ಶಿವಮೊಗ್ಗ: ರೈಲ್ವೆ ಸ್ಟೇಷನ್ ಬಳಿ ನಿಂತಿದ್ದ ಗೂಡ್ಸ್ ಲಾರಿ ಬೆಂಕಿಗೆ ಭಸ್ಮ; ತಪ್ಪಿದ ಭೀಕರ ದುರಂತ!

ಹಂಚಿಕೊಳ್ಳಿ
WhatsApp Facebook X Telegram
Shivamogga Fire Accident Goods Lorry Gutted in Fire
Shivamogga Fire Accident Goods Lorry Gutted in Fire

ಶಿವಮೊಗ್ಗ: ನಗರದ ರೈಲ್ವೆ ನಿಲ್ದಾಣದ ಗೂಡ್ಸ್ ಶೆಡ್ ಬಳಿ ನಿಲ್ಲಿಸಲಾಗಿದ್ದ ಲಾರಿಯೊಂದು ಆಕಸ್ಮಿಕವಾಗಿ ಬೆಂಕಿಗಾಹುತಿಯಾಗಿದ್ದು, ಕ್ಷಣಾರ್ಧದಲ್ಲಿ ವಾಹನವು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಕರಕಲಾಗಿದೆ .

ಶಿವಮೊಗ್ಗದಲ್ಲಿ ಕಿಶೋರ್ ಕುಮಾರ್, ಸಿರಿ ಲವ್ ಲೆಟರ್ಸ್​! ಮಿಸ್​ ಮಾಡಿಕೊಳ್ಳಲೇ ಬೇಡಿ!

ಅಬಿದ್ ಎಂಬುವವರಿಗೆ ಸೇರಿದ ‘ಎಸ್ ಕೆ ಪಿ’ (SKP) ಹೆಸರಿನ ಈ ಗೂಡ್ಸ್ ಲಾರಿಯು ರೈಲ್ವೆ ಮೂಲಕ ಬಂದಿದ್ದ ಗೊಬ್ಬರವನ್ನು ಸಾಗಿಸಲು ಸಜ್ಜಾಗಿ ನಿಂತಿತ್ತು. ಇಂದು ಮುಂಜಾನೆ ಸುಮಾರು 5 ಗಂಟೆಯ ಸುಮಾರಿಗೆ ಯಾರೂ ಇಲ್ಲದ ಸಮಯದಲ್ಲಿ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. 

ಬೆಂಕಿಯು ಮೊದಲು ಲಾರಿಯ ಕ್ಯಾಬಿನ್ ಭಾಗದಲ್ಲಿ ಕಾಣಿಸಿಕೊಂಡಿದೆ. ಈ ವೇಳೆ ಅಲ್ಲೇ ಇದ್ದ ಕ್ಲೀನರ್ ಕೂಡಲೇ ಎಚ್ಚೆತ್ತುಕೊಂಡು ಮಾಲೀಕರಿಗೆ ವಿಷಯ ಮುಟ್ಟಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇಂಜಿನ್ ಅಥವಾ ಕ್ಯಾಬಿನ್ ಭಾಗದಲ್ಲಿ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

ಬೆಂಕಿಯ ತೀವ್ರತೆಗೆ ಲಾರಿಯ ಮುಂಭಾಗ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೂ, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

Fire Accident Goods Lorry Gutted in Fire

Shivamogga Fire Accident Goods Lorry Gutted in Fire
Shivamogga Fire Accident Goods Lorry Gutted in Fire
shivamogga car decor sun control house
shivamogga car decor sun control house

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor