ಶಿವಮೊಗ್ಗದ ಎರಡು ತಾಲ್ಲೂಕುಗಳಲ್ಲಿಂದು 8 ಗಂಟೆ ವಿದ್ಯುತ್ ವ್ಯತ್ಯಯ ; ಹೊಸನಗರ-ಸಾಗರದಲ್ಲಿ ಪವರ್ ಕಟ್!

ಹಂಚಿಕೊಳ್ಳಿ
WhatsApp Facebook X Telegram
Power Cutಸಾಂದರ್ಭಿಕ ಚಿತ್ರ
Power Cutಸಾಂದರ್ಭಿಕ ಚಿತ್ರ

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಹೊಸನಗರ ಮತ್ತು ಸಾಗರ ಭಾಗಗಳಲ್ಲಿ (Power Cut in Hosanagara and Sagara) ಮೆಸ್ಕಾಂ ವತಿಯಿಂದ ವಿದ್ಯುತ್ ಮಾರ್ಗ ಹಾಗೂ ವಿತರಣಾ ಕೇಂದ್ರಗಳ ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇಂದು, ಸೆಪ್ಟೆಂಬರ್ 7ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಮೊದಲನೆಯದ್ದಾಗಿ, ಹೊಸನಗರ ಪಟ್ಟಣ ವ್ಯಾಪ್ತಿಗೆ ನೂತನ ಫೀಡರ್ ನಿರ್ಮಾಣ ಕಾಮಗಾರಿ ಹಾಗೂ ಹೊಸನಗರ 33 ಕೆ.ವಿ. ವಿದ್ಯುತ್ ಮಾರ್ಗದ ನಿರ್ವಹಣಾ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಹೊಸನಗರ ಪಟ್ಟಣ ಸೇರಿದಂತೆ ತಾಲೂಕಿನ ಜೇನಿ, ಮಾರುತಿಪುರ, ರಾಮಚಂದ್ರಾಪುರಮಠ, ಮೇಲಿನಬೆಸಿಗೆ, ಸೊನಲೆ, ಎಂ. ಗುಡ್ಡೆಕೊಪ್ಪ ಹಾಗೂ ಕರಿಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಇತ್ತ ಸಾಗರ ಪೇಟೆಯಲ್ಲಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಸೆಪ್ಟೆಂಬರ್ 7ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಸಾಗರ ನಗರ ಸೇರಿದಂತೆ ಮಂಗಳಬೀಸು, ಮಾರಿಕಾಂಬ, ರಾಮನಗರ, ಮಾಲ್ವೆ, ಹೆಗ್ಗೋಡು, ಆವಿನಹಳ್ಳಿ, ವರದಹಳ್ಳಿ, ಬೊಮ್ಮತ್ತಿ, ಮಾಸೂರು, ಹಿರೇನೆಲ್ಲೂರು, ಲಿಂಗದಹಳ್ಳಿ ಹಾಗೂ ಇತರ ಮಾರ್ಗಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor