bajrang dal/ ಏಕಾಯೇಕಿ ನಿಷೇಧ ಮಾಡಲು ಸಾಧ್ಯವಿಲ್ಲ!

ಹಂಚಿಕೊಳ್ಳಿ
WhatsApp Facebook X Telegram
image_750x500_6387af12801a4

KARNATAKA NEWS/ ONLINE / Malenadu today/ May 4, 2023 GOOGLE NEWS

ಸಾಗರ/ ಶಿವಮೊಗ್ಗ/ ಸದ್ಯ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗ ದಳದ ವಿಚಾರವಾಗಿ  ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಅಲ್ಲದೆ ಬಿಜೆಪಿ ಇದನ್ನು ದೊಡ್ಡ ಇಶ್ಯು ಮಾಡುತ್ತಿದ್ದು, ಚುನಾವಣಾ ಅಸ್ತ್ರವಾಗಿ ಬಳಕೆ ಮಾಡಿಕೊಳ್ತಿದೆ. ಇದರ ನಡುವೆ ಪ್ರಣಾಳಿಕೆಯಲ್ಲಿ ಈ ವಿಚಾರದ ಬಗ್ಗೆ ಕಾಂಗ್ರೆಸ್​ನಲ್ಲಿಯೇ ಪರ ವಿರೋದ ಚರ್ಚೆಗಳು ನಡೆಯುತ್ತಿವೆ. 

ಈ ಸಂಬಂಧ ಕಾಂಗ್ರೆಸ್​ ಪಕ್ಷ ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪ ರವರು ಮಾತನಾಡಿದ್ದು,  ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ವ್ಯಕ್ತಪಡಿಸಿರುವ ಬಜರಂಗ ದಳ ನಿಷೇಧದ ವಿಚಾರ ಕಾನೂನಿಗೆ ಸಂಬಂಧಿಸಿದ್ದಾಗಿದೆ ಎಂದಿದ್ದಾರೆ. 

ಕಾನೂನಿನಲ್ಲಿ ಇಂತಹ ಸಂಘಟನೆಗಳ ನಿಷೇಧಕ್ಕೆ ಅವಕಾಶವಿದೆಯಾ ಎನ್ನ ವುದನ್ನು ಗಮನಿಸಬೇಕಿದೆ. ಅಲ್ಲದೆ, ಮುಖ್ಯವಾಗಿ ಬಜರಂಗದಳ ಇರಬಹುದು ಇನ್ನಿತರೆ ಸಂಘಟನೆಗಳು ಇರಬಹುದು, ಯಾವುದೇ ಸಂಟನೆಯಾಗಲಿ, ಅದನ್ನು ನಿಷೇಧ ಮಾಡಬೇಕಾದರೆ ಅವುಗಳಿಂದ ಸಾಮಾಜಿಕವಾಗಿ ತೊಂದರೆ ಏನಾಗಿದೆ ಅದರ ಪರಿಣಾಮ ಮತ್ತಿತರ ಸಂಗತಿಗಳನ್ನು ಪರಿಶೀಲಿಸಿ ನಿರ್ಧಾರ ಕೈಗೂಳ್ಳಬೇಕಾಗುತ್ತದೆ. ಹೀಗೆ ಏಕಾಏಕಿ ನಿಷೇಧ ಮಾಡಲು ಸಾಧ್ಯವಿಲ್ಲ ಎಂದಿದ್ಧಾರೆ. 

 


ಕಾಂಗ್ರೆಸ್ ಪ್ರಣಾಳಿಕೆಯ ಪ್ರತಿಯನ್ನ ಸುಟ್ಟ ಕೆ.ಎಸ್​.ಈಶ್ವರಪ್ಪ! ಕಾರಣ?

ಕಲಬುರಗಿ/ ಭಜರಂಗ ದಳವನ್ನು ನಿಷೇಧ ಮಾಡುವ ಪ್ರಸ್ತಾವನೆ ಇರುವ ಕಾಂಗ್ರೆಸ್​  ಪ್ರಣಾಳಿಕೆಯನ್ನು ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಸುಟ್ಟುಹಾಕಿದ್ದಾರೆ. ಅಲ್ಲದೆ  ಇದು ರಾಷ್ಟ್ರ ದ್ರೋಹಿ ಪ್ರಣಾಳಿಕೆಯಾಗಿದ್ದು, ಕಾಂಗ್ರೆಸ್ ಕೂಡಲೇ ಈ ಪ್ರಣಾಳಿಕೆಯನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ಕಲಬುರಗಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ, ಮಾಧ್ಯಮಗಳ ಮುಂದೆ, ಅವರು ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಪ್ರತಿಯನ್ನು ಸುಟ್ಟು ಹಾಕಿದರು. ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ, ಧರ್ಮದ ಬಗ್ಗೆ ಕಿಡಿಕಾರುತ್ತಿದೆ. 

ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ರನ್ನ ಬಂಧಿಸಬೇಕು

ಜಾತಿ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷ ಬಿತ್ತಿ ವಿಭಜನೆಗೆ ಕಾರಣವಾಗುತ್ತಿದೆ. ಈ ರೀತಿ ವಿಷ ಬೀಜ ಬಿತ್ತುತ್ತಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ನವರು ಮಾನಸಿಕ ಸ್ಥಿತಿ ಹೇಗಾಗಿದೆ ಎನ್ನುವುದು ಜನರಿಗೆ ಗೊತ್ತಾಗಿದೆ. ಕಾಂಗ್ರೆಸ್ ನವರು ಹಿಂದೂ-ಮುಸ್ಲಿಂ ಚುನಾವಣೆ ಮಾಡಲು ಹೊರಟಿದ್ದಾರೆ. ನಾವೆಲ್ಲಾ ಮುಸ್ಲಿಮರು ಎಂದು ಕಾಂಗ್ರೆಸ್ ನವರು ಹೇಳಿಕೊಂಡು ತಿರುಗುತ್ತಿದ್ದಾರೆ. ನಿಮಗೆ ಬರೀ ಮುಸ್ಲಿಂ ಮತಗಳು ಮಾತ್ರ ಸಾಕಾ ? ಹಿಂದೂಗಳ ಮತ ಬೇಡ್ವಾ ಎಂದು ಪ್ರಶ್ನಿಸಿದರು.

ಚುನಾವಣಾ ಅಖಾಡದಲ್ಲಿ ಮನೆ ‘ಮಗಳು’ ಅಭ್ಯರ್ಥಿಗಳಿಗೆ ಗೆಲುವು ತಂದುಕೊಡ್ತಾರಾ ಅದೃಷ್ಟ ಲಕ್ಷ್ಮೀಯರು?

ಶಿವಮೊಗ್ಗ/  ಜಿಲ್ಲೆಯ ಚುನಾವಣೆ ಹೊಸ ರಂಗು ಪಡೆದುಕೊಳ್ಳುತ್ತಿದೆ. ರಾಜಕೀಯದ ಅಖಾಡದಲ್ಲಿ ಅಭ್ಯರ್ಥಿಗಳ ಸಂಬಂಧಿಕರು, ಕುಟುಂಬಸ್ಥರು ಅಷ್ಟೆಯಾಕೆ ಮಕ್ಕಳು ಸಹ ಮತಯಾಚನೆಯಲ್ಲಿ ತೊಡಗಿದ್ದಾರೆ. ಶಿವಮೊಗ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್​ಸಿ ಯೋಗೇಶ್  ಪರವಾಗಿ ಅವರ ಪತ್ನಿ ಹಾಗೂ ಅವರ ಕುಟುಂಬಸ್ಥರು ಬಂದು ಬಳಗ ಪ್ರಚಾರ ನಡೆಸ್ತಿದೆ. ಇದು ಪಕ್ಷದಲ್ಲಿಯೇ ಅಸಮಾಧಾನಕ್ಕೂ ಕಾರಣವಾಗಿದೆ. ಹಾಗಿದ್ರೂ ಪ್ರಚಾರ ನಂಬಿಕೆಯ ವಿಶ್ವಾಸ ಮೂಡಿಸ್ತಿದೆ. 

ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪರವರ ಪತ್ನಿ ಕೂಡ ಪ್ರಚಾರದಲ್ಲಿ ಸಾಥ್ ನೀಡುತ್ತಿದ್ದಾರೆ.  ಸೊರಬದಲ್ಲಿ ಮಧು ಬಂಗಾರಪ್ಪರವರ ಪತ್ನಿ ಪ್ರಚಾರದಲ್ಲಿ ತೊಡಗಿದ್ಧಾರೆ. ಭದ್ರಾವತಿಯಲ್ಲಿ ಬಿಕೆ ಸಂಗಮೇಶ್ವರ್​ರವರ ಪರವಾಗಿ ಅವರ ಮಕ್ಕಳು ಚುನಾವಣಾ ಓಡಾಟದಲ್ಲಿ ಸಕ್ರಿಯವಾಗಿದ್ಧಾರೆ. ಹೀಗೆ ಪ್ರತಿಯೊಬ್ಬ ಅಭ್ಯರ್ಥಿಯ ಪರವಾಗಿ ಅವರ ಮನೆಯ ಕಡೆಯವರು ಓಡಾಡುತ್ತಿದ್ಧಾರೆ. 

ಇದರ ನಡುವೆ ಕುತೂಹಲ ಮೂಡಿಸುತ್ತಿರುವುದು ಮನೆಯ ಅದೃಷ್ಟ ಲಕ್ಷ್ಮೀಯರು. ಹೌದು, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣರ ಪರವಾಗಿ ಅವರ ಮಗಳು ಮೇಘ ಪ್ರಚಾರ ನಡೆಸ್ತಿದ್ದಾರೆ. ಇದು ಚುನಾವಣಾ ಅಖಾಡದಲ್ಲಿಯು ಸಂಚಲನ ಮೂಡಿಸ್ತಿದೆ. ನಿನ್ನೆ ಆನಂದಪುರದಲ್ಲಿ ಪ್ರಚಾರ ನಡೆಸಿದ್ದ ಮೇಘಾ ಇವತ್ತು ಹಿರಿಯ ಮುಖಂಡ ಕಾಗೋಡು ತಿಮ್ಮಪ್ಪರವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. 

ಸೊರಬ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಸ್ಪರ್ಧಿಸಿರುವ ಶಾಸಕ ಎಸ್. ಕುಮಾರ್ ಬಂಗಾರಪ್ಪ ಪರವಾಗಿ ಅವರ ಪುತ್ರಿ ಲಾವಣ್ಯ ಪ್ರಚಾರದಲ್ಲಿ ತೊಡಗಿದ್ದಾರೆ. ಇವತ್ತು ಅವರು ತಾಲೂಕಿನ ಹೊಳೆಕೊಪ್ಪ ಗ್ರಾಮದಲ್ಲಿ ತಮ್ಮ ತಂದೆ ಪರವಾಗಿ ಮತಯಾಚಿಸಿದ್ರು. ಮತ್ತಷ್ಟು ಅಭಿವೃದ್ಧಿ ಮಾಡಲು ತಮ್ಮ ತಂದೆಗೆ ಮತಕೊಡಿ ಎಂದು ಕೇಳುತ್ತಿದ್ದಾರೆ. 

 

ಮನೆ ಹೆಣ್ಣುಮಕ್ಕಳು ಚುನಾವಣಾ ರಾಜಕೀಯದ ಅಖಾಡದಲ್ಲಿ ವಿಶ್ವಾಸ ಮೂಡಿಸುವ ಹಾಗೆ ಅಭ್ಯರ್ಥಿಗಳ ಪರವಾಗಿ ಮತ ಕೇಳುತ್ತಿರುವುದು ವಿಶೇಷವಾಗಿ ಕಾಣುತ್ತಿದೆ. ಗಂಡು ಮಕ್ಕಳು ಅಧಿಕಾರಯುತವಾಗಿ ಪ್ರಚಾರ ಮಾಡುವುದು ಸಾಮಾನ್ಯ. ಇದಕ್ಕೆ ಪ್ರತಿಯಾಗಿ ಸೊರಬ ಹಾಗೂ ಸಾಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಪುತ್ರಿಯರು ಮತ ಯಾಚಿಸ್ತಿದ್ಧಾರೆ. ಮತದಾರ ಇದಕ್ಕೆ ಯಾವ ರೀತಿ ಪ್ರತಿಕ್ರಿಯಿಸ್ತಾನೆ ಎಂಬುದನ್ನ ಕಾದು ನೋಡಬೇಕಿದೆ. 

Malenadutoday.com Social media

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor