ಇನ್ನೋವಾ ಕಾರು ಮಾಲೀಕನಿಗೆ ಸನ್ಮಾನಕ್ಕೆ ಕಾರಣವಾದ 999999! ನಂಬರ್​ನಲ್ಲಿದೆ ವಿಶೇಷ ಕುತೂಹಲ

ಹಂಚಿಕೊಳ್ಳಿ
WhatsApp Facebook X Telegram
Toyota Innova Completes 9,99,999 km Shakti Toyota Felicitates Owner in Shivamogga

Toyota Innova / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಕೆಲವೊಮ್ಮೆ ನಾವು ಅಂದುಕೊಳ್ಳದೇನೇ ಕೆಲವೊಂದು ಸಾಧನೆ ಅನ್ನಿಸಿಕೊಳ್ಳುತ್ತದೆ. ಹಾಗೆ ಆಗಿದೆ ಈ ವಿಚಾರ. ಇಲ್ಲಿ ಗ್ರಾಹಕನೊಬ್ಬನನ್ನು ಡೀಲರ್ ಸಂಸ್ಥೆಯೊಂದು ಕರೆದು ಸನ್ಮಾನ ಮಾಡಿದೆ. ಇದಕ್ಕೆ ಕಾರಣ 9,99,999 ನಂಬರ್​. ಏನಿದು ವಿಚಾರ ಅಂತಾ ಯೋಚಿಸುವ ಮೊದಲೇ ವಿಷಯ ಹೇಳಿ ಬೀಡುತ್ತೇವೆ ಓದಿ.

ಶಿವಮೊಗ್ಗದ ತಿರುಮಲ ಟೂರ್ಸ್​ & ಟ್ರಾವೆಲ್ಸ್ ಸಂಸ್ಥೆಯ ಮಾಲೀಕರಾದ ಕೆ. ಸತೀಶ್ ಅವರ ಟೊಯೋಟ ಇನ್ನೋವಾ (Toyota Innova)(ನೋಂದಣಿ ಸಂಖ್ಯೆ: KA14B0319) ವಾಹನವು 9,99,999 ಕಿಲೋಮೀಟರ್‌ ನಷ್ಟು ಟ್ರಾವಲ್ ಮಾಡಿದೆ . ಲಕ್ಕಿ ನಂಬರ್​ ನಂತೆ ಕಾಣುವ ಇಷ್ಟೊಂದು ಕಿಲೋಮೀಟರ್ ದೂರ ವೆಹಿಕಲ್ ರನ್​ ಆಗಿರೋದು ವಿಶೇಷವೇ ಅಲ್ಲವೆ? ಇದೆ ಕಾರಣಕ್ಕೆ ಶಕ್ತಿ ಟೊಯೋಟ ಶಿವಮೊಗ್ಗ,ಕೆ. ಸತೀಶ್ ಅವರನ್ನು ಸನ್ಮಾನಿಸಿದೆ

ಸತೀಶ್​ರವರನ್ನು ತಮ್ಮ ಸಂಸ್ಥೆಗೆ ಕರೆಸಿಕೊಂಡು ಅವರ ಸನ್ಮಾನಿಸಿದ ಶಕ್ತಿ ಟೊಯೋಟ ಸೇವಾ ವಿಭಾಗದ ಮುಖ್ಯಸ್ಥ ನಟರಾಜ್ ಜಿ ಎಂ “ಈ ಸಾಧನೆಯು ಟೊಯೋಟ ವಾಹನಗಳ ಅಸಾಧಾರಣ ಗುಣಮಟ್ಟ, ದೀರ್ಘಾಯುಷ್ಯ ಮತ್ತು ವಿಶ್ವಾಸಾರ್ಹತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ” ಎಂದು ತಿಳಿಸಿದರು.

ಇದೇ ವೇಳೆ, ಪರಿಸರ ಮಾಸಾಚರಣೆ ಅಂಗವಾಗಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಬದುಕಿನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಗ್ರಾಹಕರಿಗೆ ಸಸಿಗಳನ್ನು ವಿತರಿಸಲಾಯಿತು ಈ ಸನ್ಮಾನ ಕಾರ್ಯಕ್ರಮದಲ್ಲಿ ಶಕ್ತಿ ಟೊಯೋಟ ಸೇವಾ ವಿಭಾಗದ ಮುಖ್ಯಸ್ಥರಾದ,ನಟರಾಜ್ ಜಿ ಎಂ, ಹಾಸನ ಶಾಖೆಯ ಮುಖ್ಯಸ್ಥರಾದ ಮಧು ಎಮ್ ಪಿ, ಶಿವಮೊಗ್ಗ ಶಾಖೆಯ ಸರ್ವಿಸ್ ಮ್ಯಾನೇಜರ್ ಮೋಹನ್ ರಮೇಶ್, ಬಾಡಿಶಾಪ್ ಮ್ಯಾನೇಜರ್ ಅರುಣ್, ಹಾಗೂ ಮಾರ್ಕೆಟಿಂಗ್ ವಿಭಾಗದ ಶ್ರೀನಿವಾಸ್ ಮತ್ತು ರಂಜಿತ್ ಉಪಸ್ಥಿತರಿದ್ದರು.

ನಿಮ್ಮ ವಾಟ್ಸಾಪ್​ಗೆ ಸುದ್ದಿ ಕಳುಹಿಸಲು ಕ್ಲಿಕ್​ ಮಾಡಿ ಗ್ರೂಪ್​ಗೆ ಜಾಯಿನ್ ಆಗಿ :  Whatsapp / https://chat.whatsapp.com/JrsZ8He4nN600n0r3tJItz

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor