ಅದು ರಾಜಕೀಯ ಶಕ್ತಿಕೇಂದ್ರವಾಗಿದ್ದ ಕ್ಷೇತ್ರ. ಆ ಕ್ಷೇತ್ರದಲ್ಲಿ ಬಸ್ಗಳ ವ್ಯವಸ್ಥೆಯು ಸಮರ್ಪಕವಾಗಿಲ್ಲ.ಇದಕ್ಕೆ ಸಾಕ್ಷಿ ಎಂಬಂತೆ ಸ್ಕೂಲ್ ಮಕ್ಕಳು ಬಸ್ ಹತ್ತಲು ಪರದಾಡುತ್ತಿರುವ ದೃಶ್ಯವೊಂದು ಹೊರಕ್ಕೆ ಬಂದಿದೆ. ಶಿವಮೊಗ್ಗ (shivamogga) ಜಿಲ್ಲೆ ಸೊರಬ (soraba) ತಾಲ್ಲೂಕಿನ ಶಿರಸಿ (sirisi) ಮಾರ್ಗದಲ್ಲಿ ಬಸ್ಸಿನ ಕೊರತೆಯಿದೆ.
ಇದನ್ನು ಸಹ ಓದಿ : ಸರ್ಕಾರಿ ಅಧಿಕಾರಿಗಳೇ ಹುಷಾರ್ | ರಹಸ್ಯ ಕ್ಯಾರ್ಯಾಚರಣೆ ಹೆಸರಿನಲ್ಲಿ ಹೆದರಿಸುವವರಿದ್ದಾರೆ?
ಈ ಮಾರ್ಗದಲ್ಲಿ ಬರುವ ನೆರೂರು ಪುರದೂರು, ಜಡ್ಡಿಹಳ್ಳಿ ಇನ್ನಿತರೆ ಗ್ರಾಮಗಳ ವಿದ್ಯಾರ್ಥಿಗಳು ಸ್ಕೂಲ್ಗೆ ಹೋಗಲು ಬರಲು ಹರಸಾಹಸ ಪಡಬೇಕಾಗಿದೆ. ಅದರಲ್ಲಿಯು ಬರುವ ಕೆಲವೇ ಕೆಲವು ಬಸ್ಗಳಿಗೆ ಮುಗಿಬಿದ್ದಾದರೂ ಹತ್ತಿ ಹೋಗಬೇಕಾದ ಪರಿಸ್ಥಿತಿ ಇದೆ.
ಈ ಭಾಗದಲ್ಲಿ ಬರುವ ಬಸ್ಗಳಲ್ಲಿ ಜಾಗವಿಲ್ಲದಿದ್ದರೇ, ಬಸ್ನ ಡೋರ್ನಲ್ಲಿಯೇ ನೇತಾಡಿಕೊಂಡು ಓಡಾಡುವ ಸನ್ನಿವೇಶವಿದೆ. ಕಳೆದ ಸೋಮವಾರ ನಡೆದ ಘಟನೆಯ ದೃಶ್ಯವೊಂದು ಸ್ಥಳಿಯರೊಬ್ಬರು ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದು, ಈ ಅವ್ಯವಸ್ಥೆಯನ್ನು ಆಡಳಿತ ವ್ಯವಸ್ಥೆಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ.
ಇದನ್ನು ಸಹ ಓದಿ : ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ?
ನೆರೂರು ಗ್ರಾಮದ ವಿದ್ಯಾರ್ಥಿಗಳು ಬಸ್ನಲ್ಲಿ ಜಾಗವಿಲ್ಲದ ಕಾರಣಕ್ಕೆ ಡೋರ್ನಲ್ಲಿ ನೇತಾಡುತ್ತಾ ಸಾಗುತ್ತಿರುವ ದೃಶ್ಯ ಇದಾಗಿದೆ. ಅಂದಹಾಗೆ ಸೊರಬದಿಂದ ಶಿರಸಿಗೆ ಬೆಳಗ್ಗೆ ಫಸ್ಟ್ ಬಸ್ 8.30 ಕ್ಕೆ ಈ ಭಾಗಕ್ಕೆ ಬರುತ್ತದೆ. ಇದಕ್ಕೂ ಮೊದಲು ಬರುವ ಬಸ್ಗಳು ಬೆಳಗ್ಗೆಯೇ ಇಲ್ಲಿ ಪಾಸಾಗುತ್ತದೆ.
ಇನ್ನೂ ಸ್ಕೂಲ್ ಸಮಯಕ್ಕೆ ಬರುವ 8.30 ರ ಬಸ್ನಲ್ಲಿ ಅತಿಹೆಚ್ಚು ಮಕ್ಕಳ ರಶ್ ಇರುತ್ತದೆ. ಆದರೆ ಬಸ್ನಲ್ಲಿ ಸ್ಥಳಾವಾಕಾಶ ಇಲ್ಲದಿದ್ದರೇ ಮಕ್ಕಳಿಗೆ ಬಸ್ನಲ್ಲಿ ಸರ್ಕಸ್ ಮಾಡುವುದು ಅನಿವಾರ್ಯವಾಗ್ತಿದೆ ಎಂಬುದು ಸ್ಥಳೀಯರ ಅಳಲಾಗಿದೆ. ಇನ್ನೂ ಸರ್ಕಾರಿ ಬಸ್ನ ನಂತರ ಬರುವ ಖಾಸಗಿ ಬಸ್ 9.30 ಕ್ಕೆ ಈ ಭಾಗದಲ್ಲಿ ಸಂಚರಿಸುತ್ತದೆ. ಅದರಲ್ಲಿ ಮಕ್ಕಳು ಪ್ರಯಾಣಿಸುವುದು ಕಷ್ಟ. ಹಾಗೇ ಪ್ರಯಾಣಿಸಿದರೂ ಸಹ ಶಾಲೆಗೆ ತಡವಾಗುತ್ತಿದೆ.
ಇದನ್ನು ಸಹ ಓದಿ : ಶಿರಾಳಕೊಪ್ಪದಲ್ಲಿ ಗೋಡೆ ಬರಹ / ಎಸ್ಪಿ ಹೇಳಿದ್ದೇನು? / ನಡೆದಿದ್ದೇನು?
ಹೀಗಾಗಿ ಸೊರಬದಿಂದ ಬೆಳಗ್ಗೆ 7.45 ಇಲ್ಲವೆ 8 ಕ್ಕೆ ಹೆಚ್ಚುವರಿ ಬಸ್ ಬಿಡುವ ಅಗತ್ಯವಿದೆ. ಸಂಜೆ ಕೂಡ ಶಿರಸಿಯಿಂದ ಸೊರಬಕ್ಕೆ 4-30 ಇಲ್ಲವೆ 5 ಕ್ಕೆ ಬಸ್ ಬಿಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗು ಸಂಬಂಧ ಅಧಿಕಾರಿಗಳು ಕ್ರಮವಹಿಸಲಿ ಎಂದು ಸ್ಥಳೀಯರು ಮನವಿ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸಾಗರ ಆರ್ಟಿಒ ಅಧಿಕಾರಿಗಳು ಹಾಗು ಕೆಎಸ್ಆರ್ಟಿಸಿ ಬಸ್ನ ಆಡಳಿತ ವರ್ಗ ಗಮನಹರಿಸಬೇಕಿದೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link