ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ: ಶಿವಮೊಗ್ಗದ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದಲ್ಲಿ ಮುಂದಿನ ಬುಧವಾರದಿಂದ ಪ್ರತಿ ಬುಧವಾರ ರಜೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ದುಬಾರೆಯಲ್ಲಿ ಸಾಕಾನೆಗಳ ಕಾಳಗದಿಂದ ಚೆನ್ನೈ ಮೂಲದ ಪ್ರವಾಸಿಯೊಬ್ಬರು ಸಾವನ್ನಪ್ಪಿದ್ದರು. ಈ ಹಿನ್ನೆಲೆ ಸಕ್ರೆಬೈಲು ಆನೆ ಬಿಡಾರ ಸೇರಿದಂತೆ ಅನೇಕ ಬಿಡಾರಗಳನ್ನು ಪ್ರವಾಸಿಗರಿಗೆ ಬಂದ್ ಮಾಡಲಾಗಿತ್ತು. ನಂತರ ಎಲ್ಲಾ ಎಸ್ ಓಪಿ ಜಾರಿಗೊಳಿಸಿ, ಸೆಪ್ಟೆಂಬರ್ 26 ರಂದು ಸಕ್ರೆಬೈಲ್ ಆನೆ ಬಿಡಾರವವನ್ನು ಓಪನ್ ಮಾಡಲಾಯಿತು. ಅದಾದ ಬಳಿಕ ಸಕ್ರೆಬೈಲು ಆನೆ ಬಿಡಾರದಲ್ಲಿ ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದ್ದು, ಪ್ರತಿ ಬುಧವಾರ ಸಕ್ರೆಬೈಲು ಆನೆ ಬಿಡಾರದಲ್ಲಿ ರಜೆ ಇರಲಿದೆ ಎಂದು ಮೂಲಗಳು ತಿಳಿಸಿವೆ.
ಈಗ ಜಾರಿಗೆ ತಂದಿರುವ ಎಸ್ ಓ ಪಿ ನಿಯಮಗಳಲ್ಲಿ ಪ್ರತಿ ಬುಧವಾರ ಸಕ್ರೆಬೈಲು ಆನೆ ಬಿಡಾರಕ್ಕೆ ವಾರದ ರಜೆಯನ್ನು ನೀಡಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ರಾಜ್ಯದ ಎಲ್ಲ ಆನೆ ಬಿಡಾರದಲ್ಲಿಯೂ ಈ ನಿಯಮವನ್ನು ಅಳವಡಿಸಿಕೊಂಡಿದ್ದು, ನಾಳೆಯಿಂದಲೇ ಸಕ್ರೆಬೈಲು ಆನೆ ಬಿಡಾರದಲ್ಲಿಯೂ ಈ ನಿಯಮಗಳನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದು ಮಲೆನಾಡು ಟುಡೆಗೆ ಸಕ್ರೆಬೈಲು ಆನೆ ಬಿಡಾರ ಮೂಲಗಳು ತಿಳಿಸಿವೆ.
