Child Abuse ಸೊರಬ: ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರದಲ್ಲಿ ಇಬ್ಬರು ಮಕ್ಕಳು ಜಗಳವಾಡಿದಕ್ಕೆ ಕುಪಿತಗೊಂಡ ಅಂಗನವಾಡಿ ಸಹಾಯಕಿ, ಕಾಸಿದ ಚಾಕುವಿನಿಂದ ಮೂರು ವರ್ಷದ ಮಗುವಿನ ಗಲ್ಲಕ್ಕೆ ಬರೆ ಹಾಕಿರುವ ಅಮಾನವೀಯ ಘಟನೆ ನಿನ್ನೆ ನಡೆದಿದೆ.
ಗುರುವಾರ ಬೆಳಿಗ್ಗೆ ಎಂದಿನಂತೆ ಮಕ್ಕಳು ಅಂಗನವಾಡಿಗೆ ಹಾಜರಾಗಿದ್ದರು. ಈ ವೇಳೆ ಇಬ್ಬರು ಮಕ್ಕಳು ಜಗಳವಾಡಿಕೊಂಡಿದ್ದಾರೆ.ಎನ್ನಲಾಗಿದೆ. ಇದರಿಂದ ಕೋಪಗೊಂಡ ಅಂಗನವಾಡಿ ಸಹಾಯಕಿ, ಮಗುವಿಗೆ ಶಿಕ್ಷೆ ನೀಡುವ ನೆಪದಲ್ಲಿ ಕಾಯಿಸಿದ ಚಾಕುವಿನಿಂದ ಮಗುವಿನ ಗಲ್ಲದ ಮೇಲೆ ಬರೆ ಹಾಕಿದ್ದಾರೆ. ಇದರಿಂದ ಮಗುವಿನ ಗಲ್ಲದ ಭಾಗ ಸುಟ್ಟಿದೆ.
ಘಟನೆಯ ನಂತರ ನೋವಿನಿಂದ ಅಳುತ್ತಿದ್ದ ಮಗುವನ್ನು ಕೂಡಲೇ ಪೋಷಕರು ಸೊರಬ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಈ ಘಟನೆ ಸಂಬಂಧ ಮಗುವಿನ ಪೋಷಕರು ಸೊರಬ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ.
