ಮಾಟ ಮಂತ್ರದ ಸೇಡು ಕೊಲೆಗೆ ಕಾರಣವಾಯ್ತಾ…? ಶಾಂತವಾಗಿದ್ದ ಸಾಗರದಲ್ಲಿ ನಡೆದಿದ್ದೇನು? ಜೆಪಿ ಬರೆಯುತ್ತಾರೆ.

Sagara Murder ಇದು ಮಾಲೀಕ ಮತ್ತು ಕೆಲಸಗಾರನ ನಡುವಿನ ಹಣಕಾಸಿನ ವಿಚಾರವಲ್ಲಮಾಟ ಮಂತ್ರದ ವಿಚಾರ ಥಳಕು

ಸಾಗರ : ಸಾಗರದಲ್ಲಿ ಇತ್ತೀಚೆಗೆ ನಡೆದ ಕೊಲೆ ಘಟನೆಗೆ ಮಾಟ ಮಂತ್ರದ ಕರಿ ನೆರಳಿನ ಛಾಯೆ ಆವರಿಸಿದೆ ಎಂಬ ಮಾತು ಸಾರ್ವಜನಿಕವಾಗಿ ಕೇಳಿಬರುತ್ತಿದೆ. ಹಣ ಕಳವು ಮಾಡಿದ ಶಂಕೆಯ ಹಿನ್ನೆಲೆಯಲ್ಲಿ ಮಾಲೀಕನೊಬ್ಬ ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ ಎಂದು ಬಿಂಬಿತವಾಗಿದ್ದ ಕೊಲೆ ಘಟನೆ ಈಗ ಬೇರೆಯದ್ದೆ ಸ್ವರೂಪ ಪಡೆದಿದೆ. ಕೊಲೆಗೆ ಮಾಟ ಮಂತ್ರವು ಥಳಕು ಹಾಕಿಕೊಂಡಿದೆ ಎಂಬುದು ಗುಟ್ಟಾಗಿ ಉಳಿದಿಲ್ಲ.

ಶಿವಮೊಗ್ಗದಲ್ಲಿ ಸರಣಿ ಘಟನೆಗಳು! ಬಸ್​ ಅಡಿಗೆ ಬಿದ್ದು ಮಗು ಸಾವು, ಆಟೋ, ಕಾರಿಗೆ ಗುದ್ದಿದ KSRTC, ಸಾಗರದಲ್ಲಿ ಕಾರಿಗೆ ಬೆಂಕಿ 

ಬಿಹಾರ ರಾಜ್ಯದ ಪಾಟ್ನಾ ಸಮೀಪದ ಬಲ್ಪುರ ಮೂಲದ 26 ವರ್ಷ ವಯಸ್ಸಿನ ಟಿಂಕು ಶರ್ಮಾ ಎಂಬಾತನೇ ಕೊಲೆಯಾದ ಯುವಕ. ಸಾಗರ ಮೂಲದ ಇಮ್ರಾನ್ ಎಂಬಾತನೇ ಕೊಲೆಗೈದ ಆರೋಪಿ. ಇಮ್ರಾನ್ ಸಾಗರದಲ್ಲಿ ರೂಫ್ ಟಾಪ್ ಕ್ಯಾಫೆ ಹಾಗೂ ಸ್ನೋಕರ್ ಗೇಮ್  ನಡೆಸುತ್ತಿದ್ದಾನೆ. ಈತನ ಶಾಪ್ ಪಕ್ಕ ಮತ್ತೊಂದು ಕೆಫೆಯ ಮಾಲೀಕ ಟೀ ಕಾಪಿಯ ಶಾಪ್ ನಡೆಸುತ್ತಿದ್ದ. ಮುಂಚೆ ಇಮ್ರಾನ್ ಕೂಡ ನಾನ್ ವೆಜ್ ಹೋಟೆಲ್ ನಡೆಸುತ್ತಿದ್ದ. ನಾನ್ ವೆಜ್ ಹೋಟೆಲ್ ನಂತರ ಇಮ್ರಾನ್ ಸ್ನೋಕರ್ ಕ್ಲಬ್ ನಡೆಸುತ್ತಿದ್ದ. 

Sagara Murder ಇಮ್ರಾನ್ ವ್ಯವಹಾರಕ್ಕೆ ತಡೆಯೊಡ್ಡಲು ಪಕ್ಕದ ಕೆಫೆ ಮಾಲೀಕನ ತಂತ್ರ,ಮಾಟ ಮಂತ್ರದ ವಸ್ತುಗಳನ್ನು ಇಡಲು ಇಮ್ರಾನ್ ಕೆಲಸಗಾರನ ಬಳಕೆ

ಇಮ್ರಾನ್ ವ್ಯವಹಾರಕ್ಕೆ ತಡೆಯೊಡ್ಡುವ ನಿಟ್ಟಿನಲ್ಲಿ ಪಕ್ಕದ ಕೆಫೆಯ ಮಾಲೀಕ ಮಾಟ ಮಂತ್ರ ಮಾಡಿಸುತ್ತಿದ್ದ. ಅದರ ತಾಮ್ರದ ಶೀಟು ಮತ್ತು ಇತರೆ ಸಾಮಾಗ್ರಿಗಳನ್ನು ಇಮ್ರಾನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಪಿಂಕು ಶರ್ಮನಿಗೆ ನೀಡಿ ಯಾವುದಾದರು ಗಲ್ಲಿ ಪೆಟ್ಟಿಗೆಯಲ್ಲಿ ಗೌಪ್ಯವಾಗಿ  ಇಡುವಂತೆ ಸೂಚಿಸುತ್ತಿದ್ದ. ಅದರಂತೆ ಟಿಂಕು ಶರ್ಮಾ ಗಲ್ಲಾ ಪಟ್ಟಿಗೆಯಲ್ಲಿ ಮಾಟದ ವಸ್ತುಗಳನ್ನು ಇಟ್ಟಿದ್ದ. ಇದರಿಂದ ಇಮ್ರಾನ್ ವ್ಯವಹಾರ ಕೂಡ ಕುಸಿಯ ತೊಡಗಿದಾಗ ಆತನ ಅನುಮಾನದ ಕಣ್ಣುಗಳು ಪಕ್ಕದ ಕೆಫೆಯ ಮಾಲೀಕನ ಮೇಲೆ ನೆಡುವಂತೆ ಮಾಡಿತು. 

Sagara Murder ಕುಸಿದ ವ್ಯವಹಾರ ಕೆಲಸಗಾರನ ವಿರುದ್ಧ ಕೆರಳಿದ ಇಮ್ರಾನ್

ಪಕ್ಕದ ಕೆಫೆ ಮಾಲೀಕ  ತನ್ನ ಕೆಲಸದವರನ್ನು ಬಳಸಿಕೊಂಡು ಏನೋ ತಂತ್ರ ಮಾಡುತ್ತಿದ್ದಾನೆ ಎಂಬುದು ಇಮ್ರಾನ್ ಗೆ ಅರಿವಾಯಿತು. ತನ್ನ ಕೆಲಸಗಾರರ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಇಮ್ರಾನ್ ಗೆ ಒಂದು ದಿನ ಕೆಫೆಯ ಮಾಲೀಕನ ಮಾಟದ ತಂತ್ರ ಎಲ್ಲವೂ ಅರಿವಾಗುತ್ತದೆ. ಇದರಿಂದ ಕೆರಳಿದ ಇಮ್ರಾನ್ 02-04-26 ರಂದು ತನ್ನ ಕೆಲಸಗಾರ ಟಿಂಕು ಶರ್ಮಾನನ್ನು ಎರಡು ಮೂರು ಬಾರಿ ಪ್ರಶ್ನಿಸಿ, ದೊಣ್ಣೆಯಿಂದ ಹಗ್ಗದಿಂದ ಹಲವು ಬಾರಿ ನಿರ್ದಯವಾಗಿ ಥಳಿಸಿದ್ದಾನೆ. ಮುಂಜಾನೆ ಮತ್ತೆ ಆತನ ಕಪಾಳಕ್ಕೆ ಹೊಡೆದಿದ್ದು, ಈ ವೇಳೆ ಟಿಂಕು ಕುಸಿದು ಬಿದ್ದಿದ್ದಾನೆ. ಆತನ ದೇಹದ ಮೇಲೆ ದೊಣ್ಣೆಯಿಂದ ಹೊಡೆದ ಗಾಯದ ಗುರುತುಗಳು ಕಂಡುಬಂದಿವೆ. ಜೊತೆಗೆ, ಆತ ಹೈಡ್ರೇಶನ್ ಆಗಿದ್ದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿ ಪ್ರಾಣಾಪಾಯ ಸಂಭವಿಸಿದೆ ಎಂಬುದು ಪ್ರಾಥಮಿಕವಾಗಿ ತಿಳಿದುಬಂದಿದೆ.

Sagara Murder ಬಾಡಿಯನ್ನು ಕಾರಿನಲ್ಲಿ ಹಾಕಿಕೊಂಡು ಮನೆಗೆ ಬಂದು ಮಲಗಿದ್ದ ಆರೋಪಿ

ಟಿಂಕು ಶರ್ಮ ಕುಸಿದು ಬಿದ್ದ ತಕ್ಷಣ ಗಾಬರಿಗೊಂಡ ಆರೋಪಿ ಇಮ್ರಾನ್, ಮೃತದೇಹವನ್ನು ಹೊಂಡ ಕಾರಿನ ಡಿಕ್ಕಿಯಲ್ಲಿ ಹಾಕಿಕೊಂಡು ಸೀದಾ ಮನೆಗೆ ಬರುತ್ತಾನೆ. ಬಾಡಿಯನ್ನು ಡಿಕ್ಕಿಯಲ್ಲಿಯೇ ಇಟ್ಟು ಇಮ್ರಾನ್ ಮನೆಯಲ್ಲಿ ಮಲಗಿದ್ದ. ಘಟನೆ ಕುರಿತು ಮಾಹಿತಿ ಲಭ್ಯವಾದ ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೆಯೇ ಘಟನಾ ಸ್ಥಳವನ್ನು ಮಹಜರ್ ನಡೆಸಲಾಗಿದೆ. 

Sagara Murder ನ್ಯಾಯಾಂಗ ಬಂಧನದಿಂದ ಮತ್ತೆ ಪೊಲೀಸ್ ಕಸ್ಟಡಿಗೆ 

ಪ್ರಸ್ತುತ ಆರೋಪಿಯು ನ್ಯಾಯಾಂಗ ಬಂಧನದಲ್ಲಿದ್ದಾನೆ. ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕೃತ್ಯದಲ್ಲಿ ಇಮ್ರಾನ್ ಒಬ್ಬನೇ ಭಾಗಿಯಾಗಿರುವುದು ಕಂಡುಬಂದಿದೆ. ಪ್ರಕರಣದಲ್ಲಿ ಬೇರೆಯವರ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ. ಮೃತನ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಆತನ ಸಂಬಂಧಿ ಸೂರಜ್ ಮಾಂಜಿ ಎಂಬಾತ ಈ ಬಗ್ಗೆ ದೂರು ದಾಖಲಿಸಿದ್ದಾನೆ.

Sagara Murder ಕೆಫೆ ಮಾಲೀಕನನ್ನು ತನಿಖೆಗೆ ಒಳಪಡಿಸಲಿರುವ ಪೊಲೀಸರು

ಮೇಲ್ನೋಟಕ್ಕೆ ಹಣಕಾಸಿನ ವಿಚಾರದಲ್ಲಿ ಮಾಲೀಕ ಮತ್ತು ಕೆಲಸಗಾರರ ಮದ್ಯೆ ಗಲಾಟೆಯಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಇಮ್ರಾನ್ ಮಾಡಿರುವ ಆರೋಪಗಳು ಘಟನೆಗೆ ಬೇರೆಯದ್ದೇ ತಿರುವನ್ನು ನೀಡಿದೆ. ಕಫೆ ಮಾಲೀಕನ ವಿಚಾರಣೆ ಮಾಡಿದರೆ ಹೆಚ್ಚಿನ ಸತ್ಯಾಂಶ ಹೊರಬರುತ್ತದೆ. ಈ ನಿಟ್ಟಿನಲ್ಲಿ ಎಸ್ಪಿ ನಿಖಿಲ್ ಬಿ ರವರು ವಿಶೇಷ ತಂಡ ರಚಿಸಿ, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಮತ್ತೆ ಪೊಲೀಸ್ ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

Sagara Murder
Sagara Murder

Sagara Murder Black Magic Twist in Tinku Case