2022 ರ ಕೇಸ್​ನಲ್ಲಿ ಆರೋಪಿಗೆ ಬರೋಬ್ಬರಿ 20 ವರ್ಷ ಶಿಕ್ಷೆ / ₹4 ಲಕ್ಷ ಪರಿಹಾರ

ಹಂಚಿಕೊಳ್ಳಿ
WhatsApp Facebook X Telegram

ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ :  ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯ 20 ವರ್ಷಗಳ ಕಾಲ ಶಿಕ್ಷೆ ವಿಧಿಸಿದೆ.2022ರಲ್ಲಿ ನಡೆದಿದ್ದ ಪ್ರಕರಣದ ಕುರಿತು ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ.

17 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ ಬಗ್ಗೆ ಆರೋಪಿಯೊಬ್ಬನ ವಿರುದ್ಧ ದೂರು ದಾಖಲಾಗಿತ್ತು.  ಐಪಿಸಿ ಸೆಕ್ಷನ್​ ಕಲಂ 376(2)(ಎನ್), 366, 363 ಮತ್ತು ಪೋಕ್ಸೋ ಕಾಯ್ದೆಯಡಿ (POCSO Act) ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಅಂಧಿನ ತನಿಖಾಧಿಕಾರಿ ಸಿಪಿಐ  ಪ್ರವೀಣ್ ನೀಲಮ್ಮನವರ್ Investigation ಮುಗಿಸಿ ಕೋರ್ಟ್​ಗೆ ಚಾರ್ಜ್​ ಶೀಟ್ ಸಲ್ಲಿಸಿದ್ದರು. 

ಈ ಕುರಿತಾಗಿ ನ್ಯಾಯಾಲಯದಲ್ಲಿ ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಶ್ರೀಧರ್ ಹೆಚ್.ಆರ್ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ಮುಗಿದು ನ್ಯಾಯಾಧೀಶರಾದ ನಿಂಗನಗೌಡ ಭ ಪಾಟೀಲ್ ಅವರು ಆರೋಪಿಗೆ 20 ವರ್ಷ ಶಿಕ್ಷೆ ವಿಧಿಸಿದ್ದಾರೆ ಹಾಗೂ ಸಂತ್ರಸ್ತ ಬಾಲಕಿಗೆ ₹4 ಲಕ್ಷ ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಶಿವಮೊಗ್ಗ (DLSA) ಮೂಲಕ ನೀಡುವಂತೆ ಸೂಚಿಸಿದ್ದಾರೆ.

POCSO Case  Man Sentenced to 20 Years

 POCSO Case  Man Sentenced to 20 Years
POCSO Case  Man Sentenced to 20 Years

car decor new

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor