ಶಿವಮೊಗ್ಗ: ಮನೆಯಲ್ಲಿ ಸಾವಿರಾರು ರೂಪಾಯಿ ಮೌಲ್ಯದ ವಸ್ತುಗಳು ಕಳ್ಳತನ : ಕಳ್ಳರು ಕದ್ದಿದ್ದೇನು ಗೊತ್ತಾ, 

ಹಂಚಿಕೊಳ್ಳಿ
WhatsApp Facebook X Telegram
Shivamogga Cricket Betting ಶಿRacket Busted in Shivamogga
Shivamogga Cricket Betting Shivamogga Gym Trainer Attacked Vinobanagar Police JNNCE Hostel Student Arrested i Construction House Robbery Missing Passenger Auto Case Filed After One Year Delay heft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga

ಶಿವಮೊಗ್ಗ: ನಗರದ ಬೊಮ್ಮನಕಟ್ಟೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮನೆಯೊಂದಕ್ಕೆ ನುಗ್ಗಿದ ಕಳ್ಳರು, ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಿಕಲ್ ವೈರಿಂಗ್ ಮತ್ತು ಸಿಸಿ ಕ್ಯಾಮೆರಾಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ.

ಶಿವಮೊಗ್ಗ , ಶಿರಸಿ , ಸಾಗರ , ದಾವಣಗೆರೆ, ಚೆನ್ನಗರಿ ಸೇರಿದಂತೆ ರಾಜ್ಯದ ವಿವಿಧ ಮಾರ್ಕೆಟ್​ನಲ್ಲಿನ ಅಡಿಕೆ ದರದ ವಿವರ

ಘಟನೆಯ ವಿವರ

ದೂರುದಾರರಾದ ಇಂಜಿನಿಯರ್ ಅವರು ಶಿವಮೊಗ್ಗದ ಮಹಾಲಕ್ಷ್ಮಿ ಲೇಔಟ್‌ನ ಮನಯೊಂದರಲ್ಲಿ ಮನೆ ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಮನೆಯ ಬಹುತೇಕ ಕೆಲಸ ಮುಗಿದಿದ್ದು, ಎಲೆಕ್ಟ್ರಿಕಲ್ ವೈರಿಂಗ್ ಕೆಲಸ ಪೂರ್ಣಗೊಂಡು ಸ್ವಿಚ್ ಬೋರ್ಡ್ ಅಳವಡಿಕೆ ಬಾಕಿ ಇತ್ತು.

ಕಳೆದ ಮಾರ್ಚ್ 22 ರಂದು ಸಂಜೆ ವೈರಿಂಗ್ ಕೆಲಸ ಮುಗಿಸಿ, ರಾತ್ರಿ 7 ಗಂಟೆ ಸುಮಾರಿಗೆ ಮನೆಯ ಬಾಗಿಲು ಹಾಕಿ ಬೀಗ ಹಾಕಲಾಗಿತ್ತು. ಮರುದಿನ ಬೆಳಿಗ್ಗೆ 8 ಗಂಟೆ ಸುಮಾರಿಗೆ ಪರಿಶೀಲಿಸಲು ಹೋದಾಗ ಕಳವು ಪ್ರಕರಣ ಬೆಳಕಿಗೆ ಬಂದಿದೆ.

ಕಳವಾದ ವಸ್ತುಗಳ ವಿವರ

ಅಪರಿಚಿತ ಕಳ್ಳರು ಮನೆಯ ಕಬ್ಬಿಣದ ಬಾಗಿಲ ಮೇಲ್ಭಾಗದಿಂದ ಒಳಗೆ ನುಗ್ಗಿದ್ದಾರೆ ಎನ್ನಲಾಗಿದೆ. ಮನೆಯೊಳಗಿನ ವೈರಿಂಗ್ ಸಂಪರ್ಕ ಕಡಿತಗೊಳಿಸಿ, ಸುಮಾರು 97,000 ರೂಪಾಯಿ ಮೌಲ್ಯದ ವೈರ್‌ಗಳನ್ನು ಕಳವು ಮಾಡಿದ್ದಾರೆ. ಇದರ ಜೊತೆಗೆ, ಮನೆಯ ಹೊರಭಾಗದಲ್ಲಿ ಅಳವಡಿಸಲು ತಂದಿದ್ದ 8,000 ರೂಪಾಯಿ ಮೌಲ್ಯದ ಸಿಸಿ ಕ್ಯಾಮೆರಾ ಕನೆಕ್ಷನ್ ವೈರ್ ಮತ್ತು 13,000 ರೂಪಾಯಿ ಮೌಲ್ಯದ ಹಿಕ್ ವಿಷನ್ ಕಂಪನಿಯ ಸಿಸಿ ಕ್ಯಾಮೆರಾವನ್ನು ಯಾವುದೋ ಆಯುಧದಿಂದ ಕತ್ತರಿಸಿ ಕಳವು ಮಾಡಿದ್ದಾರೆ.

ಒಟ್ಟಾರೆಯಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಎಲೆಕ್ಟ್ರಿಕಲ್ ವೈರಿಂಗ್ ಮತ್ತು ಉಪಕರಣಗಳನ್ನು ಕಳ್ಳರು ದೋಚಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗದ  ವಿನೋಬಾ ನಗರ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Construction House Robbery in Shimoga 

Missing Passenger Auto Case Filed After One Year Delay Theft at Vinobanagar Shivamogga Burglary Shivamogga auto Driver Shivamogga news Family Attacked After Birthday Celebration in apmc shivamogga
Construction House Robbery
shivamogga car decor sun control house
shivamogga car decor sun control house

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor