ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನೋಡಿಕೊಂಡು ವಾಪಸ್ ಬಂದ ವ್ಯಕ್ತಿಗೆ ಕಾದಿತ್ತು ಶಾಕ್! ತಡವಾಗಿ ದಾಖಲಾಯ್ತು ದೂರು!

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 8, 2023 SHIVAMOGGA NEWS

ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ನೋಡಿಕೊಂಡು ವಾಪಸ್ ಬರುವಷ್ಟರಲ್ಲಿ ಬೈಕ್​ವೊಂದು ಕಳುವಾಗಿರುವ ಸಂಬಂಧ ತಡವಾಗಿ ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದೆ. 

 ಸುಮಾರು 1,10,000/-ರೂ ಬೆಲೆಬಾಳುವ ಬೈಕ್​ನ್ನು ನೆಹರು ರಸ್ತೆಯ ಗಾರ್ಡ್​ ಏರಿಯಾದ ಒಂದನೇ ಕ್ರಾಸ್​ನಲ್ಲಿ ನಿಲ್ಲಿಸಿ ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ನೋಡಲು ದೂರುದಾರರು ತೆರಳಿದ್ದರು.

ಆನಂತರ ಮೆರವಣಿಗೆ ಮುಗಿಸಿ ವಾಪಸ್ ಬಂದು ನೋಡುವಾಗ ಬೈಕ್ ಕಾಣೆಯಾಗಿತ್ತು. ತಕ್ಷಣ ಮನೆಯವರಿಗೆ ಸ್ನೇಹಿತರಿಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾರೆ.

ಯಾರಾದರೂ ತೆಗೆದುಕೊಂಡು ಹೋಗಿರಬಹುದು ಎಂದು ವಿಚಾರಿಸಿದ್ದಾರೆ. ಕೊನೆಗೆ ಎಲ್ಲೆಡೆ ಹುಡುಕಾಡಿ ತಡವಾಗಿ ಬಂದು ದೊಡ್ಡಪೇಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ IPC 1860 (U/s-379) ಅಡಿಯಲ್ಲಿ ಕೇಸ್ ದಾಖಲಾಗಿದೆ.  


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor