ಶಿವಮೊಗ್ಗ / ಮಲೆನಾಡು ಟುಡೆ ಸುದ್ದಿ / ನಾಳೆ ವೀಕೆಂಡ್ಗೆ ಎಲ್ಲಿಗೆ ಹೋಗೋದು ಅಂತಾ ನಿಮ್ಮ ಮನಸ್ಸಲ್ಲಿ ಪ್ರಶ್ನೆ ಹುಟ್ಟಿದ್ದರೇ, ಅದಕ್ಕೊಂದು ಉತ್ತರ ಇಲ್ಲಿದೆ. ನಾಳೆ ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಸಾಲಿಡ್ ಆದ ಡ್ರಾಮಾ ಶೋ ನಡೆಯಲಿದೆ.

ಹವಾಮಾನ ಮುನ್ಸೂಚನೆ! ಶಿವಮೊಗ್ಗ : ಇನ್ನೈದು ದಿನ ಗುಡುಗು, ಗಾಳಿ, ಮಳೆ!
ಹಿಂದೆ ಲವ್, ಪ್ರೀತಿ, ಪ್ರೇಮ ಅಂತಾ ಓಡಾಡ್ತಿದ್ದವರು, ತಮ್ಮ ಪ್ರೀತಿಯನ್ನ ಹೇಳೋದಕ್ಕೆನೇ ನೂರು ಸಾಹಸ ಮಾಡುತ್ತಿದ್ದರು. ಬಾಯಿ ಮಾತಲ್ಲಿ ಹೇಳೋಕಾಗಲ್ಲ ಅಂತಾ ಲೆಟರ್ ಕೊಡ್ತಿದ್ರು. ಆ ಲೆಟರ್ಗಳ ಪುರಾಣವೇ ಒಂದು ಸ್ವಾರಸ್ಯಕರ ನೆನಪುಗಳು ಈಗಿನ ಕಾಲ ವಾಟ್ಸಾಪ್ ಯುಗಕ್ಕೆ ಅಂತಹದ್ದೊಂದು ನೆನಪುಗಳನ್ನ ಆ ದಿನಗಳ ಭಾವನೆಗಳನ್ನ ಕಣ್ಮುಂದೆ ತರುವ ಪ್ರಯತ್ನವೇ ಬೆಂಗಳೂರು ಥಿಯೇಟರ್ ಕಲೆಕ್ಟಿವ್ ಹಾಗೂ ಶಿವಮೊಗ್ಗದ ನಮ್ ಟೀಮ್ (ರಿ) ಹಮ್ಮಿಕೊಂಡಿರುವ ಲವ್ ಲೆಟರ್ಸ್ ನಾಯಕ.
- ಅಂದಹಾಗೆ, ಕಾರ್ಯಕ್ರಮದ ಟೈಂ ಹೀಗಿದೆ. ಮಾರ್ಚ್ 22ರಂದು ಸಂಜೆ 7:00 ಗಂಟೆಗೆ ‘ಲವ್ ಲೆಟರ್ಸ್! ನಿನ್ನ ಪ್ರೀತಿಯ ನಾನು’ ಎಂಬ ವಿಶಿಷ್ಟ ನಾಟಕ ಕುವೆಂಪುರ ರಂಗಮಂದಿರದಲ್ಲಿ ನಡೆಯಲಿದೆ.
- ಖ್ಯಾತ ಕಲಾವಿದ ಕಿಶೋರ್ ಕುಮಾರ್ ಹಾಗೂ ಸಿರಿ ರವಿಕುಮಾರ್ ಈ ನಾಟಕದಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿದ್ದು, ವಿಶೇಷ ಅನುಭವ ನೀಡಲಿದ್ದಾರೆ.
- ಜೆಂಜಿ ಕಾಲದಲ್ಲಿ ಕಣ್ಮರೆಯಾಗಿರುವ ಕಾಗದದ ಮೇಲಿನ ಅಕ್ಷರಗಳು, ಮರೆ ಆಗಿರುವ ಭಾವನೆಗಳು, ಹೇಳಲಾಗದ ಕಥೆ ಹಾಗೂ ಹೇಳದೇ ಉಳಿದ ವಿದಾಯಗಳ ಒಟ್ಟಾರೆ ಒಡಲ ಲೋಕದ ಮನದ ಮಾತುಗಳನ್ನು ಈ ನಾಟಕವು ಅನಾವರಣಗೊಳಿಸಲಿದೆ.
- ಇದು ಕೇವಲ ಪತ್ರಗಳ ಕಥೆಯಲ್ಲ, ಬದಲಾಗಿ ಸ್ನೇಹ, ಕೈತಪ್ಪಿ ಹೋದ ಅವಕಾಶಗಳು ಮತ್ತು ಎಂದಿಗೂ ಮಸುಕಾಗದ ಮಾನವೀಯ ಬಂಧದ ಕಥಾಹಂದರವನ್ನು ಒಳಗೊಂಡಿದೆ.
ನಾಟಕದ ಟಿಕೆಟ್ ಹಾಗೂ ಹೆಚ್ಚಿನ ಮಾಹಿತಿಗಾಗಿ ರಜನೀಶ್ ನಾವುಡ ಅವರನ್ನು 9844081540 ಮೊಬೈಲ್ ಸಂಖ್ಯೆಯ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹವಾಮಾನ ಮುನ್ಸೂಚನೆ! ಶಿವಮೊಗ್ಗ : ಇನ್ನೈದು ದಿನ ಗುಡುಗು, ಗಾಳಿ, ಮಳೆ!
When and where are famous actors Kishore Kumar and Siri performing Kannada play Love Letters! Ninna Preethiya Naanu’ in Shivamogga?
ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.