ಶಿವಮೊಗ್ಗ ನಗರ ರೆಸಾರ್ಟ್ವೊಂದರಲ್ಲಿ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಮಹಿಳೆಯೊಬ್ಬಳ ಶವ ಪತ್ತೆಯಾಗಿತ್ತು. ಮಾತು ಬಾರದ ಮಹಿಳೆಯ ಕೊಲೆಯ ಬಗ್ಗೆ ನಗರವಾಗಲಿ, ಸಂಬಂಧಪಟ್ಟವರಾಗಲಿ ಹೆಚ್ಚು ಯೋಚಿಸಿರಲಿಲ್ಲ. ಆದರೆ ಪೊಲೀಸ್ ಇಲಾಖೆ ಸುಮ್ಮನಿರಲಿಲ್ಲ. ಆರೋಪಿಯನ್ನು ಉತ್ತರಪ್ರದೇಶಕ್ಕೆ (uttarpradesh) ಹೋಗಿ ಅರೆಸ್ಟ್ ಮಾಡಿ, ಪ್ಲೈಟ್ನಲ್ಲಿ ಕರೆದುಕೊಂಡು ಬಂದಿದೆ.
ಸರ್ಕಾರಿ ನೌಕರರಿಗೆ ಕಿರಿಕಿರಿ ಮಾಡಿದ್ರೆ ಹುಷಾರ್! ರಾಜ್ಯಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಎಚ್ಚರಿಕೆ
ನಡೆದಿದ್ದೇನು?
ಕಳೆದ ವರ್ಷ ನವೆಂಬರ್ 13 ರಂದು ನಗರದ ಹೊರವಲಯದಲ್ಲಿರೋ ರೆಸಾರ್ಟ್ವೊಂದರಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಮಹಿಳೆಯ ಸಾವು, ಆಕಸ್ಮಿಕವೆಂದು ಭಾವಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ತುಂಗಾನಗರ ಪೊಲೀಸರು (tunga nagara police) ಇಡೀ ಕೇಸ್ನ ಬಗ್ಗೆ ಬೇರೆಯದ್ದೆ ಯೋಚನೆ ಮಾಡಿದ್ದರು. ಏಕೆಂದರೆ, ಸಾವನ್ನಪ್ಪಿದ್ದ ಮಹಿಳೆಯ ಗಂಟಲಲ್ಲಿನಲ್ಲಿ ಕೆಸರು ಮಿಶ್ರಿತ ನೀರು ಇತ್ತು ಎಂದು ವರದಿಯಲ್ಲಿತ್ತು. ಇದು ಪೊಲೀಸರಿಗೆ ಕೊಲೆಯ ಶಂಕೆಯನ್ನು ಮೂಡಿಸಿತ್ತು. ಹಾಗಾಗಿ ರೆಸಾರ್ಟ್ನ ಸುತ್ತಮುತ್ತಲಿನ ಪರಿಸರವನ್ನು ಪರಿಶೀಲಿಸಿದ್ದರು. ಈ ವೇಳೆ ಅಲ್ಲಿಯೇ ಇದ್ದ ನೀರಿನ ಪ್ರದೇಶವೂ ಪೊಲೀಸರ ಕೊಲೆ ಶಂಕೆಗೆ ಮತ್ತಷ್ಟು ಪುಷ್ಟಿಕೊಟ್ಟಿತ್ತು. ಇದರ ನಡುವೆ ಮರಣೋತ್ತರ ಪರೀಕ್ಷೆ ವೇಳೆ ಕೆನ್ನೆಯ ಮೇಲಿದ್ದ ಗುರುತುಗಳು ಸಹ ಪೊಲೀಸರನ್ನ ಕೊಲೆ ಕೇಸ್ನ ತನಿಖೆ ಆರಂಭಕ್ಕೆ ಇಂಬು ಕೊಟ್ಟಿತ್ತು.
ಸಾಗರ ಟೌನ್ನಲ್ಲಿ ನಡೆದ ಹಲ್ಲೆ ಯತ್ನ ಕೇಸ್ ಬಗ್ಗೆ ಸಮೀರ್ ಸಹೋದರಿ ಹೇಳಿದ್ದೇನು? ವಿಡಿಯೋ ವರದಿ
ಕೊಲೆ ತನಿಖೆಗೆ ಕ್ಲೂ ಕೊಟ್ಟಿದ್ದು ಸಿಸಿ ಕ್ಯಾಮರಾ
45 ವರ್ಷದ ಸಾವಿತ್ರಿ ಅಲಿಯಾಸ್ ಮೂಕಮ್ಮ ಎಂಬವರ ಸಾವಿನ ತನಿಖೆಗೆ ಮುಂದಾದ ಪೊಲೀಸರು, ಮೊದಲು ಆಕೆಯ ಸಾವನ್ನಪ್ಪುದಕ್ಕೂ ಮೊದಲು ನಡೆದ ಘಟನೆಗಳನ್ನು ಸಿಸಿಟಿವಿಯಲ್ಲಿ ಪೊಲೀಸರು ಪರಿಶೀಲನೆ ನಡೆಸ್ತಿದ್ಧಾರೆ. ಎಷ್ಟೊತ್ತಿಗೆ ಕಾಣಿಸಿಕೊಂಡಿದ್ದಳು, ಆನಂತರ ಎಲ್ಲೆಲ್ಲಿ ಓಡಾಡಿದ್ದಳು. ಆಕೆಯ ಜೊತೆಗೆ ಯಾರಿದ್ದರು ಎಂಬಿತ್ಯಾದಿ ವಿಚಾರವನ್ನು ಪರಿಶೀಲಿಸಿದ ಪೊಲೀಸರಿಗೆ ಸಿಟಿ ಕ್ಯಾಮರಾವೂ ಒಂದು ಸಾಕ್ಷಿಯನ್ನು ಕೊಟ್ಟಿತ್ತು. ಆಕೆ ಸಾವನ್ನಪ್ಪಿದ ದಿನ, ಆಕೆಯ ಜೊತೆಗೆ ಒಬ್ಬಾತ ಅಲ್ಲಿಯೇ ಇದ್ದ ಕ್ಯಾಂಟೀನ್ನಲ್ಲಿ ಟೀ ಕುಡಿದಿದ್ದ. ಇವ ಯಾರು ಎಂದು ಪೊಲೀಸರು ವಿಚಾರಿಸಿದ್ದಾರೆ. ಅಲ್ಲಿಯೆ ಪೊಲೀಸರಿಗೆ ಅರ್ಧ ಕೆಲಸ ಮುಗಿದು ಹೋಗಿತ್ತು.
ಚಹಾ ಕುಡಿದವನಿಗಾಗಿ ಉತ್ತರಪ್ರದೇಶಕ್ಕೆ ತೆರಳಿದ ಪೊಲೀಸರು
ಏಕೆಂದರೆ, ಆಕೆಯ ಜೊತೆಗೆ ಚಹಾ ಕುಡಿದಿದ್ದ ವ್ಯಕ್ತಿಯು ರೆಟಾರ್ಟ್ನಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ. ಆದರೆ ಘಟನೆ ನಡೆದ ದಿನವೇ ಆತ ಅಲ್ಲಿಂದ ಕಾಲ್ಕಿತ್ತಿದ್ದ. ದೂರದ ಉತ್ತರಪ್ರದೇಶದ ಕರ್ಕ ಎಂಬ ಗ್ರಾಮಕ್ಕೆ ಹೋಗಿ ಸೇರಿದ್ದ. ಆತನ ಪೂರ್ವಪರ ವಿಚಾರಿಸಿದ ಪೊಲೀಸರು ಅಗತ್ಯ ಅನುಮತಿಗಳನ್ನು ಪಡೆದು ರೈಲು ಹತ್ತಿದ್ದರು. ನೇರವಾಗಿ ಕರ್ಕ ಗ್ರಾಮಕ್ಕೆ ಹೋಗಿ, ಅಲ್ಲಿಂದ ಮೂಕಮ್ಮನ ಜೊತೆ ಚಹಾ ಕುಡಿದಿದ್ದ ಜೋಗಿಂದರ್ 40 ವರ್ಷ ಪ್ರಾಯದ ವ್ಯಕ್ತಿಯನ್ನ ಹಿಡಿದಿದ್ದಾರೆ. ಅಲ್ಲದೆ ಲಖನೌದಿಂದ ಬೆಂಗಳೂರಿಗೆ ವಿಮಾನದ ಮೂಲಕ ಆತನನ್ನು ಕರೆದುಕೊಂಡು ಬಂದು, ಅಲ್ಲಿಂದ ಶಿವಮೊಗ್ಗ ತುಂಗಾನಗರ ಠಾಣೆಗೆ ಕರೆತಂದು ವಿಚಾರಿಸಿದ್ದಾರೆ. ಆತ ಪೊಲೀಸರ ಪ್ರಶ್ನೆಗಳಿಗೆ ಚಾಚು ತಪ್ಪದೆ ಉತ್ತರಿಸಿದ್ದ.
ಸಾಗರ ಟೌನ್ನಲ್ಲಿ ಹಲ್ಲೆಗೆ ಯತ್ನ ಕೇಸ್/ ಆರೋಪಿಗಳ ಬಂಧನ/ ಶಾಸಕ ಹರತಾಳು ಹಾಲಪ್ಪ ಹೇಳಿದ್ದೇನು? ಇಲ್ಲಿದೆ ವಿಡಿಯೋ ವರದಿ
2 ಸಾವಿರ ರೂಪಾಯಿಗೆ ಕೊಲೆ ಮಾಡಿದ್ದ
ಅಸಲಿಗೆ ಜೋಗಿಂದರ್ ಹಾಗೂ ಮೂಕಮ್ಮ ಇಬ್ಬರು ರೆಸಾರ್ಟ್ನಲ್ಲಿಯೇ ಪರಿಚಯವಾಗಿ ಸ್ನೇಹಿತರಾಗಿದ್ದರು. ಇಬ್ಬರ ನಡುವೆ ಸಲುಗೆಯು ಸಹ ಇತ್ತಂತೆ. ಇದೇ ಸಲುಗೆಯಲ್ಲಿ ಕೊಲೆಯಾದ ದಿನ ಅವರಿಬ್ಬರು ಅಲ್ಲಿಯೇ ಒಂದು ಸ್ಥಳದಲ್ಲಿ ಸೇರಿದ್ದಾರೆ. ಆಗ ಸಾವಿತ್ರಿ 2 ಸಾವಿರ ರೂಪಾಯಿಯನ್ನು ಕೇಳಿದ್ದಳಂತೆ. ಅದಕ್ಕೆ ಈ ಹಿಂದೆ ಕೊಟ್ಟಿದ್ದೆ 2 ಸಾವಿರ ಬಂದಿಲ್ಲ, ಈಗ ಕೊಡಲು ಆಗಲ್ಲ ಎಂದಿದ್ದಾನೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ತನ್ನ ಕೃತ್ಯಗಳು ಬಯಲಾಗುವ ಆತಂಕದಲ್ಲಿ ಆರೋಪಿ, ಆಕೆಯನ್ನು ಅಲ್ಲಿಯೇ ಹರಿಯುತ್ತಿದ್ದ ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿದ್ಧಾನಂತೆ. ಅಷ್ಟೆಅಲ್ಲದೆ, ಅಲ್ಲಿಂದ ಸೀದಾ ರೂಮಿಗೆ ಬಂದು, ಬಟ್ಟೆ ಪ್ಯಾಕ್ ಮಾಡಿಕೊಂಡು ಉತ್ತರಪ್ರದೇಶದ ಬಸ್ ಹತ್ತಿದ್ದ ಆರೋಪಿ. ಅಂತಿಮವಾಗಿ ಸಿಗೆಬಿದ್ದ ಜೋಗಿಂದರ್ ಹೀಗೆ ಮಾಡಿದೆ ಎಂಬುದಾಗಿ ಆರೋಪಿ ಪೊಲೀಸರ ಎದುರು ಒಪ್ಪಿಕೊಂಡಿದ್ಧಾನೆ.
ಶಿವಮೊಗ್ಗದ ಖ್ಯಾತ ಮಕ್ಕಳ ವೈದ್ಯ. ಸರ್ಜಿ ಹಾಸ್ಟಿಟಲ್ನ ಡಾಕ್ಟರ್ ಸತೀಶ್ ಇನ್ನಿಲ್ಲ
ತುಂಗಾ ನಗರ ಪೊಲೀಸರ ಕಾರ್ಯಾಚರಣೆ
ಒಟ್ಟಾರೆ ಎರಡು ತಿಂಗಳ ಬಳಿಕ ಬಡವರ್ಗದ ಮಾತು ಬಾರದ ಮಹಿಳೆಯ ಕೊಲೆ ರಹಸ್ಯವೊಂದು ಬಯಲಾಗಿದೆ. ಇತ್ತೀಚೆಗೆ ತುಂಗಾನಗರ ಪೊಲೀಸರು ಕಾರ್ ಕಳೆದುಹೋಗಿದೆ ಎಂದು ಕಂಪ್ಲೇಂಟ್ ಕೊಟ್ಟ ಮಾಲೀಕನನ್ನೆ ಹಿಡಿದು, ಆತನ ಕುತಂತ್ರವನ್ನು ಬಯಲು ಮಾಡಿದ್ದರು. ಇದೀಗ ಸಾಮಾನ್ಯ ಮಹಿಳೆಯ ಪ್ರಕರಣವೊಂದನ್ನು ಭೇದಿಸಿದ್ದಾರೆ. ತುಂಗಾನಗರ ಠಾಣೆಯ ಪೊಲೀಸರ ಈ ತನಿಖಾ ಕಾರ್ಯಾಚರಣೆ ನಿಜಕ್ಕೂ ಮೆಚ್ಚುವಂತದ್ದು.
ಸಾಗರ ಸುದ್ದಿ : ನಡೆವ ಘಟನೆಗಳಿಗೆಲ್ಲಾ ಕೋಮು ಬಣ್ಣ ಕಲ್ಪಿಸುವುದು ಬೇಡ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com




