ITMS ಜಾರಿ! ಮೊದಲ ದಿನವೇ ಶಿವಮೊಗ್ಗ ಸಿಟಿಯಲ್ಲಿ 655 ಮಂದಿಗೆ ನೋಟಿಸ್!

KARNATAKA NEWS/ ONLINE / Malenadu today/ Aug 29, 2023 SHIVAMOGGA NEWS 

ಶಿವಮೊಗ್ಗ ನಗರದಲ್ಲಿ ನಿನ್ನೆಯಿಂದ ಜಾರಿಗೆ ಬಂದಿರುವ ಐಟಿಎಂಎಸ್​ ಫೈನ್​ನಲ್ಲಿ ಮೊದಲ ದಿನವೇ ಪೊಲೀಸ್ ಇಲಾಖೆ 655 ಮಂದಿ ವಿರುದ್ಧ ಕೇಸ್ ದಾಖಲಿಸಿದೆ.

ಶಿವಮೊಗ್ಗ ನಗರದಲ್ಲಿ  ಸ್ಮಾರ್ಟ್ ಸಿಟಿ ಯೋಜನೆಯ   ಅಡಿಯಲ್ಲಿ ಅಳವಡಿಸ ಲಾಗಿರುವ  RLVD, SVD,   PTZ,  ASVD  & ANPR  ಕ್ಯಾಮರಾಗಳು Command  and Control Center ಗೆ ಕಳುಹಿಸಿದ, ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ವಾಹನಗಳ ಫೊಟೋ ಮತ್ತು ವಿಡಿಯೋಗಳನ್ನು ಆಧರಿಸಿ ಈ  ಕೇಸ್​ಗಳನ್ನು ದಾಖಲಿಸಲಾಗಿದೆ.  

ಈ ಸಂಬಂಧ ಪೊಲೀಸ್ ಇಲಾಖೆ ನೀಡಿದ ಪ್ರಕಟಣೆಯ ಪ್ರಕಾರ, ದಿನಾಂಕ: 28-08-2023 ರಂದು 613 Singnal Jump, 36 Over Speed, 04 Without Helmate, 01  Without Seat Belt ಮತ್ತು 01  Mobile Riding ಪ್ರಕರಣಗಳು ಸೇರಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಒಟ್ಟು 655 ವಾಹನ ಸವಾರರ / ಮಾಲೀಕರಿಗೆ SMS ಮೂಲಕ ನೋಟಿಸ್ ಗಳನ್ನು ಕಳುಹಿಸಲಾಗಿದೆ. 

ಇದನ್ನು ಸಹ ಓದಿ : ​ ಪೊಲೀಸ್ ಪ್ರಕಟಣೆ : ಇವತ್ತಿನಿಂದ ITMS ಫೈನ್ ಜಾರಿ! ಕಣ್ಣಿಗೆ ಕಾಣುವ ಸಂಚಾರ ನಿಯಮ ಉಲ್ಲಂಘನೆಯಲ್ಲಿ ಯಾವುದಕ್ಕೆ ಎಷ್ಟಿದೆ ಗೊತ್ತಾ ದಂಡ!?


ಇನ್ನಷ್ಟು ಸುದ್ದಿಗಳು 


 

 

Leave a Comment