ವಿಳಾಸ ಕೇಳಿ ಗುಂಪಿನಿಂದ ಇಬ್ಬರ ಮೇಲೆ ಹಲ್ಲೆ! ಗಲಾಟೆ ಹಿನ್ನೆಲೆ ತುಂಗಾನಗರದಲ್ಲಿ ನಡೆದಿದ್ದೇನು?

KARNATAKA NEWS/ ONLINE / Malenadu today/ Aug 27, 2023 SHIVAMOGGA NEWS 

ಶಿವಮೊಗ್ಗದ ತುಂಗಾ ನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಿನ್ನೆ 15-20 ಜನರ ಗುಂಪೊಂದು ಇಬ್ಬರ ಮೇಲೆ ಹಲ್ಲೆ ಮಾಡಿದ ಘಟನೆ ಬಗ್ಗೆ ವರದಿಯಾಗಿದೆ. ಈ ಘಟನೆಗೂ ಮೊದಲು ಗುಂಪು ಘರ್ಷಣೆಯಾಗಿರುವ ಬಗ್ಗೆಯು ವರದಿಯಾಗಿದ್ದು, ಘಟನೆ ಕೋಮುಸೂಕ್ಷ್ಮತೆಯನ್ನು ಹೊಂದಿದೆ. 

ಇದನ್ನು ಸಹ ಓದಿ ಕುಸಿದ ಟಾಕೀಸ್ ಮಾಲೀಕರ ವಿರುದ್ಧವೇ ದಾಖಲಾಯ್ತು ಸುಮುಟೋ ಕೇಸ್! ಕಾರಣವೇನು ಗೊತ್ತಾ?

ವಿಳಾಸ ಕೇಳಿ ಹಲ್ಲೆ

ನಿನ್ನೆ ತುಂಗಾನಗರ ಪೊಲೀಸ್ ಸ್ಟೇಷನ್​ ಲಿಮಿಟ್ಸ್​ ಗೋಪಾಳದಲ್ಲಿರುವ ಕೊರಮರ ಕೇರಿಯಲ್ಲಿ ಗಲಾಟೆಯಾಗಿದೆ ಎಂಬ ಸುದ್ದಿ ಹೊರಬಿದ್ದ ಬೆನ್ನಲ್ಲೆ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಮೆಗ್ಗಾನ್ ಆಸ್ಪತ್ರೆಗೆ ಮಾಧ್ಯಮಗಳು ತೆರಳಿದ್ದವು. ಈ ವೇಳೆ ಅಲ್ಲಿ ಗಾಯಾಳು ತಿಮ್ಮೇಶ್ ಕೊಟ್ಟಿರುವ ಹೇಳಿಕೆ ಹಾಗೂ ದಾಖಲಿಸಿರುವ ದೂರಿನ ಪ್ರಕಾರ,  ಸುಮಾರು  15-20 ಜನರ ಗುಂಪೊಂದು ಯಾರದ್ದೋ ವಿಳಾಸ ಕೇಳಿಕೊಂಡು ಬಂದಿದೆ. ಕೈಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬಂದಿದ್ದ ಗುಂಪು, ವಿಳಾಸ ಕೇಳುವಾಗ, ಗಾಯಾಳು ಯಾಕ್ರೋ ಏನ್ರೋ ಎಂದು ವಿಚಾರಿಸಿದ್ದಾರೆ. ಅಷ್ಟಕ್ಕೆ ಅಲ್ಲಿದ್ದವರ ಮೇಲೆ ಗುಂಪು ಹಲ್ಲೆ ಮಾಡಿದೆ. ಈ ವೇಳೆ ತಿಮ್ಮೇಶ್ ಹಾಗೂ ಇನ್ನೊಬ್ಬ ಯುವನಕನಿಗೆ ಗಂಭೀರ ಗಾಯವಾಗಿದೆ. ತಕ್ಷಣ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಕೋಮು ಸೂಕ್ಷ್ಮವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್

ಇನ್ನೂ ಮೂಲಗಳ ಪ್ರಕಾರ, ಈ ಹಲ್ಲೆ ಘಟನೆ ನಡೆಯುವುದಕ್ಕೂ ಮೊದಲು ಇದೇ ಭಾಗದಲ್ಲಿಎರಡು ಗುಂಪುಗಳ ನಡುವೆ ಗಲಾಟೆಯಾಗಿದೆ ಎಂಬ ಮಾಹಿತಿಯಿದೆ.ಈ ಕಾರಣಕ್ಕೆ ಹಲ್ಲೆ ಘಟನೆ ನಡೆದಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೇಲಾಗಿ ಕೆಲದಿನಗಳಿಂದ   ಇಲ್ಲಿ ಕೆಲವು ದುಷ್ಕರ್ಮಿಗಳಿಂದ ಅಪರಾಧ ಕೃತ್ಯಗಳು ನಡೆಯುತ್ತಿದೆ ಎಂಬ ವಿಚಾರ ಸ್ಥಳೀಯರಿಂದ ತಿಳಿದುಬಂದಿದೆ. ಇನ್ನೂ ಹಬ್ಬಗಳ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಚಟುವಟಿಕೆಯ ಬಗ್ಗೆ ಗಮನ ಹರಿಸಿದೆ.  


ಇನ್ನಷ್ಟು ಸುದ್ದಿಗಳು 


 

 

Leave a Comment