KARNATAKA NEWS/ ONLINE / Malenadu today/ May 3, 2023 GOOGLE NEWS
ಸಾಗರ/ ಶಿವಮೊಗ್ಗ ಇಲ್ಲಿನ ಸಾಹಿತಿ ವಿಲಿಯಂ ಮಾಸ್ಟರ್ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಸಾಹಿತ್ಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ಅವರು, ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನ ಸಹ ಹೊಂದಿದ್ದರು.
ಓದಿ : ನಾನೊಬ್ಬ ಬಜರಂಗಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ‘ಬ್ಯಾನ್ ಅಸ್ತ್ರ’ ಶುರುವಾಯ್ತು ನಾಯಿ ಬಿಡುವ ಅಭಿಯಾನ!
ಮೇ 2 ರಾತ್ರಿ ಶಿವಮೊಗ್ಗದಲ್ಲಿ ವಿಲಿಯಂ ಮಾಸ್ಟರ್ ನಿಧನರಾಗಿದ್ದು, ಇವರು ಸಾಗರದ ನೆಹರು ನಗರದ ನಿವಾಸಿಯಾಇದ್ದಾರೆ. ಶಿವಲಿಂಗಪ್ಪ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದ ವಿಲಿಯಂ ಮಾಸ್ಟರ್ಗೆ ದೊಡ್ಡ ಶಿಷ್ಯ ಬಳಗವೇ ಇದೆ. ಒಡನಾಟ ಸಂಸ್ಥೆಯ ರೂವಾರಿ ಆಗಿ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡಿದ್ಧಾರೆ.
ಓದಿ : BREAKING NEWS / ಪ್ರಯಾಣಿಕರ ಗಮನಕ್ಕೆ ಇವತ್ತು ಕೆಎಸ್ಆರ್ಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ! ಕಾರಣ ಇಲ್ಲಿದೆ
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಖ್ಯಾತ ಸಾಹಿತಿ ಡಾ.ನಾ.ಡಿಸೋಜ ಅವರ ಅತ್ಯಂತ ಆಪ್ತರಾಗಿದ್ದ ವಿಲಿಯಂ ಮಾಸ್ಟರ್ ನಿಧನಕ್ಕೆ ಹಲವರು ಸಂತಾಪ ಸೂಚಿಸಿದ್ದಾರೆ.
ಒಂದೇ ಕೇಸ್ನಲ್ಲಿ ಆರೋಪಿಗೆ 20 ವರ್ಷ ಶಿಕ್ಷೆ ವಿಧಿಸಿದ ಶಿವಮೊಗ್ಗ ಕೋರ್ಟ್ ! ಕಾರಣ ಗೊತ್ತಾ?
ಭದ್ರಾವತಿ/ ಶಿವಮೊಗ್ಗ ತನಗಿಂತ 20 ವರ್ಷ ಕಡಿಮೆ ವಯಸ್ಸಿನ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿಯಲ್ಲಿ, ಭದ್ರಾವತಿಯ ವ್ಯಕ್ತಿಯೊಬ್ಬರಿಗೆ ಕೋರ್ಟ್ ಬರೋಬ್ಬರಿ 20 ವರ್ಷ ಶಿಕ್ಷೆ ವಿಧಿಸಿದೆ.
ಏನಿದು ಕೇಸ್
2019 ನೇ ಸಾಲಿನಲ್ಲಿ ಭದ್ರಾವತಿ ತಾಲ್ಲೂಕಿನ 33 ವರ್ಷದ ವ್ಯಕ್ತಿಯೊಬ್ಬ, 13 ವರ್ಷದ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ. ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆನಂತರ ಕೇಸ್ನ ತನಿಖೆ ಕೈಗೊಂಡ ಭದ್ರಾವತಿ ಗ್ರಾಮಾಂತರ ವೃತ್ತದ ಸಿಪಿಐ ಮಂಜುನಾಥ್ ಆರೋಪಿ ವಿರುದ್ಧ ಕೋರ್ಟ್ ಚಾರ್ಜ್ ಶೀಟ್ ಸಲ್ಲಿಸಿದ್ರು.
ಸದ್ಯ ಈ ಕೇಸ್ನ ವಿಚಾರಣೆ ನಡೆದು The Addl District and Sessions Court, FTSC–II (POCSO) Shivamogga ನ್ಯಾಯಾಲಯ ತೀರ್ಪು ನೀಡಿದೆ.
ಏನು ಶಿಕ್ಷೆ ?
ನ್ಯಾಯಾಧೀಶರು ದಿನಾಂಕ: 02-05-2023ರಂದು ಆರೋಪಿಗೆ ಶಿಕ್ಷೆ ವಿಧಿಸಿದ್ದು 20 ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು 20,000/- ರೂ ದಂಡ, ದಂಡವನ್ನು ಕಟ್ಟಲು ವಿಫಲನಾದರೆ ಹೆಚ್ಚುವರಿಯಾಗಿ 06 ತಿಂಗಳು ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಹರಿಪ್ರಸಾದ್ ವಾದ ಮಂಡಿಸಿದ್ರು.



