ರಾಂಗ್​ ರೂಟಲ್ಲಿ ಕೆಟಿಎಂ ಡ್ಯೂಕ್ ಡ್ರೈವ್ ಮಾಡಿದ ಬಾಲಕ! ಮಾಲೀಕನಿಗೆ ಕೋರ್ಟ್​ ಶಾಕ್!

ಹಂಚಿಕೊಳ್ಳಿ
WhatsApp Facebook X Telegram
Shimoga Court Sentences Two to Prison for Death Caused by Illegal Electric Fence ತಂತಿ ಬೇಲಿಗೆ ಕರೆಂಟ್ ಕೊಟ್ಟಿದ್ದಕ್ಕೆ ಇಬ್ಬರಿಗೆ ತಲಾ ಒಂದು ವರ್ಷ ಶಿಕ್ಷೆ! ಕೋಣೆಹೊಸೂರು ಕೇಸ್ ಇತ್ಯರ್ಥ! ನಡೆದಿದ್ದು ಹೀಗೆ
shivamogga court justice

Shivamogga Court Fines Bike Owner / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಬಾಲಕನಿಗೆ ಬೈಕ್ ಓಡಿಸಲು ನೀಡಿದ ಬೈಕ್​ನ ಮಾಲೀಕನಿಗೆ ಕೋರ್ಟ್ 25 ಸಾವಿರ ಫೈನ್ ಹಾಕಿದೆ. ಶಿವಮೊಗ್ಗ ನಗರದ ಸೋಮಿನಕೊಪ್ಪ ರಸ್ತೆಯಲ್ಲಿ ವಿನೋಬನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟ‌ರ್ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿತ್ತು.

ಕೆಟಿಎಂ ಡ್ಯೂಕ್ ಒಂದನ್ನ ಅಪ್ರಾಪ್ತನೊಬ್ಬ ಓಡಿಸಿಕೊಂಡು ಈ ಮಾರ್ಗದಲ್ಲಿ ಬಂದಿದ್ದ. ಸಂಚಾರ ನಿಯಮ ಉಲ್ಲಂಘಿಸಿದ್ದ ಬಾಲಕ ರಾಂಗ್​ ರೂಟ್​ನಲ್ಲಿ ಸ್ಪೀಡಾಗಿ ಗಾಡಿ ಓಡಿಸುತ್ತಿರುವುದನ್ನ ಗಮನಿಸಿದ ಇನ್​ಸ್ಪೆಕ್ಟರ್​ ಬೈಕ್​ ತಡೆದು, ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬೈಕ್ ಸವಾರ ಅಪ್ರಾಪ್ತ ಎಂದು ಗೊತ್ತಾಗಿದೆ.

ಹಾಗಾಗಿ ವಾಹನದ ಮಾಲೀಕನ ವಿರುದ್ಧ ಸಂಚಾರ ನಿಯಮ ಉಲ್ಲಂಘನೆಯ ನೋಟಿಸ್ ಜಾರಿ ಮಾಡಿ ಕೋರ್ಟ್​ಗೆ ಚಾರ್ಜ್​ ಶೀಟ್ ಹಾಕಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮೋಟಾರು ವಾಹನ ಕಾಯ್ದೆಯನ್ವಯ ಚಾಲನೆ ಮಾಡಲು ಬಾಲಕನಿಗೆ ಬೈಕ್ ಕೊಟ್ಟ ಅದರ ಮಾಲೀಕನಿಗೆ ದಂಡ ವಿಧಿಸಿ ಆದೇಶಿಸಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor