ಸಾಗರ ಪೇಟೆಯ ಗಣಪತಿ ಕೆರೆ ಹತ್ರ ನಿನ್ನೆ ಮತ್ತೊಂದು ಅವಗಢ ಸಂಭವಿಸಿದೆ. ಬೆಂಗಳೂರು-ಹೊನ್ನಾವರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಗಣಪತಿ ಕೆರೆ ಸಮೀಪ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದ ಸಂದರ್ಭದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ನೇರವಾಗಿ ಚರಂಡಿಗೆ ಉರುಳಿದೆ. ಶಿವಮೊಗ್ಗದಿಂದ ಶಿರಸಿ ಕಡೆಗೆ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ.
ಚರಂಡಿಗೆ ಉರುಳಿದ ಕಾರು
ರಸ್ತೆ ಅಗಲೀಕರಣ ಕೆಲಸ ನಡೆಯುತ್ತಿರುವ ಈ ಭಾಗದಲ್ಲಿ ವಾಹನಗಳು ಅಪಘಾತಕ್ಕೀಡಾಗುತ್ತಲೇ ಇವೆ. ಇದಕ್ಕೆ ನಿನ್ನೆಯ ಘಟನೆ ಹೊಸದೊಂದು ಉದಾಹರಣೆಯಾಗಿದೆ. ನಿನ್ನೆಯ ಘಟನೆಗೆ ಹಳೆಯ ವಿದ್ಯುತ್ ಕಂಬಗಳನ್ನು ತೆರವುಗೊಳಿಸದಿರುವುದೇ ಕಾರಣ ಎನ್ನಲಾಗುತ್ತಿದೆ. ಇನ್ನೂ ಘಟನೆಯಲ್ಲಿ ಕಾರು ಪಲ್ಟಿಯಾಗಿ ಜಖಂಗೊಂಡಿದೆ.
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News
🔔 Breaking News Alerts
ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.