KARNATAKA NEWS/ ONLINE / Malenadu today/ Oct 31, 2023 SHIVAMOGGA NEWS
SHIVAMOGGA | ಪ್ರತಿಷ್ಟಿತ ವಾಹಿನ ನ್ಯೂಸ್ 18 ಕನ್ನಡದ ಕರುನಾಡ ಹಬ್ಬ ಶಿವಮೊಗ್ಗದ ಪ್ರೀಡಂಪಾರ್ಕ್ನಲ್ಲಿ ನಡೆಯಲಿದೆ. ಇದೇ ನವೆಂಬರ್ 3,4,5 ರಂದು ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಮನರಂಜನೆ ಇರಲಿದೆ,ವಿಶಿಷ್ಟ ಖಾದ್ಯಗಳ ಆಹಾರಗಳು ಸಿಗಲಿದೆ ಹಾಗೆಯೇ ಕನ್ನಡತನದ ಸಂಭ್ರಮದ ಜೊತೆಗೆ ಜನರು ಶಾಪಿಂಗ್ ಕೂಡ ಮಾಡಬಹುದಾಗಿದೆ.
READ : ರಾಗಿಗುಡ್ಡ ಕೇಸ್ | PI ಅಭಯ್ ಪ್ರಕಾಶ್ ಸೋಮನಾಳ್ ಅಮಾನತು ಆದೇಶ ರದ್ದು! ಚಿಕ್ಕಮಗಳೂರಿಗೆ ವರ್ಗ!
ವಿವಿಧ ದಾರವಾಹಿಯ ಕಲಾವಿದರು, ವಿಶೇಷ ಹಾಡುಗಾರರ ಸಮ್ಮಿಲನದೊಂದಿಗೆ ನಡೆಯಲಿರುವ ಈ ಹಬ್ಬದಲ್ಲಿ ವಿವಿಧ ಸ್ಪರ್ಧೆಗಳು ಸಹ ಇರಲಿವೆ. ಅಡುಗೆ, ನೃತ್ಯ, ಚಿತ್ರಕಲೆ, ಮಹಿಳೆಯರಿಗಾಗೇ ವಿಶೇಷ ರಂಗೋಲಿ ಕಾಂಪಿಟೇಶನ್ ಸೇರಿ ಹಲವು ರೀತಿಯ ಮನೋರಂಜನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಗೆಲ್ಲುವವರಿಗೆ ವಿಶೇಷ ಬಹುಮಾನ ಕೂಡ ಸಿಗಲಿದೆ.
READ : KSRTC ಬಸ್ಸ್ಟ್ಯಾಂಡ್ ಲೇಡಿಗೆ ಶಾಕ್ ಕೊಟ್ಟ ದೊಡ್ಡಪೇಟೆ ಪೊಲೀಸರು! ಬಯಲಾಯ್ತು ಕೇಸ್!
ನಿರ್ದೇಶಕ ಯೋಗರಾಜ್ ಭಟ್, ನಟ ರಂಗಾಯಣ ರಘು, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಟಗರು ಪಲ್ಯ ಸಿನಿಮಾ ನಟ ನಾಗಭೂಷಣ್ , ನಟಿ, ಅಮೃತ ಪ್ರೇಮ್, ನಟ ಕಿರಣ್ ರಾಜ್ , ಮಿಮಿಕ್ರಿ ಗೋಪಿ, ಗಾಯಕಿ ಮಹನ್ಯ ಸೇರಿ ಹಲವರು ಭಾಗವಹಿಸಲಿದ್ದಾರೆ.