ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಶಿವಮೊಗ್ಗ ದಸರಾ ಜಂಬೂಸವಾರಿಯಲ್ಲಿ ನಿನ್ನೆ ನಡೆದ ಘಟನೆಗಳು ಬಹುದಿನಗಳವರೆಗೂ ಕಾಡುತ್ತವೆ..ಆದಾಗ್ಯು ನಡೆದ ಘಟನೆಯಲ್ಲಿ ನಮ್ಮ ಸಕ್ರೆಬೈಲ್ ಬಿಡಾರದ ಆನೆಗಳು ಯಾರೊಬ್ಬರಿಗು ಏನನ್ನೂ ಸಹ ಅಪಾಯ ಮಾಡಲಿಲ್ಲ ಎಂಬುದೇ ವಿಶೇಷ. ಈ ನಡುವೆ ಸಕ್ರೆಬೈಲು ಆನೆ ಬಿಡಾರಕ್ಕೆ ಸಾಗರ್, ಸೋಮಣ್ಣ ಹಾಗೂ ಬಹದ್ದೂರ್ ಆನೆಗಳನ್ನ ನಿನ್ನೆ ರಾತ್ರಿಯೇ ಶಿಫ್ಟ್ ಮಾಡಲಾಗಿದೆ.
ಸಕ್ರೆಬೈಲು ಆನೆ ಬಿಡಾರಕ್ಕೆ ಶಿಫ್ಟ್
ಅರವಳಿಕೆ ನೀಡದಿದ್ದರಿಂದ ಸೋಮಣ್ಣನಿಗೆ ಕೆಲಕಾಲ ವಿಶ್ರಾಂತಿ ನೀಡಲಾಗಿತ್ತಾದರೂ ಅಂತಿಮವಾಗಿ ರಾತ್ರಿ 10.30ಕ್ಕೆ ಆನೆಗಳನ್ನ ಶಿಫ್ಟ್ ಮಾಡುವ ಕಾರ್ಯಾಚರಣೆ ಆರಂಭಗೊಂಡಿತು. ಮೂರು ಆನೆಗಳನ್ನು ಡಯಟ್ ಕೇಂದ್ರದಿಂದ ವಾಸವಿ ಸ್ಕೂಲ್ಗೆ ಕರೆತಂದು ಅಲ್ಲ ನಿರ್ಮಿಸಿದ್ದ ಏರಿ ಮೂಲಕ ಆನೆಗಳನ್ನ ಲಾರಿಗೆ ಹತ್ತಿಸಲಾಗಿದೆ. ಬಳಿಕ ಸಕ್ರೆಬೈಲು ಆನೆ ಬಿಡಾರಕ್ಕೆ ಕರೆದೊಯ್ಯಲಾಯಿತು. ಇನ್ನೂ ರಾತ್ರಿಯಾದರೂ ಆನೆಗಳನ್ನ ನೋಡಲು ಕೋಟೆ ರಸ್ತೆಯಲ್ಲಿ ನೂರಾರು ಮಂದಿ ಜಮಾಯಿಸಿದ್ದರು. ಲಾರಿಗಳು ಹೊರಡುತ್ತಿದ್ದಂತೆ ಆನೆಗಳು ಸೊಂಡಿಲೆತ್ತಿದ್ದರಿಂದ ಜನರು ಓಹ್ ಅಂತಾ ಕೂಗಿದರು. ಅಲ್ಲದೆ ಆನೆಗಳ ಹೆಸರನ್ನ ಕೂಗಿ, ಹೋಗಿ ಬನ್ನಿ ಅಂತಾ ಶುಭಾ ಹಾರೈಸಿದರು. ನಡೆದ ಘಟನೆಯು ಜನರ ಮನಸ್ಸಿನಿಂದಲೂ, ಆನೆಗಳಲ್ಲಿ ಮಾಸಿ ಹೋದಂತೆ ಕಂಡು ಬಂತು
