BIG NEWS/ ಭದ್ರಾ ಡ್ಯಾಂನಿಂದ 1 ಟಿಎಂಸಿ ನೀರು ಬಿಡುಗಡೆ! ಈ ಪ್ರದೇಶಗಳಿಗೆ ಅನುಕೂಲ! ಪೂರ್ಣ ಮಾಹಿತಿ ಇಲ್ಲಿದೆ

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Apr 25, 2023 GOOGLE NEWS


ಹಾವೇರಿ ಜಿಲ್ಲೆಯ ರಾಣೆಬೆನ್ನೂರು, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಮತ್ತು ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಕುಡಿಯುವ ನೀರಿಗಾಗಿ ಭದ್ರಾ ಜಲಾಶಯದಿಂದ ತುಂಗಾ-ಭದ್ರಾ ನದಿಗೆ 1.00 ಟಿ.ಎಂ.ಸಿ. ನೀರನ್ನು ಹರಿಸಲು ಆದೇಶಿಲಾಗಿದೆ. 

ಪ್ರಾದೇಶಿಕ ಆಯುಕ್ತರ ಅದೇಶದನ್ವಯ ಏ.27 ರ ಸಂಜೆ 6.00 ರಿಂದ ಮೇ 09 ರ ಬೆಳಗ್ಗೆ 6.00 ರವರೆಗೆ ಪ್ರತಿ ದಿನ 1000 ಕ್ಯೂಸೆಕ್ಸ್ ನಂತೆ ಒಟ್ಟು 11574 ಕ್ಯೂಸೆಕ್ಸ್ ಪ್ರಮಾಣದ ನೀರನ್ನು ಭದ್ರಾ ನದಿಗೆ ಹರಿಸಲಾಗುತ್ತದೆ. 

ಈ ಅವಧಿಯಲ್ಲಿ ನದಿ ಪಾತ್ರದಲ್ಲಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು, ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಇತ್ಯಾದಿಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. 

ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್‍ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ ಕರ್ನಾಟಕ ನೀರಾವರಿ ನಿಗಮವು  ಪ್ರಕಟಣೆಯಲ್ಲಿ ತಿಳಿಸಿದೆ. 

Malenadutoday.com Social media

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor