ಆ್ಯಪ್​ನಲ್ಲಿ ಪರಿಚಯವಾದ ಹುಡುಗನ ವಿರುದ್ದ ಯುವತಿ ದೂರು, ಕಾರಣವೇನು

ಶಿವಮೊಗ್ಗ : ಮದುವೆಯಾಗು ಆ್ಯಪ್​​ ಒಂದರಲ್ಲಿ ಪರಿಚಯವಾದ ಹುಡುಗ ಕಿರುಕುಳ ಮದುವೆಯಾಗುವಂತೆ ಪೀಡಿಸುತ್ತಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬರು 112 ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಶಿವಮೊಗ್ಗ: ಏಪ್ರಿಲ್ 15 ರಂದು ನಗರದ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಈ ಘಟನೆ  ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಯುವತಿಗೆ  ಮದುವಗೆ ಸಂಬಂಧಿಸಿದ ಆಪ್​ನಲ್ಲಿ ಯುವಕನೊಬ್ಬನ ಪರಿಚಯವಾಗಿದೆ. ಆದರೆ ಯುವತಿಗೆ ಆತನನ್ನು ಮದುವೆಯಾಗಲು ಇಷ್ಟವಿಲ್ಲದಿದ್ದರೂ ಸಹ ಆತ ತನ್ನನ್ನು ಮದುವೆಯಾಗು ಎಂದು ಯುವತಿಗೆ ಪೀಡಿಸಿದ್ದಾನೆ ಎನ್ನಲಾಗಿದೆ.

ಇದರಿಂದ ಬೇಸತ್ತ ಯುವತಿ ಕೂಡಲೇ 112 ಪೊಲೀಸ್​​ ಸಿಬ್ಬಂದಿಗೆ ಫೋನ್​ ಮಾಡಿ ದೂರನ್ನು ನೀಡಿದ್ದಾರೆ. ಕೂಡಲೇ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಯುವತಿಯ ಬಳಿ ಯುವಕನ ಬಗ್ಗೆ ವಿಚಾರಿಸಿದ್ದು, ಯುವತಿಗೆ ಪೊಲೀಸ್​ ಠಾಣೆಗೆ ಬಂದು ದೂರು ನೀಡುವಂತೆ ಸೂಚಿಸಿದ್ದಾರೆ.

Shivamogga Harassment Case via Matrimonial App

Shivamogga Harassment Case via Matrimonial App
Shivamogga Harassment Case via Matrimonial App
shivamogga car decor sun control house
shivamogga car decor sun control house