Summer Vacation Safety ಶಿವಮೊಗ್ಗ : ಇತ್ತೀಚಿನ ವರ್ಷಗಳಲ್ಲಿ ಮಲೆನಾಡಿನಲ್ಲಿ ಬೇಸಿಗೆ ರಜೆಗೆಂದು ಸಂಬಂಧಿಕರ ಮನೆಗೆ ತೆರಳುವ ಮಕ್ಕಳ ಸಾವು ನೋವಿನ ಪ್ರಕರಣಗಳು ಆಘಾತವನ್ನುಂಟು ಮಾಡುತ್ತಿದೆ. ಭಾವನಾತ್ಮಕ ಸಂಬಂಧಗಳು ಇಂತಹ ಘಟನೆಗಳಿಗೆ ಕಾರಣವಾದಾಗ ಸಂಬಂಧ ಮತ್ತಷ್ಟು ಹಳಸಿಬಿಡುತ್ತವೆ. ಬೇಸಿಗೆ ರಜೆಗಾಗಿ ಅಜ್ಜಿ ಮನೆ, ಚಿಕ್ಕಮ್ಮ, ದೊಡ್ಡಪ್ಪನ ಮನೆಯಂತ ಸಂತೋಷದಿಂದ ಹೋಗುವ ಮಕ್ಕಳು ಏನಾದರೊಂದು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕೃಷಿ ಹೊಂಡದಲ್ಲಿ ಬಿದ್ದ ಘಟನೆ, ಜೋಕಾಲಿಗೆ ಸಿಲುಕಿಕೊಂಡ ಘಟನೆ, ಹುಲಿ ಖರ್ಜುರ ಕಚ್ಚಿ ಸಾವನ್ನಪ್ಪಿದ ಘಟನೆ, ಹಾಗು ಹಾವು ಕಚ್ಚಿ ಸಾವನ್ನಪ್ಪಿದ ಪ್ರಕರಣಗಳನ್ನು ಗಮನಿಸಿದಾಗ, ಮಕ್ಕಳನ್ನು ಸಂಬಂಧಿಗಳ ಮನೆಗೆ ಕಳುಹಿಸುವುದೇ ಬೇಡ ಎನಿಸುತ್ತದೆ. ಹಾಗಂತ ಸಂಬಂಧಗಳನ್ನು ಬಿಡಲು ಸಾಧ್ಯವಿಲ್ಲ. ಇಂತಹ ಎರಡು ಕಹಿ ಘಟನೆಗಳು ಈ ವರ್ಷದಲ್ಲಿ ನಡೆದುಹೋಗಿದೆ.
ಶಿವಮೊಗ್ಗ : ಬಟ್ಟೆ ವ್ಯಾಪಾರಿಗೆ ಲಾಂಗ್ ತೋರಿಸಿ ಹಣ ಸುಲಿಗೆ, ಪ್ರಕರಣ ದಾಖಲು
Summer Vacation Safety ಜೋಲಿಗೆ ಸಿಲುಕಿ ಬಾಲಕಿ ಸಾವು, ಚಿಕ್ಕಮ್ಮನ ಮನೆಗೆ ಬಂದಾಗ ಘಟನೆ
ಕಳೆದ ನಾಲ್ಕು ದಿನಗಳ ಹಿಂದೆ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಕುತ್ತಿಗೆಗೆ ಕುಣಿಕೆ ಬಿಗಿದುಕೊಂಡು ಒಂಬತ್ತು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ. ಶಿವಮೊಗ್ಗದ ವಿದ್ಯಾನಗರದ ನಿವಾಸಿಯಾಗಿರುವ 9 ವರ್ಷದ ಪ್ರಣಮ್ಯ ಮೃತ ದುರ್ದೈವಿ. ಬೇಸಿಗೆಯ ರಜೆ ಕಳೆಯುವ ಉದ್ದೇಶದಿಂದ ಪ್ರಣಮ್ಯ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದಳು. ಈ ವೇಳೆ ಮನೆಯ ಒಳಗಡೆ ಕೋಣೆಯ ಬಾಗಿಲನ್ನು ಹಾಕಿಕೊಂಡು, ಪಂಚೆಯನ್ನು ಬಳಸಿ ಜೋಕಾಲಿಯನ್ನು ಕಟ್ಟಿಕೊಂಡು ಆಟವಾಡುತ್ತಿದ್ದಳು. ಹೀಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಂಚೆಯು ಕುತ್ತಿಗೆಗೆ ಬಿಗಿದುಕೊಂಡು ಈ ಅವಘಡ ಸಂಭವಿಸಿದೆ.
ಹಾವು ಕಡಿದು ಎರಡು ವರ್ಷದ ಮಗು ಸಾವು, ತಾಯಿ ತವರು ಮನೆಗೆ ಬಂದಾಗ ಘಟನೆ
16-04-26 ರಂದು ಹಾವು ಕಡಿದು 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಸಾಗರ ಪಟ್ಟಣದ ಎಸ್.ಎಸ್ ನಗರದಲ್ಲಿ ನಡೆದಿದೆ.ಎಸ್.ಎಸ್ ನಗರದ ಅಕ್ಷತಾ ಹಾಗೂ ಗಣೇಶ್ ದಂಪತಿ ಪುತ್ರ ಭವಿನ್ (2) ಮೃತ ಮಗು. ಅಕ್ಷತಾ ಮಗುವಿನೊಂದಿಗೆ ಸಾಗರದಲ್ಲಿನ ತವರು ಮನೆಗೆ ಬಂದಿದ್ದರು. ಮನೆಯ ಮುಂದೆ ಆಟವಾಡುತ್ತಿದ್ದ ವೇಳೆ ಮಗುವಿಗೆ ಹಾವು ಕಚ್ಚಿದೆ. ಮಗು ಅಳುವುದನ್ನು ಕಂಡು ಕುಟುಂಬಸ್ಥರು ಬಂದು ನೋಡಿದಾಗ ಹಾವು ಕಚ್ಚಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿತು.
ಬಾಲಕನಿಗೆ ಉರುಳಾದ ಜೋಕಾಲಿ, ಅತ್ತೆಯ ಮನೆಗೆ ಬಂದಾಗ ಘಟನೆ
ಶಿವಮೊಗ್ಗ ಜಯನಗರದಲ್ಲಿ 22-08-21 ರಂದು ಬಾಲಕನೊಬ್ಬ ಸೀರೆಯಿಂದ ಜೋಕಾಲಿ ಆಡುವಾಗ ಸೀರೆಗೆ ಸಿಲುಕಿ ಧಾರುಣವಾಗಿ ಸಾವು ಕಂಡಿದ್ದ. ಭದ್ರಾವತಿಯ ಅರಹತೊಳಲು ಗ್ರಾಮದ ಬಾಲಕ ಭರತ್(12) ಸಾವನ್ನಪ್ಪಿದ ಬಾಲಕ. ದಂತ ವೈದ್ಯರ ಬಳಿ ಚಿಕಿತ್ಸೆಗಾಗಿ ಬಂದಿದ್ದ ಭರತ್ ತಾಯಿಯೊಂದಿಗೆ ಜಯನಗರದಲ್ಲಿರುವ ಅತ್ತೆಯ ಮನೆಗೆ ಹೋದ. ಊಟವಾದ ನಂತರ ಭರತ್ ಮನೆಯಂಗಳದಲ್ಲಿ ಸೀರೆ ಕಟ್ಟಿಕೊಂಡು ಜೋಕಾಲಿ ಆಡಲು ಅಣಿಯಾದ. ಇತ್ತ ತಾಯಿ ಅತ್ತೆ ನಿದ್ದೆಗೆ ಜಾರಿದರು.. ಜೋಕಾಲಿ ಸುರುಳಿ ಸುತ್ತಿ ಭರತ್ ಗೆ ಉರುಳಾಯಿತು.. ನಿದ್ದೆಯಲ್ಲಿದ್ದವರಿಗೆ ಭರತ್ ನ ಆರ್ಥನಾದ ಕೇಳಲಿಲ್ಲ. ಜೋಕಾಲಿಯಲ್ಲಿಯೇ ಜೀವಬಿಟ್ಟಿದ್ದಾನೆ ಆ ಕಂದಮ್ಮ. ತೀರ್ಥಹಳ್ಳಿಯ ಕಾಂಗ್ರೆಸ್ ಮುಖಂಡರೊಬ್ಬರ ಮಗಳು ಜೋಕಾಲಿ ಆಡುವಾಗಲೇ ಜೋಲಿಗೆ ಸಿಲುಕಿ ಸಾವನ್ನಪ್ಪಿದ ಘಟನೆ ಇನ್ನು ಹಸಿರಾಗಿಯೇ ಇದೆ. ಇಂತಹ ಘಟನೆಗಳು ಎಚ್ಚರಿಕೆಯ ಕರೆ ಗಂಟೆಯಾಗಿದೆ.
Summer Vacation Safety ಮಕ್ಕಳಿಗೆ ಅಮ್ಮನ ಸೀರೆಯ ಜೋಕಾಲಿ ಅಚ್ಚುಮೆಚ್ಚು
ಸಂಬಂಧಿಕರ ಮನೆಗೆ ತೆರಳಿ ಮಕ್ಕಳು ಸಾವನ್ನಪ್ಪಿದ ಪ್ರಕರಣಗಳು ಪೋಷಕರನ್ನು ಬಡಿದೆಬ್ಬಿಸಿದೆ. ಈ ರೀತಿ ಜೋಕಾಲಿ ಆಡುವಾಗ ಸಾವು ನೋವು ಸಂಭವಿಸಿದ ಘಟನೆಗಳು ಮಲೆನಾಡಿನಲ್ಲಿ ಇನ್ನು ಹಸಿರಾಗಿಯೇ ಇದೆ. ಜೋಗುಳ ಹಾಡಿದಂತೆ ಮನಸ್ಸಿಗೆ ಮುದ ನೀಡುವ ಜೋಕಾಲಿ..,ಮಕ್ಕಳ ಮನಸ್ಸನ್ನು ಬೇರೊಂದು ಲೋಕಕ್ಕೆ ಕೊಂಡೊಯ್ಯುತ್ತದೆ..ಇದರಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಹೀಗಾಗಿ ಮಕ್ಕಳು ಅನಾಯಾಸವಾಗಿ ಇಷ್ಟಪಡುವ ಮನರಂಜನೆಯೆಂದರೆ ಅದು ಜೋಕಾಲಿ. ಹಳ್ಳಿಮನೆಗಳಲ್ಲಿ ಜೋಕಾಲಿಯನ್ನು ಹಗ್ಗ ಇಲ್ಲವೇ ಸೀರೆಯಿಂದ ಮಾಡಿಕೊಂಡು ಗಟ್ಟಿಯಾದ ಮರ ಇಲ್ಲವೇ ಸಲಾಕೆಗೆ ಕಟ್ಟಿ ಆಡುತ್ತಾರೆ. ಜೋಕಾಲಿ ಆಡುವಾಗ ಕನಿಷ್ಟ ಇಬ್ಬರಾದ್ರೂ ಇದ್ದರೆ ಒಳ್ಳೆಯದು ಅನ್ನುತ್ತಾರೆ ಅನುಭವಸ್ಥರು.
Summer Vacation Safety ಏಕಾಂಗಿಯಾಗಿ ಜೋಕಾಲಿ ಆಡಲು ಬಿಡದಿರಿ
ಏಕಾಂಗಿಯಾಗಿ ಜೋಕಾಲಿ ಆಡುವಾಗ ವ್ಯತ್ಯಾಸಗಳಾದರೆ..ಜೋಕಾರಿ ಸುರುಳಿ ಸುತ್ತಿಕೊಂಡರೆ ತಕ್ಷಣಕ್ಕೆ ಸಾವಿನಿಂದ ಪಾರಾಗುವುದು ಕಷ್ಟ. ಮಲೆನಾಡಿನಲ್ಲಿ ಜೋಕಾಲಿಗಳು ನೊಂದ ಕುಟುಂಬಗಳನ್ನು ಇನ್ನು ಕಣ್ಣೀರಿನಲ್ಲಿ ಕೈತೊಳೆಸುತ್ತಿವೆ. ಇತ್ತಿಚ್ಚಿಗೆ ಹೊಸ ತಲೆಮಾರಿನ ಜೋಕಾಲಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ಮಕ್ಕಳು ಬಯಸುವುದು ಅಮ್ಮನ ಸೀರೆಯನ್ನೇ ಎಂಬುದು ವಾಸ್ತವದ ಕಟುಸತ್ಯವಾಗಿದೆ. ಜೋಕಾಲಿ ಅಪಾಯ ಎಂದು ಗೊತ್ತಿದ್ದರೂ ಪೋಷಕರು ಗೊತ್ತಿಲ್ಲದೆ ಎಡವುತ್ತಾರೆ. ಮಗು ಜೋಕಾಲಿ ಆಡುತ್ತಿದೆ ಎಂದರೆ ಪೋಷಕರು ಸಮಕ್ಷಮದಲ್ಲಿದ್ದು, ಮಗುವಿನೊಂದಿಗೆ ಅವರು ಆಡಿದರೆ..ಇನ್ನು ಒಳ್ಳೆಯದೆ..ಏಕಾಂಗಿಯಾಗಿ ಜೋಕಾಲಿ ಆಡುವುದು ಎಂದಿದ್ದರೂ..ಅಪಾಯ.
Summer Vacation Safety ನೀರಿನ ಟ್ಯಾಂಕ್ ತೆರೆದರೆ ಮುಚ್ಚಿರಿ, ಕೃಷಿ ಹೊಂಡಗಳಿಗೆ ಮಕ್ಕಳನ್ನು ಬಿಡದಿರಿ
ಇನ್ನು ಮನೆ ಮುಂದೆ ನೀರಿನ ಸಂಗ್ರಹಕ್ಕಾಗಿ ನಿರ್ಮಿಸಿರುವ ಟ್ಯಾಂಕಿಗಳು ಸಹ ಸಾವಿನ ಷರ ಬರೆದಿವೆ. ನೀರಿನ ತೊಟ್ಟಿಗೆ ಬಿದ್ದು, ಮನೆ ಸನಿಹದ ಕೃಷಿ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ ಹಲವು ಘಟನೆಗಳು ಮಲೆನಾಡಿನಲ್ಲಿ ನಡೆದಿದೆ. ಮನೆ ಮುಂದೆ ನೀರಿನ ತೊಟ್ಟಿನ ಬಾಗಿಲು ತೆರೆದಾಗ ಅದನ್ನು ಮುಚ್ಚುವ ಸೌಜನ್ಯವನ್ನು ಬೆಳೆಸಿಕೊಳ್ಳಬೇಕು. ತೆರೆದ ತೊಟ್ಟಿಯಲ್ಲಿ ಬಿದ್ದು ಮಕ್ಕಳು ಸಾವನ್ನಪ್ಪಿದ ಹಲವು ಉದಾಹರಣೆಗಳು ಕಣ್ಣಮುಂದಿದೆ.
ನೀರಿನ ತೊಟ್ಟಿಬಳಿ ಕೃಷಿ ಹೊಂಡದ ಸನಿಹದ ಬಳಿ ಮಕ್ಕಳನ್ನು ಆಡಲು ಬಿಡದಿರುವುದೇ ಲೇಸು. ತಲೆಗಟ್ಟಿಯಿದೆ ಎಂದು ಬಂಡೆಗೆ ಜಜ್ಜಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಈಜು ಬಲ್ಲವರು ನೀರಿನ ಟ್ಯಾಂಕಿನಲ್ಲಿ ಈಜುವುದು ..ಕೃಷಿ ಹೊಂಡದಲ್ಲಿ ಈಜಲು ಹೋಗಿ ಎಡವಟ್ಟು ಮಾಡಿಕೊಳ್ಳುವುದರಿಂದ ಅಪಾಯ ಹೆಚ್ಚು., ಆಕಸ್ಮಿಕವಾಗಿ ಕಾಲುಜಾರಿ ಬಿದ್ದ ಪ್ರಕರಣಗಳಿಂದಲೂ ಸಾವುನೋವಾಗಿದೆ. ಹೀಗಾಗಿ ನಮ್ಮ ಹಿತಕ್ಕಾಗಿ ಮಾಡಿಕೊಂಡಿರುವ ಯೋಜನೆಗಳೇ ನಮಗೆ ಕುತ್ತಾಗಬಾರದು. ಆದ್ದರಿಂದ ಮಕ್ಕಳನ್ನು ಜೋಕಾಲಿಯಿಂದ ದೂರವಿಡಿ..ತೊಟ್ಟಿಯತ್ತ ಬಿಡದಿರಿ..ಈಡಲು ಕೃಷಿಹೊಂಡಕ್ಕೆ ಕಳುಹಿಸದಿರಿ..ಇದು ಮಲೆನಾಡು ಟುಡೆ ಕಾಳಜಿ
Summer Vacation Safety Guide for Children

