ಲಿಂಗಾಯಿತರು ಬಿಎಸ್‌ವೈಗೆ, ಈಡಿಗರು ಕಾಂಗ್ರೆಸ್‌ಗೆ, ಹಿಂದೂಗಳು ನನಗೆ! ಪ್ರಧಾನಿ ಮೋದಿಗೆ whatsapp ಮೆಸೇಜ್‌! ಕೆಎಸ್‌ ಈ‍ಶ್ವರಪ್ಪ ಟುಡೇ ಪಾಯಿಂಟ್ಸ್‌!

ಹಂಚಿಕೊಳ್ಳಿ
WhatsApp Facebook X Telegram

Shivamogga  Mar 28, 2024  ಲೋಕಸಭಾ ಚುನಾವಣೆ  2024 ರ ಅಖಾಡಕ್ಕೆ ಕೆಎಸ್‌ ಈಶ್ವರಪ್ಪ ಸಜ್ಜಾಗುತ್ತಿದ್ದಾರೆ. ಅವರ ಬತ್ತಳಿಕೆಯಿಂದ ದಿನಕ್ಕೊಂದು ಮಾತಿನ ಬಾಣ ಹೊರಕ್ಕೆ ಬರುತ್ತಿದೆ. ಹಿಂದುತ್ವ, ಬಿಎಸ್‌ವೈ ಕುಟುಂಬದ ವಿಚಾರವನ್ನೇ ಹಿಡಿದುಕೊಂಡು ಈಶ್ವರಪ್ಪನವರು ಶತಾಯಗತಾಯ ಅದೃಷ್ಟ ಪರೀಕ್ಷೆಗೆ ಇಳಿಯಲು ಮುಂದಾಗಿದ್ದಾರೆ. ಇವತ್ತು ಪುನಃ ಪ್ರಧಾನಿ ನರೇಂದ್ರ ಮೋದಿಯಾಗಿ ಯಾರೇ ಬಂದರೂ ತಮ್ಮ ಸ್ಪರ್ಧೆ ಖಚಿತ ಎಂದ ಅವರು ಹೇಳಿದ ಮಾತಿನ ಬುಲೆಟ್‌ ಪಾಯಿಂಟ್ಸ್‌ ಇಲ್ಲಿದೆ.. 

ಆರಂಭದಿಂದ ಇಡೀ ರಾಜ್ಯದಿಂದ ಪೋನ್ ಬರುತ್ತಿವೆ, ಸ್ಪರ್ಧೆ ಮಾಡಬೇಕು ಹಿಂದೆ ಸರಿಯಬಾರದು ಎಂದು ಹೇಳುತ್ತಿದ್ದಾರೆ. ಬಿಎಸ್‌ ಯಡಿಯೂರಪ್ಪ ಈಗಲೂ ಹೇಳುತ್ತಿದ್ದಾರೆ. ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತಾರೆ ಎಂದು. ಆದರೆ ಯಡಿಯೂರಪ್ಪನವರು ಅಪಪ್ರಚಾರ ಮಾಡುತಿದ್ದಾರೆ. ಅಪ್ಪ ಮಕ್ಕಳು ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. 

ಬಿಎಸ್‌ವೈ ಕುಟುಂಬಸ್ಥರು ಸಾಧು ಸಂತರಿಗೆ ಹೆದರಿಸಿಲ್ಲ ಅನ್ನುತ್ತಿದ್ದಾರೆ. ಆದರೆ ನನ್ನ ಹತ್ರ ಬನ್ನಿ ಯಾವ ಸ್ವಾಮೀಜಿಗಳಿಗೆ ಬೇದರಿಕೆ ಹಾಕಿದ್ದಾರೆ ಎಂದು ತೋರಿಸುತ್ತೇನೆ. ನಾನು ಕರೆದುಕೊಂಡು ಹೋಗಿ ಹೇಳಿಸುತ್ತೇನೆ 

ಕಾರ್ಯಕರ್ತರ ಮನೆಗೆ ಹೋಗಿ ಕಾರ್ಪೊರೇಟ್ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ ಆದರೆ ಸುಳ್ಳಿನ ಸರದಾರ ಬಿಎಸ್‌ ಯಡಿಯೂರಪ್ಪರವರು. ಅವರು ಹೇಳಿದ್ದನ್ನ ಮಾಡುವುದಿಲ್ಲ. ಆಶ್ವಾಸನೆ ನೀಡಿ ಆನಂತರ ತಮ್ಮಲ್ಲೆ ಕಚ್ಚಾಡಿಕೊಳ್ಳುವ ಸನ್ನಿವೇಶ ನಿರ್ಮಾಣ ಮಾಡುತ್ತಾರೆ. 

ಕಾಂಗ್ರೆಸ್ ರಾಜ್ಯದಲ್ಲಿ ಬರಬಾರದು, ಸಿಎಂ ಸಿದ್ದರಾಮಯ್ಯರವರ ಪರಿಸ್ಥಿತಿ ಏನು? ಅವರ ಮಗನನ್ನು ಯಾಕೇ ನಿಲ್ಲಿಸಲಿಲ್ಲ ಸೋತು ಹೋಗ್ತಾರೆ ಅಂತ ಚುನಾವಣೆಯಲ್ಲಿ ನಿಲ್ಲಿಸಲಿಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯರ ಸ್ಥಿತಿ ಹೀಗಿದೆ 

ನಾನು ಯಡಿಯೂರಪ್ಪ ನವರ ಜೊತೆ ಪಕ್ಷ ಕಟ್ಟಿದ್ದವನು ನನ್ನ ತಾಯಿ ಬಿಜೆಪಿ, ಚುನಾವಣೆಯಲ್ಲಿ ಗೆದ್ದ ನಂತರ ಬಿಜೆಪಿಗೆ ಹೋಗ್ತೇನೆ. ಈಗಲೂ ನಾನು ಬಿಜೆಪಿಯೇ. ನಾನು ಕಟ್ಟಿದ ಪಕ್ಷ ಬಿಜೆಪಿ . 

ಲೋಕಸಭಾ ಚುನಾವಣೆ ಮುಗಿಯುತ್ತಿದಂತೆ ಬಿವೈ ರಾಘವೇಂದ್ರ ಸೋಲುತ್ತಾರೆ. ಬಿವೈವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಕೇಳಗಿಳಿಯುತ್ತಾರೆ. ಮತ್ತೆ ಪಕ್ಷವನ್ನು ಸದೃಡ ಸ್ಥಿತಿಗೆ ತರುತ್ತೇವೆ 

ದುಡ್ಡು ಹಣ ಹೆಂಡ ಹಂಚೋಕೆ ಸಮಯ ಕೊಡಬೇಡಿ,  ಏ.19ಕ್ಕೆ ಚಿಹ್ನೆ ಪೈನಲ್ ಆಗುತ್ತೆ, ಬ್ಲಾಕ್‌ಮೇಲ್‌ ಮಾಡಿ ಚುನಾವಣೆ ಸ್ಪರ್ಧೆ ನಡೆಸೋದಿಲ್ಲ. ಲಿಂಗಾಯತರು ಯಡಿಯೂರಪ್ಪ ನವರಿಗೆ ಅಂತೆ, ಈಡಿಗರು ಕಾಂಗ್ರೆಸ್ ನವರಿಗಂತೆ, ಆದರೆ ಎಲ್ಲಾ ಹಿಂದೂಗಳು ನನ್ನ ಪರವಾಗಿದ್ದಾರೆ 

ಕೇಸರಿ ನಾಯಕ ಅಂತ ಜನ ನನ್ನ ಒಪ್ಪಿಕೊಂಡಿದ್ದಾರೆ .ಒಂದೇ ಪಕ್ಷದಲ್ಲಿ ಇದ್ದವನು ನಾನು ಈ ಪಕ್ಷ ನನಗೆ ತಾಯಿ .

ಬೇರೆ ಬೇರೆ ಪಕ್ಷಕ್ಕೆ ಹೋದವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ಜಾತಿ ಭೇದ,ಪಕ್ಷ ಭೇದ ಮರೆತು ಜನ‌ ನನ್ನ ಬೆಂಬಲ ಕೊಡುತ್ತಿದ್ದಾರೆ 

ಬಿಎಸ್‌ ಯಡಿಯೂರಪ್ಪ ಡಮ್ಮಿ ಕ್ಯಾಂಡಿಡೇಟ್ ಹಾಕಿಸಿಕೊಂಡು ಬಂದು ಗೇಲ್ತಾರೆ. ಯಡಿಯೂರಪ್ಪ ನವರ ಹೊಂದಾಣಿಕೆ ರಾಜಕೀಯ ಇದೆ ಕೊನೆಯಾಗಲಿದೆ.  ನನ್ನ ಜೀವನದಲ್ಲಿ ಆರ್‌ಎಸ್‌ಎಸ್‌ ಸೂಚನೆ ಎಂದು ಮೀರಿಲ್ಲ . ಮೊದಲನೇ ಬಾರಿ ಸೂಚನೆ ಮೀರುತ್ತಿದ್ದೇನೆ

ನರೇಂದ್ರ ಮೋದಿಯವರಿಗೆ ವಾಟ್ಸ್ ಆಪ್ ನಲ್ಲಿ ಮೆಸೇಜ್‌ ಕಳುಹಿಸಿ ನಿಮ್ಮೊಂದಿಗೆ ಮಾತನಾಡಬೇಕು ಎಂದು ಹೇಳಿದ್ದೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಮಾತಾಡಬೇಕು ಎಂದು ತಿಳಿಸಿದ್ದೆ. ಅವರು ಸಹ ನನ್ನ ಮಾತಿಗೆ ಬೆಂಬಲ ಸೂಚಿಸಿದರು

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor