MESCOM / ಶಿವಮೊಗ್ಗದಲ್ಲಿ ನಾಳೆ ಮತ್ತು ನಾಡಿದ್ದು ಎರಡು ದಿನ ವಿದ್ಯುತ್​ ಇರಲ್ಲ! ಎಲ್ಲೆಲ್ಲಿ? ಎಷ್ಟೊತ್ತಿಂದ? ವಿವರ ಓದಿ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 25, 2023 GOOGLE NEWS


ಶಿವಮೊಗ್ಗ/   ಮೆಸ್ಕಾಂ ಶಿವಮೊಗ್ಗದ ಆಲ್ಕೋಳದ ಸುತ್ತಮುತ್ತ ನಾಡಿದ್ದು   ಹಾಗೂ ಮಾಚೇನಹಳ್ಳಿ ಸುತ್ತಮುತ್ತ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ಹೊರಡಿಸಿದೆ.  ಪ್ರಕಟಣೆಯ ವಿವರ ಇಲ್ಲಿದೆ ಓದಿ

ಏ.27 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ಆಲ್ಕೊಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-11 ಮಾರ್ಗಗಳಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಹಮ್ಮಿಕೊಂಡಿದೆ. 

ಈ  ಕಾರಣ ಈ ಮಾರ್ಗದಿಂದ ವಿದ್ಯುತ್ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ಏ.27 ರ ಬೆಳಿಗ್ಗೆ 10-00 ರಿಂದ ಸಂಜೆ 06-00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ!?

ಪೊಲೀಸ್ ಚೌಕಿ, ಶಿವಾಲಯ ಹಿಂಭಾಗ ಮತ್ತು ಮುಂಭಾಗ, ಮೇಧಾರ್ ಕೇರಿ, ಲಕ್ಷ್ಮೀ ಟಾಕೀಸ್ ಎದುರು, ಡಿ.ವಿ.ಎಸ್.ಶಾಲೆ, ಬೊಮ್ಮನಕಟ್ಟೆ ರಸ್ತೆ, ವಿನೋಬನಗರ 100 ಅಡಿರಸ್ತೆ ಮತ್ತು 60 ಅಡಿರಸ್ತೆ, ಸಾಯಿಬಾಬಾ ದೇವಸ್ಥಾನ, ಶುಭಮಂಗಳ ಕಲ್ಯಾಣ ಮಂದಿರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

ಏ.26 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ ಮಾಚೇನಹಳ್ಳಿ 110/11 ಕೆವಿ ವಿದ್ಯುತ್‌ ವಿತರಣಾ ಕೇಂದ್ರದ ಎಫ್‌-3 ಮತ್ತು ಎಫ್-20 ಮಾರ್ಗಗಳಲ್ಲಿ ನಿರ್ವಹಣ ಕಾಮಗಾರಿ ಹಮ್ಮಿಕೊಂಡಿದೆ

ಈ ಮಾರ್ಗದಿಂದ ವಿದ್ಯುತ್‌ ಸರಬರಾಜು ಪಡೆಯುವ ಕೆಳಕಂಡ ಗ್ರಾಮಗಳಲ್ಲಿ ಏ.26 ರ ಬೆಳಿಗ್ಗೆ 10:00 ರಿಂದ ಸಂಜೆ 05:00 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಎಲ್ಲೆಲ್ಲಿ

ಮಾಚೇನಹಳ್ಳಿ, ಬಿದರೆ, ನಿದಿಗೆ, ಓತಿಘಟ್ಟ, ಸಿದ್ಧರಗುಡಿ, ಹಾರೇಕಟ್ಟೆ, ಸೋಗಾನೆ, ಆಚಾರಿ ಕ್ಯಾಂಪ್‌, ಹೊಸೂರು ರೆಡ್ಡಿಕ್ಯಾಂಪ್‌, ದುಮ್ಮಳ್ಳಿ, ಶುಗರ್‌ ಕಾಲೋನಿ ಮತ್ತು ಜಯಂತಿಗ್ರಾಮ, 

ಕಿಯೊನಿಕ್ಸ್‌ ಐ ಟಿ ಪಾರ್ಕ್‌, ಮಲ್ನಾಡ್‌ ಆಸ್ಪತ್ರೆ, ಕೆ.ಎಸ್‌.ಆರ್.ಪಿ ಕಾಲೋನಿ, ನವುಲೆ, ಬಸವಾಪುರ, ಹಾತಿಕಟ್ಟೆ ಹೊನ್ನವಿಲೆ, ಅಮರಾವತಿ ಕ್ಯಾಂಪ್‌, ಶೆಟ್ಟಿಹಳ್ಳಿ, ಹಳೇಶೆಟ್ಟಿಹಳ್ಳಿ, ಗುಡ್ರಕೊಪ್ಪ,

 ಮತ್ತಿಘಟ್ಟ, ಮಾಳೇನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

Malenadutoday.com Social media

 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor