SHIMOGA NEWS LIVE

ಗಾಡಿಕೊಪ್ಪ, ಆಲ್ಕೊಳ ಬಳಿಕ ಇದೀಗ ಗಾರ್ಡನ್ ಏರಿಯಾ! ಹೇಗಿತ್ತು ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಶಿವಮೊಗ್ಗ ಟ್ರಾಫಿಕ್ ಪೊಲೀಸರು ಆಪರೇಷನ್​ ಪುಟ್​ಪಾತ್​ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಮಲ್ಲಿಕಾರ್ಜುನ ರಸ್ತೆಯಲ್ಲಿ ಮಂಡಕ್ಕಿ ಅಂಗಡಿಗಳ ತೆರವಿಗೆ ಸೂಚಿಸಿದ್ದ ಪೊಲೀಸರು ಆನಂತರ ಆಲ್ಕೋಳ, ಗಾಡಿಕೊಪ್ಪ ಸರ್ಕಲ್​ಗಳಲ್ಲಿ ಕಾರ್ಯಾಚರಣೆ ಕೈಗೊಂಡಿದ್ದರು. ಇದೀಗ ನಿನ್ನೆ ದಿನ ಗಾರ್ಡನ್ ಏರಿಯಾ ಭಾಗದಲ್ಲಿ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ.

ಗಾಡಿಕೊಪ್ಪ, ಆಲ್ಕೊಳ ಬಳಿಕ ಇದೀಗ ಗಾರ್ಡನ್ ಏರಿಯಾ! ಹೇಗಿತ್ತು ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ Shivamogga Traffic Police Clear Footpath and Road Encroachments in Garden Area

ಗಾರ್ಡನ್ ಏರಿಯಾದ 1ನೇ ಕ್ರಾಸ್, 2ನೇ ಕ್ರಾಸ್ ಹಾಗೂ 3ನೇ ಕ್ರಾಸ್ ರಸ್ತೆಗಳಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಗಿದೆ. ಜನ್ರ ಓಡಾಟಕ್ಕೆ ಕಿರಿಕಿರಿಯಾಗುವಂತೆ ಪುಟ್​ಪಾತ್​ ಮೇಲೆ ವ್ಯವಹಾರಸ್ಥರು ನಾನಾ ಸಾಮಗ್ರಗಿಳನ್ನು ಇಟ್ಟಿದ್ದನ್ನ ತೆರವುಗೊಳಿಸಿದ ಪೊಲೀಸರು, ಮತ್ತೆ ಅದೇ ರೀತಿಯಲ್ಲಿ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ.

Malenadu Today Shivamogga

ಶಿವಮೊಗ್ಗ ಸಿಟಿಯಲ್ಲಿ ರಸ್ತೆ ಎಂಬುದು ಒತ್ತುವರಿ ಜಾಗವಾಗಿದೆ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಗಾರ್ಡ್​ನ್​ ಏರಿಯಾದಲ್ಲಿಯು ಸಹ ಸ್ಥಳೀಯ ವ್ಯಾಪಾರಿಗಳು ಕಬ್ಬಿಣದ ವಸ್ತುಗಳು, ಬೃಹತ್ ಜಾಹೀರಾತು ಫಲಕಗಳು ಮತ್ತು ತಮ್ಮ ಅಂಗಡಿಗೆ ಸೇರಿದ ಇತರೆ ಸಾಮಗ್ರಿಗಳನ್ನು ಅನಧಿಕೃತವಾಗಿ ಇರಿಸಿಕೊಂಡಿದ್ದರು.

ಇದರಿಂದಾಗಿ ದಿನನಿತ್ಯ ಜನ ಪುಟ್​ ಪಾತ್ ಬಿಟ್ಟು ರಸ್ತೆಯಲ್ಲೇ ನಡೆಯಬೇಕಾದ ಅನಿವಾರ್ಯತೆ ಇತ್ತು. ಇದೀಗ ಟ್ರಾಫಿಕ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ರಸ್ತೆಯ ಮೇಲಿದ್ದ ವಸ್ತುಗಳನ್ನು ತೆರವುಗೊಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು, ಅಂಗಡಿ ಮಾಲೀಕರಿಗೆ ಹಾಗೂ ವ್ಯಾಪಾರಿಗಳಿಗೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಕಟ್ಟುನಿಟ್ಟಿನ ಸೂಚನೆಗಳನ್ನು ರವಾನಿಸಿದ್ದಾರೆ.

  • ವಾಹನ ಸವಾರರ ಮತ್ತು ಪಾದಚಾರಿಗಳ ಸುಗಮ ಓಡಾಟಕ್ಕೆ ಯಾವುದೇ ರೀತಿಯಲ್ಲೂ ಅಡ್ಡಿಯಾಗದಂತೆ ಎಚ್ಚರವಹಿಸಬೇಕು
  • ಮುಂದಿನ ದಿನಗಳಲ್ಲಿ ಮತ್ತೆ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಕೊಂಡರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು
  • ಅಲ್ಲದೆ, ಪ್ರತಿಯೊಬ್ಬರೂ ಕಡ್ಡಾಯವಾಗಿ ರಸ್ತೆ ಸಂಚಾರ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಸಹಕರಿಸಬೇಕು ಎಂದು ಸೂಚಿಸಿದರು.
Shivamogga Traffic Police Clear Footpath and Road Encroachments in Garden Area
ಗಾಡಿಕೊಪ್ಪ, ಆಲ್ಕೊಳ ಬಳಿಕ ಇದೀಗ ಗಾರ್ಡನ್ ಏರಿಯಾ! ಹೇಗಿತ್ತು ಟ್ರಾಫಿಕ್ ಪೊಲೀಸರ ಕಾರ್ಯಾಚರಣೆ Shivamogga Traffic Police Clear Footpath and Road Encroachments in Garden Area

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ