ವಾಟ್ಸ್ಯಾಪ್​ಗಳಲ್ಲಿ ಫಾರವರ್ಡ್ ಆಗುತ್ತಿರುವ ಈ ದೃಶ್ಯ ಶಿವಮೊಗ್ಗದಲ್ಲಿ ನಿನ್ನೆ ನಡೆದಿದ್ದಾ?? ಎಸ್​ಪಿ ಮಿಥುನ್ ಕುಮಾರ್ ರವರ​ ಎಚ್ಚರಿಕೆಯ ಸಂದೇಶವೇನು?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 8, 2023 SHIVAMOGGA NEWS

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟ ಘಟನೆ ಬನ್ನೆಲ್ಲೆ ನಿನ್ನೆ ಶಿವಮೊಗ್ಗ ನಗರದ ಏನೋ ಆಗೋಯ್ತು ಎಂಬಂತಹ ಸುದ್ದಿಯೊಂದನ್ನ ಮೈತುಂಬಾ ಗಾಯವಾಗಿರುವ ವ್ಯಕ್ತಿಯ ವಿಡಿಯೋವೊಂದನ್ನ ಇವತ್ತು ಬೆಳಗ್ಗೆಯಿಂದಲೂ ಹರಿಬಿಡಲಾಗುತ್ತಿದೆ. 

ರಾಗಿಗುಡ್ಡಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಎನ್ ಕೌಂಟರ್ ನಡೆದಿದೆ ಎಂಬ ಫೋಟೋವನ್ನ ಹರಿಬಿಟ್ಟು ಫೇಕ್ ಸುದ್ದಿಯನ್ನ ಹರಿಬಿಡಲಾಗಿತ್ತು. ಆನಂತರ ಹೀಗೇ ಸುದ್ದಿ ಹರಿಬಿಟ್ಟ ವ್ಯಕ್ತಿಯ ವಿರುದ್ದ ಪೊಲೀಸರು ಎಫ್ಐಆರ್ ದಾಖಲಿಸಿ, ಆತನ ಬೆನ್ನು ಹತ್ತಿದ್ದರು. 

ಅದೇ ರೀತಿಯಲ್ಲಿ ಶಿವಮೊಗ್ಗನಗರದಲ್ಲಿ ನಿನ್ನೆ ರಾತ್ರಿ ವ್ಯಕ್ತಿಯೊಬ್ಬನಿಗೆ ಇರಿಯಲಾಗಿದೆ ಎಂದು ಆರೋಪಿಸ್ತಾ, ವಿಡಿಯೋವೊಂದನ್ನ ಷೇರ್ ಮಾಡಲಾಗುತ್ತಿದೆ. ಈ ವಿಡಿಯೋ ಹಂಚಿಸುತ್ತಿರುವುದು ಯಾವುದೋ ಕಾಣದ ಕೈಗಳಾಗಿದ್ದು, ಇದರ ಬಗ್ಗೆ ಸಾಮಾನ್ಯರು ಎಚ್ಚೆತ್ತುಕೊಳ್ಳಬೇಕಿದೆ. 

ಅಧಿಕೃತ ಮೂಲಗಳಲ್ಲದೇ ಇನ್ನೆಲ್ಲಿಯು ಇಂತಹ ದೃಶ್ಯಗಳು ಬಂದರೆ, ಅದನ್ನು ನಂಬಲು ಹೋಗಬೇಡಿ. ಹಾಗೊಂದು ವೇಳೆ ಅನುಮಾನವಿದ್ದಲ್ಲಿ ನೇರವಾಗಿ ಪೊಲೀಸ್ ಇಲಾಖೆಗೆ ವಿಡಿಯೋ ಕಳುಹಿಸಬಹುದು. ಹಾಗೊಂದು ವೇಳೆ ಸುಳ್ಳು ವಿಡಿಯೋಗಳನ್ನು ಹರಿಬಿಟ್ಟರೇ ಕೇಸ್ ದಾಖಲಿಸಲಾಗುತ್ತದೆ. 

ಈ ಬಗ್ಗೆ ಸ್ವತಃ ಎಸ್​ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದು, ನಿನ್ನೆ ಏನೋ ನಡೆಯಿತು ಎಂದು ವಿಡಿಯೋವನ್ನು ಹರಿಬಿಡಲಾಗುತ್ತಿದೆ. ಆದರೆ ಈ ದೃಶ್ಯ ಚಿಕ್ಕಮಗಳೂರಿನಲ್ಲಿ ನಡೆದಿದ್ದಾಗಿದ್ದು, ಅದಕ್ಕೆ ಪೂರಕವಾದ ಆರೋಪಿಗಳನ್ನ ಅದಾಗಲೇ ಬಂಧಿಸಲಾಗಿದೆ. ಇಂತಹ ಸುಳ್ಳು ಸುದ್ದಿಯನ್ನು ಫಾರವರ್ಡ್​ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದ್ಧಾರೆ. 


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor