ಕಾವೇರಿ ಬೆನ್ನಲ್ಲೆ ಭದ್ರಾ ನೀರಿಗಾಗಿ ಶುರುವಾಯ್ತು ಹೋರಾಟ! ಇಂದು ಜಿಲ್ಲಾ ಬಂದ್?

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Sep 25, 2023 SHIVAMOGGA NEWS’

ಅತ್ತ ಕಾವೇರಿಗಾಗಿ ಹೋರಾಟ ನಡೆಯುತ್ತಿರುವ ಬೆನ್ನಲ್ಲೆ ಇದೀಗ ಭದ್ರಾ ನೀರಿಗಾಗಿ ಹೋರಾಟ ಆರಂಭವಾಗಿದೆ. ಶಿವಮೊಗ್ಗದ ನೆರೆಯ ಜಿಲ್ಲೆ ದಾವಣಗೆರೆಯಲ್ಲಿಂದ  ಭದ್ರಾ ಜಲಾಶಯದಿಂದ ಬಲದಂಡೆ ಮತ್ತು ಎಡದಂಡೆ ನಾಲೆಗಳಿಗೆ ಸತತ 100 ದಿನ ಕಾಲ ನೀರು ಬಿಡದಿರುವ ನಿರ್ಧಾರ ಖಂಡಿಸಿ ಇಂದು ರೈತರು ಪ್ರತಿಭಟನೆ ನಡೆಸಲಿದ್ದಾರೆ. ಅಲ್ಲದೆ ದಾವಣಗೆರೆ  ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ

ಭದ್ರಾ ಕಾಡಾ ಸಮಿತಿ 40 ದಿನಕ್ಕೆ ನೀರು ಬಂದ್‌ ಮಾಡಿ ದಾವಣಗೆರೆ ಜಿಲ್ಲೆಯ ಅಚ್ಚುಕಟ್ಟು ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ರೈತರು ಆರೋಪಿಸಿದ್ದು. 1.25 ಲಕ್ಷ ಎಕರೆಯಲ್ಲಿ ಭತ್ತದ ಬೆಳೆ ಒಣಗಿ ರೈತರು ನಷ್ಟ ಅನುಭವಿಸುವ ಆತಂಕ ಎದುರಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನು ಖಂಡಿಸಿ ಬಂದ್ ನಡೆಸಲಾಗುತ್ತಿದೆ ಎಂದು ಭಾರತೀಯ ರೈತ ಒಕ್ಕೂಟ ಹೇಳಿಕೊಂಡಿದೆ. 

ಬಲದಂಡೆ, ಎಡದಂಡೆನಾಲೆಗಳಿಗೆ ವರ್ಷದಲ್ಲಿ 100 ದಿನ ನೀರು ಹರಿಸಬೇಕು. ಆದರೆ ಈ ಬಾರಿ 40 ದಿನಕ್ಕೇ ನೀರು ಮಾಡಲಾಗಿದೆ. ಇದರಿಂದ 1.25 ಲಕ್ಷ ಎಕರೆ ಪ್ರದೇಶದ ಭತ್ತ ಒಣಗುವ ಆತಂಕ ರೈತರಿಗೆ ಎದುರಾಗಿದೆ.ಹೀಗಾಗಿ ದಾವಣಗೆರೆಯಲ್ಲಿ ಆಕ್ರೋಶ ಬುಗಿಲೆದ್ದಿದೆ.  ಭದ್ರಾವತಿ ಭಾಗದ ಅಚ್ಚುಕಟ್ಟು ರೈತರಲ್ಲದವರ ಒತ್ತಡಕ್ಕೆ ಮಣಿದು, ನೀರು ನಿಲ್ಲಿಸಲಾಗಿದೆ ಎಂಬುದು ರೈತ ಒಕ್ಕೂಟದ ಆರೋಪವಾಗಿದೆ 

ಭದ್ರಾ ಡ್ಯಾಂನಲ್ಲಿ ಈಗ ಸಂಗ್ರಹವಿರುವ ನೀರಿನಲ್ಲಿ ಮಳೆಗಾಲದ ಬೆಳೆಗೆ ನೀರು ಬಿಟ್ಟರೂ ಬೇಸಿಗೆ ನೀರಿಗೆ ಸಮಸ್ಯೆ ಆಗದು. 8.43 ಟಿಎಂಸಿ ನೀರು ಬಳಕೆಗೆ ಸಿಗಲಿದೆ. ಹಿಂದೆ ಇದಕ್ಕಿಂತಲೂ ಕಡಿಮೆ ನೀರಿದ್ದಾಗಲೂ ಮಳೆಗಾಲದ ಬೆಳೆಗೆ ನೀರು ಬಿಡಲಾಗಿದೆ ಎಂದು ಆರೋಪಿಸಿದ್ದಾರೆ 

ಇನ್ನಷ್ಟು ಸುದ್ದಿಗಳು 

  1. BREAKING NEWS / ಜೋಗದ ಸಮೀಪ ನೀರಿಗಿಳಿದಿದ್ದ ಓರ್ವ ಅಧಿಕಾರಿ ಮತ್ತು ಬ್ಯಾಂಕ್ ಉದ್ಯೋಗಿ ಸಾವು! ಕಾರ್ಗಲ್​ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದೇನು?

  2. ಲೋಡ್ ಗಾಡಿಯಿಂದ ಬಿದ್ದ ಮರದ ತುಂಡು ಬಡಿದು ಬೈಕ್​ ಸವಾರನ ಸ್ಥಿತಿ ಗಂಭೀರ! ಹೀಗೂ ಆಗುತ್ತೆ ಹುಷಾರು ತಪ್ಪದಿರಿ ವಾಹನ ಸವಾರರೇ?

  3. ದೌರ್ಜನ್ಯ ಪ್ರಕರಣ ! ಶಿವಮೊಗ್ಗ ಡಿಸಿಯಿಂದ 15 ಸೂಚನೆ! ಯುವಕನ ಸಾವು, ಮರಳು, ಅಧಿಕಾರಿಗಳಿಂದ ಕಿರುಕುಳ ಬಗ್ಗೆ ಜಿಲ್ಲಾಧಿಕಾರಿ ಹೇಳಿದ್ದೇನು?


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor