ಅಡಿಕೆ ಬೆಳೆಯ ಕುರಿತು ಕರ್ನಾಟಕ ಸರ್ಕಾರದ ಗೃಹಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಖಂಡನೀಯ ಮತ್ತು ಅವೈಜ್ಞಾನಿಕ. ಅವರು ತಮ್ಮ ಹೇಳಿಕೆ ಬಗ್ಗೆ ಬೆಳೆಗಾರರ ಕ್ಷಮೆ ಯಾಚಿಸಬೇಕು ಎಂದು ಕರ್ನಾಟಕ ರಾಜ್ಯ ರೈತಸಂಘದ (ಬಡಗಲ್‌ಪುರ ನಾಗೇಂದ್ರ ಬಣ) ಅಧ್ಯಕ್ಷ ಮಂಜಪ್ಪ ಎಂ.ಬಿ.ಹಿರೇನೆಲ್ಲೂರು ಒತ್ತಾಯಿಸಿದ್ಧಾರೆ.
ಶಿವಮೊಗ್ಗದ ಡಿವಿಎಸ್ ಸಂಸ್ಥೆಗೆ ಬರಲಿದ್ದಾರೆ ಯದುವೀರ್ ಒಡೆಯರ್! ವಿಶೇಷವೇನು ಗೊತ್ತಾ? ಇಲ್ಲಿದೆ ವಿವರ
ಸಾಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರ ಹೇಳಿಕೆಯಿಂದ ಬೆಳೆಗಾರರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರೇ ಅಡಿಕೆ ಬೆಳೆ ಕುರಿತು ಆಡಿರುವ ಮಾತು ಅಡಿಕೆ ಬೆಳೆಗಾರ ಸಮೂಹದ ನಿದ್ದೆಗೆಡಿಸಿದೆ ಎಂದರು.
ಸಾಗರ ಪಟ್ಟಣದ ಎನ್ಎನ್ ಸರ್ಕಲ್ ಬಳಿಯಲ್ಲಿ ಮನೆಯೊಂದರಲ್ಲಿ ಬೆಂಕಿ ಅವಘಡ/ ಅಗ್ನಿ ಆಕಸ್ಮಿಕಕ್ಕೆ ಕಾರಣ ನಿಗೂಢ
ಅಡಿಕೆ ಬೆಳೆಗಾರರು ಇದೇ ರೀತಿ ಅಡಿಕೆ ಬೆಳೆಯುತ್ತಿದ್ದರೆ ಮುಂದಿನ ಐದು ವರ್ಷಗಳಲ್ಲಿ ಬೀದಿಗೆ ಬೀಳುವುದು ಗ್ಯಾರಂಟಿ ಎಂದು ಗೃಹ ಸಚಿವರು ಸದನದಲ್ಲಿ ಹೇಳಿದ್ದಾರೆ. ವಾಸ್ತವವಾಗಿ ಕೇಂದ್ರ ಸರ್ಕಾರದ ಅಡಿಕೆ ಆಮದು ತಿಯಿಂದಾಗಿ ಬೆಳೆಗಾರರ ಆತ್ಮಸ್ಥೈರ್ಯ ಕುಸಿಯುತ್ತಿದೆ. ಮಲೆನಾಡು ಭಾಗದಲ್ಲಿ ಅಡಿಕೆ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಆದರೆ ಅಡಿಕೆ ಬೆಳೆಗೆ ಕೊಳೆರೋಗ, ಎಲೆಚುಕ್ಕೆ ರೋಗದಂತಹ ಪೀಡೆಗಳು ಎದುರಾಗಿದ್ದು, ಬೆಳೆಗಾರರು ಫಸಲು ಕೈಗೆ ಸಿಗದೆ ಆತಂಕದಲ್ಲಿದ್ದಾರೆ.
Train news: ಶಿವಮೊಗ್ಗ ಬೆಂಗಳೂರು ರೈಲ್ವೆ ಪ್ರಯಾಣಿಕರಿಗೆ ಗುಡ್ ನ್ಯೂಸ್/ ಸುಖಕರ ಪ್ರಯಾಣಕ್ಕೆ ಸಿಗಲಿದೆ ಈ ಸೌಲಭ್ಯ
ಸಚಿವರು ಕೇಂದ್ರ ಸರ್ಕಾರದ ಮೇಲೆ ಅಡಿಕೆ ಆಮದು ಮಾಡಿಕೊಳ್ಳದಂತೆ ಯೋಗ ಹೋಗಿ ಒತ್ತಡ ತಂದಿದ್ದರೂ ಅದು ಫಲಪ್ರದವಾಗಿಲ್ಲ. ತಮ್ಮದೇ ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಾಗದೆ ಹತಾಶರಾಗಿರುವ ಗೃಹ ಸಚಿವರು ಈಗ ಅಡಿಕೆ ಬೆಳೆಯ ಮೇಲೆಯೇ ಗೂಬೆ ಕೂರಿಸುವ ಪ್ರಯತ್ನ ನಡೆಸುತ್ತಿರುವುದನ್ನು ರೈತ ಸಂಘ ಖಂಡಿಸುತ್ತದೆ ಎಂದರು.
ಬ್ರೇಕಿಂಗ್ ನ್ಯೂಸ್ ಸಂಸದ ರಾಘವೇಂದ್ರರವರ ಸಾಮಾಜಿಕ ಜಾಲತಾಣ ನೋಡಿಕೊಳ್ತಿದ್ದ ಪ್ರಸನ್ನ ಭಟ್ ಕೆರೆಯಲ್ಲಿ ಕಣ್ಮರೆ/ ಈಜಲು ಹೋದವರು ನಾಪತ್ತೆ
ಅಡಿಕೆ ಬೆಳೆ ಕಡಿಮೆ ಇರುವುದರಿಂದ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ದರ ಕುಸಿತ, ಕಾಯಿಲೆ ಬಾಧೆ, ಸರ್ಕಾರದ ನಿರ್ಲಕ್ಷ್ಯ ಎಲ್ಲವೂ ಒಂದರ್ಥದಲ್ಲಿ ಅಡಿಕೆ ಬೆಳೆಗೆ ಮತ್ತು ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ. ಇಂತಹ ಹೊತ್ತಿನಲ್ಲಿ ಸಚಿವರು ಬೇಜವಾಬ್ದಾರಿ ಹೇಳಿಕೆ ಡಿದ್ದು, ಉಳಿದ ಜನಪ್ರತಿನಿಧಿಗಳು ಈ ಕುರಿತು ಮೌನವಹಿಸಿರುವುದು ಆಶ್ಚರ್ಯ ಉಂಟುಮಾಡಿದೆ. ಅಡಿಕೆ ದರ ವಿವಿಧ ಕಾರಣದಿಂದ ಕುಸಿಯುತ್ತಿದೆ. ಇದೇ ಧೋರಣೆ ಮುಂದುವರೆದರೆ ರೈತ ಸಂಘ ಬೀದಿಗಿಳಿದು ಪ್ರತಿಭಟಿಸುವುದು ಅನಿವಾರ್ಯವಾಗುತ್ತದೆ ಎಂದರು.
ಇದನ್ನು ಓದಿ : Exclusive / ಸಾಗರ ಟೌನ್ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ



