೋವು, ಮಧುಮೇಹ, ರಕ್ತದೊತ್ತಡ (ಬಿ.ಪಿ.), ತಲೆನೋವು, ಗ್ಯಾಸ್ಟಿಕ್ ಸೇರಿದಂತೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಗೆ ವೈದ್ಯಕೀಯ ತಪಾಸಣೆ ಮತ್ತು ಉಚಿತ ಔಷಧಿ ಹಾಗೂ ಆರ್ಚಕರಿಗೆ ಹೆಲ್ತ್ ಕಿಟ್ ನ್ನು ನೀಡಲಾಗುವುದು.

ಜೊತೆಗೆ ಮೆಟ್ರೋ ಆಸ್ಪತ್ರೆಯ ನುರಿತ ವೈದ್ಯರು ಆರೋಗ್ಯದ ಕುರಿತು ವಿಶೇಷ ಮಾಹಿತಿ ಹಾಗೂ ಸಲಹೆಗಳನ್ನು ನೀಡುವರು. ಅಲ್ಲದೆ ಐದು ಮೆರಿಟ್ ವಿದ್ಯಾರ್ಥಿಗಳಿಗೆ ತಲಾ 5000 ರು.ನಂತೆ ಸ್ಕಾಲರ್‌ಶಿಪ್ ನೀಡಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಶಾಸಕ ಚನ್ನಬಸಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮಾಜಿ ಶಾಸಕ
ಕೆ.ಬಿ.ಪ್ರಸನ್ನಕುಮಾರ. ನಟರಾಜ್ ಭಾಗವತ್, ಬ್ರಾಹ್ಮಣ ಪ್ರಾಧಿಕಾರದ ಸದಸ್ಯರಾದ ಮಾಲತೇಶ್, ಎಕೆಬಿಎಮ್ಎಸ್ ಜಿಲ್ಲಾ ಪ್ರತಿನಿಧಿ ರಘುರಾಮ್, ತಾಲೂಕು ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಸುರೇಶ್ ರಾವ್ ಸೇರಿದಂತೆ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor