MALENADUTODAY.COM | SHIVAMOGGA NEWS |THIRTHAHALLI TALUK
ರೋಡ್ ಸೈಡ್ನಲ್ಲಿ ಪಾರ್ಕ್ ಮಾಡಿದ್ದ ಲಾರಿಯೊಂದರಲ್ಲಿ ಹುಬ್ಬಳ್ಳಿ (hubballi) ಮೂಲದ ಲಾರಿ ಚಾಲಕನ (lorry driver)ಶವ ಪತ್ತೆಯಾಗಿದೆ. ಈ ಬಗ್ಗೆ ನಿನ್ನೆಯಷ್ಟೆ ಗೊತ್ತಾಗಿದ್ದು, ಆತ ಮೃತಪಟ್ಟು ನಾಲ್ಕು ದಿನ ಕಳೆದಿರಬಹುದು ಎಂದು ಅಂದಾಜಿಸಲಾಗಿದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಸೀಬಿನಕೆರೆ ಬಳಿಯಲ್ಲಿ ಅಚ್ಚೂರ್ ಆಗ್ರೋ ಸೇಲ್ಸ್ ಅಂಡ್ ಸರ್ವಿಸ್ ಸಮೀಪ ಕಳೆದ ನಾಲ್ಕು ದಿನಗಳಿಂದ ಲಾರಿಯೊಂದು ನಿಂತಿತ್ತು. ಯಾರೋ ಪಾರ್ಕ್ ಮಾಡಿರಬಹುದು ಎಂದುಕೊಂಡಿದ್ದರು. ಆದರೆ ಲಾರಿಯಿಂದ ನಿನ್ನೆ ವಿಪರೀತ ವಾಸನೆ ಬರಲು ಆರಂಭವಾಗಿದೆ. ಅನುಮಾನಗೊಂಡು ಸ್ಥಳೀಯರು ಗಮನಿಸಿದ್ದಾರೆ.
ಇನ್ನೊಂದೆಡೆ ನಾಲ್ಕು ದಿನಗಳಿಂದ ಚಾಲಕ ಫೋನ್ ಸ್ವೀಕರಿಸದ ಹಿನ್ನೆಲೆಯಲ್ಲಿ ಸಂಬಂಧಪಟ್ಟವರು ಲಾರಿಯನ್ನು ಪರಿಶೀಲಿಸಲು ಮುಂದಾಗಿದ್ದಾರೆ. ಈ ವೇಳೆ ಚಾಲಕ ಲಾರಿ ಒಳಗಡೆಯೇ ಸಾವನ್ನಪ್ಪಿರುವುದು ಗೊತ್ತಾಗಿದೆ. ಹೃದಯಾಘಾತದಿಂದ ಆತ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಇನ್ನೂ ಮೃತದೇಹವನ್ನು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಇನ್ನೂ ಸಾವನ್ನಪ್ಪಿರುವುದು ಹುಬ್ಬಳ್ಳಿ ಮೂಲದ ಮಲ್ಲಿಕಾರ್ಜುನ್ ಎಂಬದು ಗೊತ್ತಾಗಿದೆ.
ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ತಂಡದವರಿಂದ ಅನಾಥ ಶವ ಆಸ್ಪತ್ರೆಗೆ ಸಾಗಣೆ:
ತೀರ್ಥಹಳ್ಳಿಯ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣ ತಂಡದ ರಾಘವೇಂದ್ರ ಶಶಿಕುಮಾರ್ ಶರತ್ ಪುಸನ್ನ ಪುನೀತ್ ರವರು, ಮೃತಪಟ್ಟ ಲಾರಿ ಚಾಲಕನ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೆ ನೆರವಾಗಿದ್ದಾರೆ.

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com



