SHIVAMOGGA NEWS TODAY

ದಿಢೀರ್​ ಎಪಿಎಲ್ ಆಗ್ತೀವೆ ಬಿಪಿಎಲ್ ಕಾರ್ಡ್‌! ಇದೆಂಥಾ ತಲೆನೋವು

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

BPL to APL Card ಶಿವಮೊಗ್ಗ : ರೇಷನ್ ಅಂಗಡಿಯಲ್ಲಿ ಅಕ್ಕಿ ಕೊಡ್ತಿದ್ದಾರಾ ಅಂತಾ ವಿಚಾರಿಸ್ಕೊಂಡು ಮಹಿಳೆಯೊಬ್ಬರು ಕಾರ್ಡ್, ಚೀಲ ಹಿಡ್ಕೊಂಡು ಹೋದರೆ, ಅಂಗಡಿಯಾತ ನಿಮ್ದು ಬಿಪಿಎಲ್​ ಅಲ್ಲ ಎಪಿಎಲ್ ಆಗಿದೆ ಅಂದಿರ್ತಾನೆ. 

ಇನ್ನೊಂದು ಕಡೆ ದೊಡ್ಡ ಆಸ್ಪತ್ರೆಗೆ ಹೋಗಿ ಒಪಿಡಿಯಲ್ಲಿ ಚೀಟಿ ಮಾಡಿಸ್ಕೋದ್ರೂ ಕಾರ್ಡ್​ ಎಪಿಎಲ್ ಆಗಿದೆ ಎನ್ನುವ ಶಾಕ್​ ಎದುರಾಗಿರ್ತದೆ. 

ಇತ್ತೀಚೆಗೆ ಸುಮಾರು ಜನರಿಗೆ ಇದೇ ರೀತಿ ಆಗಿದೆ. ಗೃಹಲಕ್ಷ್ಮೀ ದುಡ್ಡಿನ ಲೆಕ್ಕಾಚಾರ ನಡುವೆ ಹಲವು ಬಿಪಿಎಲ್​ ಕಾರ್ಡ್​ಗಳು ಒಳಗಿಂದೊಳಗೆ ಕಾಣದಂತೆ ಎಪಿಎಲ್​ ಆಗಿಬಿಟ್ಟಿವೆ. ಶಿವಮೊಗ್ಗ ಅಷ್ಟೆ ಅಲ್ಲದೆ ಇಡೀ ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಕಾರ್ಡ್‌ಗಳಾಗಿ ಪರಿವರ್ತನೆ ಮಾಡುತ್ತಿರುವ ಕಾರ್ಯ ರಾಕೆಟ್ ವೇಗದಲ್ಲಿ ಸಾಗುತ್ತಿದೆ. ಸಿಕ್ಕಿರೋ ಸ್ಟ್ರಾಂಗ್​ ಮಾಹಿತಿ ಪ್ರಕಾರ, ಮನೆಯಲ್ಲಿ ಪಾನ್​ಕಾರ್ಡ್​ ಹೊಂದಿದ್ದು ಐಟಿ ರಿಟರ್ನ್ಸ್​ ಫೈಲ್​ ಮಾಡ್ತಿದ್ದಾರೆ ಎಂಬ ರೆಕಾರ್ಡ್​ ನೋಡಿ, ಅವರವರೇ ದುಡ್ಡಿದ್ದೋರು ಅಂತಾ ಡಿಸೈಡ್ ಮಾಡಿ ಬಿಪಿಎಲ್​ ಕಾರ್ಡನ್ನ ಬಿಳಿ ಕಾರ್ಡ್ ಮಾಡ್ತಿದ್ದಾರಂತೆ. 

ಆದರೆ ಇದರಿಂದ ಜನ ಅಲ್ಲಾ, ಸಾಮಾನ್ಯ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.  ಅಂದಹಾಗೆ, ಆಗುತ್ತಿರುವ ತೊಂದರೆಗಳು ಒಂದೆರಡಲ್ಲ, ಒಬ್ಬ ಸಾಮಾನ್ಯ ವ್ಯಕ್ತಿ ಸರ್ಕಾರಿ ಆಸ್ಪತ್ರೆ ಸೇರಿದಂತೆ ಬೇರೆಬೇರೆ ಕಡೆಗೆ ಹೋದಂತಹ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಉಪಯೋಗಕ್ಕೆ ಬರುತ್ತಿಲ್ಲ. ಒಪಿಡಿ ಚೀಟಿ ಮಾಡಿಸುವಾಗ ನಿಮ್ಮ ಕಾರ್ಡ್ ಎಪಿಎಲ್ ಆಗಿ ಪರಿವರ್ತನೆಯಾಗಿದೆ, ಇಲ್ಲಿ ನಿಮಗೆ ಉಚಿತ ಚಿಕಿತ್ಸೆ ಸಿಗುವುದಿಲ್ಲ ಎಂಬ ಉತ್ತರ ದೊರೆಯುತ್ತಿದೆ. ಅಷ್ಟೇ ಅಲ್ಲದೆ ಆಯುಷ್ಮಾನ್​​ ಭಾರತ್​ ಕಾರ್ಡ್​ನಿಂದ ಸಿಗುವ ಸೌಲಭ್ಯ ಸೇರಿದಂತೆ ಹೀಗೆ ಹತ್ತು ಹಲವು ಸೌಲಭ್ಯಗಳಿಂದ ಜನರು ವಂಚಿತರಾಗುತ್ತಿದ್ದಾರೆ.

ಇನ್ನೂ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತಿಸುವಾಗ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ಅವಕಾಶವನ್ನೇನೋ ನೀಡಿದೆ. ಆದರೆ ಎಪಿಎಲ್ ಆಗಿ ಬದಲಾದ ಬಡವರು ಆಹಾರ ಇಲಾಖೆ ಕಚೇರಿಗಳಿಗೆ ಅಲೆದು ಅರ್ಜಿ ಸಲ್ಲಿಸಿ, ನಂತರ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುವಷ್ಟರಲ್ಲಿ ಅನೇಕ ತಿಂಗಳುಗಳೇ ಕಳೆದು ಹೋಗುತ್ತವೆ. ಅಲ್ಲಿಯವರೆಗೂ ಬಿಪಿಎಲ್ ಕಾರ್ಡ್‌ದಾರರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ತಿಂಗಳಿಗೊಮ್ಮೆ ಸಿಗುವ ಅಕ್ಕಿ ಸೇರಿದಂತೆ ಸರ್ಕಾರದ ಇನ್ನಿತರ ಸವಲತ್ತುಗಳು ಸಿಗುವುದು ಕೈ ತಪ್ಪಿ ಹೋಗುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ. ಅಲ್ಲದೆ  ಬಿಪಿಎಲ್ ಕಾರ್ಡ್ ಅನ್ನು ಎಪಿಎಲ್ ಆಗಿ ಬದಲಿಸುವ ಮುನ್ನ ಸಂಬಂಧಪಟ್ಟ ಸಾರ್ವಜನಿಕರಿಗೆ ಒಂದು ಮೆಸೇಜ್ ಮೂಲಕ ಎಚ್ಚರಿಕೆ ನೀಡಬಹುದಿತ್ತು. ಅಷ್ಟೇ ಅಲ್ಲದೆ, ಬದಲಾವಣೆಗೊಂಡ ಕಾರ್ಡ್‌ಗಳು ಮತ್ತೆ ಬಿಪಿಎಲ್ ಆಗಿ ಪರಿವರ್ತನೆಯಾಗುವವರೆಗಾದರೂ ಬಿಪಿಎಲ್ ಕಾರ್ಡ್‌ನಿಂದ ಸಿಗುವ ಸೌಲಭ್ಯಗಳನ್ನು ನೀಡಬೇಕು ಎನ್ನುತ್ತಿದ್ದಾರೆ ಸಾರ್ವಜನಿಕರು. 

BPL to APL Card ಇನ್ನು ಬಿಪಿಎಲ್​ ಕಾರ್ಡ್​ ಎಪಿಎಲ್​ ಕಾರ್ಡ್​​​ಗಳಾಗಿ ಬದಲಾವಣೆಯಾಗುತ್ತಿದ್ದು, ಇದನ್ನು ಸರಿ ಪಡಿಸಿಕೊಳ್ಳುವುದು ಹೇಗೆ ಎಂಬ ಗೊಂದಲ ಜನರಲ್ಲಿ ಮೂಡುವುದು ಸಹಜ. ನೀವೇಣಾದರೂ ನಿಜವಾಗಿಯೂ ಬಿಪಿಎಲ್​​ ಕಾರ್​​ಡ್​ಗೆ ಅರ್ಹಾಗಿದ್ದು, ಅದು ಏಪಿಲ್​​ ಕಾರ್ಡ್​ಗಳಾಗಿ ಬದಲಾವಣೇ ಆಗಿದ್ದರೆ ಅದನ್ನು ಸರಿಪಡಿಸಿಕೊಳ್ಳಲು ನೀವು ಈ ಕೆಳಗಿನ ಕ್ರಮಗಳನ್ನು ಅನುಸರಿಸಿಬೇಕಾಗುತ್ತದೆ

ಇ-ಸ್ಥಿತಿ (E-Status) ಪರಿಶೀಲಿಸಿ: ಆಹಾರ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ಕಾರ್ಡ್ ಏಕೆ ಬದಲಾಗಿದೆ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಿ.

ಆನ್‌ಲೈನ್ ಮೇಲ್ಮನವಿ: ಹತ್ತಿರದ ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಮರು-ಪರಿಶೀಲನೆಗೆ ಅರ್ಜಿ ಸಲ್ಲಿಸಿ.

ಆಹಾರ ನಿರೀಕ್ಷಕರ ಭೇಟಿ: ನಿಮ್ಮ ತಾಲ್ಲೂಕಿನ ಆಹಾರ ಕಚೇರಿಗೆ ಭೇಟಿ ನೀಡಿ ಆಹಾರ ನಿರೀಕ್ಷಕರಿಗೆ ಮನವಿ ಸಲ್ಲಿಸಿ ನೈಜ ಪರಿಸ್ಥಿತಿಯನ್ನು ವಿವರಿಸಿ.

ಅಗತ್ಯ ದಾಖಲೆಗಳು: ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಕಡಿಮೆ ಇರುವ ಆದಾಯ ಪ್ರಮಾಣ ಪತ್ರ, ಸ್ವಯಂ ಘೋಷಣಾ ಪತ್ರ, ಆಧಾರ್ ಕಾರ್ಡ್ ಮತ್ತು ಹಳೆಯ ರೇಷನ್ ಕಾರ್ಡ್ ಪ್ರತಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

BPL to APL Card ಬಿಪಿಎಲ್ ಕಾರ್ಡ್ ಹೊಂದಲು ಇರಬಾರದು ಅನರ್ಹತೆಗಳು:

ಕುಟುಂಬದ ಸದಸ್ಯರು ಆದಾಯ ತೆರಿಗೆ ಪಾವತಿದಾರರಾಗಿರಬಾರದು.

ಸರ್ಕಾರಿ ಅಥವಾ ಅನುದಾನಿತ ಸಂಸ್ಥೆಗಳಲ್ಲಿ ಕಾಯಂ ಉದ್ಯೋಗಿಯಾಗಿರಬಾರದು.

ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚಿರಬಾರದು.

ಗ್ರಾಮೀಣ ಭಾಗದಲ್ಲಿ 7.5 ಎಕರೆಗಿಂತ ಹೆಚ್ಚು ಒಣ ಭೂಮಿ ಇರಬಾರದು.

ಸ್ವಂತ ಬಳಕೆಯ ನಾಲ್ಕು ಚಕ್ರದ ವಾಹನ ಹೊಂದಿರಬಾರದು (ವಾಣಿಜ್ಯ ವಾಹನ ಹೊರತುಪಡಿಸಿ).

ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ದೊಡ್ಡದಾದ ಪಕ್ಕಾ ಮನೆ ಇರಬಾರದು.

[su_quote]ನಮ್ಮ ಬಿಪಿಎಲ್ ಕಾರ್ಡ್ ಈಗ ಎಪಿಎಲ್ ಆಗಿ ಬದಲಾಗಿದೆ. ನಾವು ಅರ್ಹರಾಗಿದ್ದರೂ ಕೆಲವು ತಾಂತ್ರಿಕ ಕಾರಣಗಳಿಂದ ಈ ಬದಲಾವಣೆಯಾಗಿದೆ.ಈಗ ಮರು-ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದೇವೆ, ಆದರೆ ಅಲ್ಲಿಯವರೆಗೆ ಯಾವುದೇ ಸರ್ಕಾರಿ ಸೌಲಭ್ಯ ಸಿಗದೆ ಪರದಾಡುತ್ತಿದ್ದೇವೆ. 

ತೀರ್ಥಹಳ್ಳಿ ವಿಶಾಲ್[/su_quote]

BPL to APL Card How to Re-apply in Karnataka

ವರದಿ : ಪ್ರತಾಪ್​​ ತೀರ್ಥಹಳ್ಳಿ

BPL to APL Card How to Re-apply in Karnataka
BPL to APL Card How to Re-apply in Karnataka
shivamogga car decor sun control house
shivamogga car decor sun control house

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.