ಮಗನ ಜೀವ ಉಳಿಸಲು ಕೊನೆವರೆಗೂ ಹೋರಾಡಿದ ತಂದೆ

ಹಂಚಿಕೊಳ್ಳಿ
WhatsApp Facebook X Telegram
Father Fights for 17 Years to Save Son from Rare Genetic Disorder

Genetic Disorder ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಅದು ವಿದಿ ಲಿಖಿತವೆಂಬಂತೆ ಆ ಕುಟುಂಬಕ್ಕೆ ಎರವಲು ಆಗಿ ಬಂದ ಕಾಯಿಲೆ. ಜೆನಿಟಿಕ್ ಡಿಸಾರ್ಡರ್ (Genetic Disorder). ಹತ್ತು ಲಕ್ಷಕ್ಕೆ ಒಬ್ಬರಲ್ಲಿ ಕಾಣುವ ಕಾಯಿಲೆಯಂತೆ. ಹುಟ್ಟಿನಿಂದ ಗರಿಷ್ಠ ಹದಿನೈದು ವರ್ಷ ಬದುಕಿದರೆ ಹೆಚ್ಚಂತೆ. ವಂಶವಾಹಿಯಾಗಿ ಕಂಡು ಬರುವ ಈ ಕಾಯಿಲೆ ದಿನ ಕಳೆದಂತೆ ಜೀವ ಕೋಶಗಳನ್ನೆ ಸಾಯಿಸುತ್ತ..ದೇಹದ ಪ್ರತಿಯೊಂದು ಅಂಗಗಳ ಕೆಲಸವನ್ನೆ ನಿಷ್ಕ್ರಿಯ ಗೊಳಿಸುತ್ತೆ‌ ಅಂತಿಮವಾಗಿ ಮಿದುಳ ಜೀವ ಕಣಗಳು ಸತ್ವ ಕಳೆದುಕೊಂಡು ಉಸಿರು ಚೆಲ್ಲುವ ಯಾತನಾಮಯ ನರಕ ಸದೃಶ್ಯ ಕ್ಷಣಗಳು…ಈ ರೋಗದ ಲಕ್ಷಣ

ಅದೇನೆ ಇರಲಿ ತನ್ನ‌ ಮಗನಿಗೆ ಈ ರೀತಿಯ ಕಾಯಿಲೆ ಭಾದಿಸಿದಾಗ ಆ ಪೋಷಕರು ಎಳ್ಳಷ್ಟು ಎದೆಗುಂದಲಿಲ್ಲ. ಮಗನ ಜೀವ ಉಳಿಸಿ ಕೊಳ್ಳಲು ಬಾಗಿಲು ತಟ್ಡಿದ ಆಸ್ಪತ್ರೆಗಳಿಲ್ಲ. ಬೇಡಿದ ವೈದ್ಯರುಗಳಿಲ್ಲ…ವ್ಯಯಿಸಿದ ಹಣಕ್ಕೆ ಲೆಕ್ಕವಿಲ್ಲ…ಹೌದು ಇದು ರಿಯಲ್ ಎಸ್ಟೇಟ್ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ರಿಚರ್ಡ್ ದಂಪತಿ ನೋವಿನ ಬದುಕಿನ ಯಾನದ ಕಥೆ.

ದಂಪತಿಗೆ ಮಗ ಜಿತಿನ್ ಹುಟ್ಡಿದ ಸಂದರ್ಭದಲ್ಲಿ ಆತನಲ್ಲಿ ಜೆನಿಟಿಕ್ ಡಿಸಾರ್ಡರ್ ಕಾಯಿಲೆ ಲಕ್ಷಣ ಪತ್ತೆಯಾಗಿದೆ.ಆರಂಭದಲ್ಲಿ ಮಗ ಜಿತಿನ್ ನನ್ನು ಶಾಲೆಗೆ ಕಳುಹಿಸುತ್ತಿದ್ದ ಪೋಷಕರು. ಕಾಯಿಲೆ ಉಲ್ಬಣಸಿದ ನಂತರ ಶಾಲೆ ಬಿಡಿಸಿ ಮನೆಯಲ್ಲೆ ಚಿಕಿತ್ಸೆ ಕೊಡಿಸಿದರು…ಆರೋಗ್ಯ ವಿಚಾರಿಸಲು ಸಿಬ್ಬಂದಿ ನೇಮಿಸಿದರು. ಕಾಲಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ಕೊಡಿಸಿದರು.

ಮಗ ಎಂದಿದ್ದರೂ ಸಾಯುವುದು ಗ್ಯಾರಂಟಿ ಎಂದು ವೈದ್ಯರು ದೃಡಪಡಿಸಿದ್ದರೂ..ರಿಚರ್ಡ್ ದಂಪತಿ..ದೇವರಲ್ಲಿ ಭಾರಹೊತ್ತು ಮಗನ ಉಳಿವಿಗಾಗಿ ಹೋರಾಟವನ್ನೇ ನಡೆಸಿದ್ದರು…ಮಗ ಹುಟ್ಟಿದ ಸಂದರ್ಭದಲ್ಲಿ ವೈದ್ಯರು ಕಾಯಿಲೆ ಗುರುತಿಸಿ ನಿಮ್ಮ ಮಗ ಹದಿನೈದು ವರ್ಷ ಬದುಕಿದರೇ ಹೆಚ್ಚು ಎಂದು ಭವಿಷ್ಯ ನುಡಿದಿದ್ದರು. ವೈದ್ಯರು ಹೇಳಿದಂತೆ ಮಗ…ಅದಕ್ಕಿಂತ ಎರಡು ವರ್ಷ ಮಿಗಿಲಾಗಿ ಬದುಕಿದ್ದ.

Whatsapp / https://chat.whatsapp.com/JrsZ8He4nN600n0r3tJItz

ಆ ಜೀವವನ್ನು ಉಳಿಸಲು ಕೊನೆವರೆಗೂ ರಿಚರ್ಡ್ ಹೋರಾಟವನ್ನೇ ನಡೆಸಿದ್ದರು.ಕಳೆದ ಮೂರು ದಿನಗಳಿಂದ ಮಣಿಪಾಲ್ ಆಸ್ಪತ್ರೆಗೆ ಮಗನನ್ನು ದಾಖಲಿಸಿದ್ದ ರಿಚರ್ಡ್, ಆತನ ಉಳಿವಿಗಾಗಿ ಎಲ್ಲಾ ಶ್ರಮ‌ ಹಾಕಿದ್ದರು…ಆದರೆ ಇಂದು ಚಿಕಿತ್ಸೆ ಪಲಕಾರಿಯಾಗದೆ ಜಿತಿನ್ ಕೊನೆ ಉಸಿರೆಳೆದಿದ್ದಾನೆ…ಮಗ ಹದಿನೈದು ವರ್ಷವಷ್ಟೆ ಬದುಕುವುದು ಎಂದು ವೈದ್ಯರು ಹೇಳಿದಾಗ ಹದಿನೈದು ವರ್ಷವೂ ಕಣ್ಣೀರಿನಲ್ಲೇ ಕೈ ತೊಳೆದು ಮಗನ ಉಳಿವಿಗಾಗಿ ಹೋರಾಡಿದ ರಿಚರ್ಡ್ ದಂಪತಿ ತ್ಯಾಗಕ್ಕೆ ಪರ್ಯಾಯವಿಲ್ಲ.

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor